ದುಬೈ: ಯುಎಇಯಲ್ಲಿ ಕೆಲಸದಿಂದ ನಿವೃತ್ತರಾಗುವ ವಲಸಿಗರಿಗೆ ದೇಶದಲ್ಲಿ ಉಳಿಯಲು ಹೊಸ ವೀಸಾವನ್ನು ಘೋಷಿಸಲಾಗಿದೆ. ಸಂಪುಟ ಸಭೆಯ ನಂತರ ಪ್ರಧಾನಿ ಶೈಖ್ ಮುಹಮ್ಮದ್ ಬಿನ್ ರಾಶಿದ್ ಆಲ್ ಮಕ್ತೂಮ್ ಅವರು ಈ ಘೋಷಣೆ ಮಾಡಿದರು. ಯುಎಇ ರಸ್ತೆಗಳಲ್ಲಿ ಚಾಲಕ ರಹಿತ ವಾಹನಗಳ ಪರೀಕ್ಷೆಗೂ ಕ್ಯಾಬಿನೆಟ್ ಅನುಮೋದನೆ ನೀಡಿದೆ.
ಪ್ರಸ್ತುತ, ವಯಸ್ಸಿನ ಮಿತಿಯಿಂದ ಕೆಲಸದಿಂದ ನಿವೃತ್ತರಾಗುವವರು ಯುಎಇಯಿಂದ ಊರಿಗೆ ಮರಳಬೇಕಾಗಿತ್ತು. ಮತ್ತೊಂದು ಕೆಲಸದ ವೀಸಾಕ್ಕೆ ಬದಲಾಯಿಸಲು ಅನುಮತಿ ಪಡೆಯುವುದು ಸಹ ಅವರಿಗೆ ಕಷ್ಟಕರವಾಗಿತ್ತು. ಆದರೆ, ಹೊಸ ವೀಸಾ ಯೋಜನೆಯು ನಿವೃತ್ತಿ ಹೊಂದಿದವರಿಗೆ ಯುಎಇಯಲ್ಲಿ ಉಳಿಯಲು ಅನುವು ಮಾಡಿಕೊಡುತ್ತದೆ ಎಂದು ಪ್ರಧಾನಿ ಶೈಖ್ ಮುಹಮ್ಮದ್ ಟ್ವೀಟ್ ಮಾಡಿದ್ದಾರೆ.
ಆದರೆ ವೀಸಾ ಪಡೆಯುವ ಮಾನದಂಡ ಮತ್ತು ಅರ್ಹತೆಯನ್ನು ಪ್ರಕಟಿಸಿಲ್ಲ. ಈ ವಿವರಗಳು ಮುಂದಿನ ದಿನಗಳಲ್ಲಿ ಹೊರಬರುವ ನಿರೀಕ್ಷೆಯಿದೆ.
ಯುಎಇ ರಸ್ತೆಗಳಲ್ಲಿ ಚಾಲಕ ರಹಿತ ವಾಹನಗಳ ಪರೀಕ್ಷೆಗೂ ಸಂಪುಟ ಅನುಮೋದನೆ ನೀಡಿದೆ. ಇದರೊಂದಿಗೆ ಯುಎಇ, ರಸ್ತೆಯಲ್ಲಿ ಚಾಲಕ ರಹಿತ ವಾಹನವನ್ನು ಪರೀಕ್ಷಿಸಿದ ವಿಶ್ವದ ಎರಡನೇ ರಾಷ್ಟ್ರವಾಗಲಿದೆ. ದುಬೈ ಎಕ್ಸ್ಪೋದಲ್ಲಿ ಯುಎಇ ಪೆವಿಲಿಯನ್ನಲ್ಲಿ ಇಂದು ಸಂಪುಟ ಸಭೆ ನಡೆಯಿತು.
















ಇನ್ನಷ್ಟು ಸುದ್ದಿಗಳು
ಉಮ್ರಾ ಯಾತ್ರೆಗೆ ತೆರಳಿದ ನಿಟ್ಟೆ ಅಬ್ದುರ್ರಝ್ಝಾಖ್ ಮದನಿ: ಮದ್ರಸ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ
ನಾಳೆ ಕುದುಂಬ್ಲಾಡಿಯಲ್ಲಿ ಮರ್ಹಬಾ ಯಾ ರಬೀಅ್, ತ್ರೈಮಾಸಿಕ ಜಲಾಲಿಯ್ಯಾ ಮಜ್ಲಿಸ್ ಹಾಗೂ ಅನುಸ್ಮರಣಾ ಸಂಗಮ
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ