janadhvani

Kannada Online News Paper

ಸೌದಿ ನೇರ ಪ್ರಯಾಣ ಅನುಮತಿಸಿದೆ ಆದರೆ, ಮೋದಿ ಸರ್ಕಾರ ಬಿಡಲ್ಲ- ವಲಸಿಗರ ಆಕ್ರೋಶ

ವಲಸಿಗ ಸಮುದಾಯ ಪದೇ ಪದೇ ವಿನಂತಿಸಿದರೂ, ಸೌದಿ ಅರೇಬಿಯಾದೊಂದಿಗೆ ಏರ್ ಬಬಲ್ ಒಪ್ಪಂದಕ್ಕೆ ಪ್ರವೇಶಿಸಲು ಮೋದಿ ಸರ್ಕಾರಕ್ಕೆ ಇಷ್ಟವಿರಲಿಲ್ಲ.

ಜಿದ್ದಾ| ಸೌದಿ ಅರೇಬಿಯಾ ಅನುಮತಿ ನೀಡಿದ್ದರೂ, ಭಾರತದಿಂದ ಸೌದಿ ಅರೇಬಿಯಾಗೆ ನೇರ ವಿಮಾನವನ್ನು ಅನುಮತಿಸದ ಕೇಂದ್ರದ ಮೋದಿ ಸರ್ಕಾರದ ನಿಲುವು ಖಂಡನೀಯವಾಗಿದೆ ಎಂದು ICF ಸೌದಿ ರಾಷ್ಟ್ರೀಯ ಸಮಿತಿ ಹೇಳಿದೆ.

ಕೋವಿಡ್ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸ್ಥಗಿತಗೊಂಡಿದ್ದ ವಿಮಾನ ಸೇವೆಗಳನ್ನು ಡಿಸೆಂಬರ್ 1 ರಿಂದ ಪುನರಾರಂಭಿಸಲು ಸೌದಿ ಸರಕಾರ ನಿರ್ಧರಿಸಿದೆ. ವರ್ಷಗಳಿಂದ ಕಂಗಾಲಾಗಿದ್ದ ಸೌದಿ ವಲಸಿಗರು ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ.

ಆದರೆ GCC ಯಲ್ಲಿ ಸೌದಿ ಅರೇಬಿಯಾವನ್ನು ಹೊರತುಪಡಿಸಿ ಎಲ್ಲಾ ದೇಶಗಳು ಸಹಿತ 99 ದೇಶಗಳ ಜನರಿಗೆ ಕ್ವಾರಂಟೈನ್ ಕಾರ್ಯವಿಧಾನಗಳ ಮೇಲೆ ರಿಯಾಯಿತಿಗಳನ್ನು ನೀಡಿರುವ ಮೋದಿ ಸರ್ಕಾರವು, ಸೌದಿಯಿಂದ ಆಗಮಿಸುವವರಿಗೆ ಕ್ವಾರಂಟೈನ್‌ಗೆ ಬದ್ಧವಾಗಿರುವಂತೆ ಕೇಳುತ್ತಿದೆ. ಇದು ಯಾವುದೋ ಹಿಡನ್ ಅಜೆಂಡಾಗಳ ಭಾಗವಾಗಿದೆ ಎಂಬ ಅನುಮಾನವಿದೆ ಎಂದು ICF ಸೌದಿ ರಾಷ್ಟ್ರೀಯ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ.

ವಲಸಿಗ ಸಮುದಾಯ ಪದೇ ಪದೇ ವಿನಂತಿಸಿದರೂ, ಸೌದಿ ಅರೇಬಿಯಾದೊಂದಿಗೆ ಏರ್ ಬಬಲ್ ಒಪ್ಪಂದಕ್ಕೆ ಪ್ರವೇಶಿಸಲು ಮೋದಿ ಸರ್ಕಾರಕ್ಕೆ ಇಷ್ಟವಿರಲಿಲ್ಲ.

ತನ್ನ ದೇಶದಲ್ಲಿನ ಸ್ವಂತ ನಾಗರಿಕರಿಗೆ ಆಹಾರ ಮತ್ತು ಉದ್ಯೋಗವನ್ನು ನೀಡಲು ಈ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲವೆಂದು ಮಾತ್ರವಲ್ಲ, ವಿದೇಶದಲ್ಲಿ ಕೆಲಸ ಮಾಡುವವರೊಂದಿಗೆ ಮಾನವೀಯತೆಯನ್ನೂ ತೋರಿಸುತ್ತಿಲ್ಲ ಎಂದು ICF, ಮೋದಿ ಸರ್ಕಾರವನ್ನು ದೂಷಿಸಿದೆ.

ಸಯ್ಯಿದ್ ಹಬೀಬ್ ಅಲ್ ಬುಖಾರಿ ಅಧ್ಯಕ್ಷತೆ ವಹಿಸಿದ್ದರು. ಬಶೀರ್ ಎರ್ನಾಕುಳಂ, ನಿಝಾರ್ ಕಾಟ್ಟಿಲ್, ಬಶೀರ್ ಉಳ್ಳನಂ, ಸಲೀಂ ಪಾಲಚ್ಚಿರ, ಝುಬೈರ್ ಸಖಾಫಿ, ಉಮರ್ ಸಖಾಫಿ ಮೂರ್ಕನಾಡ್, ಹುಸನಲಿ ಕಡಲುಂಡಿ ಮುಂತಾದವರು ಭಾಗವಹಿಸಿದ್ದರು. ಸಿರಾಜ್ ಕುಟ್ಯಾಡಿ ಸ್ವಾಗತಿಸಿ, ಮುಹಮ್ಮದಲಿ ವೇಂಗರ ವಂದಿಸಿದರು.

error: Content is protected !! Not allowed copy content from janadhvani.com