ಕುವೈತ್ಸಿಟಿ: ಭಾರತದಿಂದ ಕುವೈತ್ಗೆ ನೇರ ವಿಮಾನಗಳು ಇಂದಿನಿಂದ ಆರಂಭಗೊಂಡಿದೆ. ಏರ್ ಇಂಡಿಯಾ ಎಕ್ಸ್ ಪ್ರೆಸ್ ಸೇರಿದಂತೆ ವಿಮಾನಯಾನ ಸಂಸ್ಥೆಗಳು ಟಿಕೆಟ್ ಬುಕಿಂಗ್ ಆರಂಭಿಸಿದ್ದು, ಮೊದಲ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ ಇಂದು ಕೊಚ್ಚಿಯಿಂದ ಹೊರಟಿದೆ.
ಏರ್ ಇಂಡಿಯಾ ಎಕ್ಸ್ ಪ್ರೆಸ್ ಕೇರಳದಿಂದ ವಾರಕ್ಕೆ 5 ಸೇವೆಗಳನ್ನು ನಿಗದಿಪಡಿಸಿದೆ. ಮಂಗಳವಾರ ಮತ್ತು ಗುರುವಾರದಂದು ಕೊಚ್ಚಿಯಿಂದ ಮತ್ತು ಬುಧವಾರ, ಶುಕ್ರವಾರ ಹಾಗೂ ಸೋಮವಾರದಂದು ಕೋಝಿಕೋಡ್ ನಿಂದ ಸೇವೆಗಳು ಲಭ್ಯವಿವೆ. ಟಿಕೆಟ್ಗಳು 250 ದಿನಾರ್ಗಳಿಂದ ಆರಂಭ. ಬುಕಿಂಗ್ ಆರಂಭಿಸಿದ ಕೆಲವೇ ನಿಮಿಷಗಳಲ್ಲಿ ಟಿಕೆಟ್ ಗಳು ಖಾಲಿಯಾದವು.
ಕುವೈತ್ ಏರ್ವೇಸ್ ಕೂಡ ಚೆನ್ನೈನಿಂದ ಕುವೈತ್ ಗೆ ಇಂದು ವಿಮಾನ ಹಾರಾಟ ನಡೆಸಲಿದೆ. ಕುವೈತ್ ಏರ್ವೇಸ್ ಬುಧವಾರ ಮತ್ತು ಗುರುವಾರ ಕೊಚ್ಚಿ ಮತ್ತು ದೆಹಲಿಯಿಂದ ವಿಮಾನ ಹಾರಾಟ ನಡೆಸಲಿದೆ.
ಭಾರತದಿಂದ ಪ್ರತಿದಿನ 768 ಸೀಟುಗಳನ್ನು ಹಂಚಲಾಗುತ್ತದೆ. ಇದರ ಅರ್ಧ ಭಾಗವನ್ನು ಕುವೈತ್ ಏರ್ವೇಸ್ ಮತ್ತು ಜಜೀರಾ ಏರ್ವೇಸ್ ಹಂಚಿಕೊಳ್ಳಲಿದೆ. 50 ರಷ್ಟು ಸೀಟುಗಳನ್ನು ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ಮೀಸಲಿಡಲಾಗಿದೆ.
















ಇನ್ನಷ್ಟು ಸುದ್ದಿಗಳು
ದುಬೈ-ಇಸ್ರೇಲ್ ವಿಮಾನದಲ್ಲಿ ಪೈಲಟ್ಗಳ ನಡುವೆ ಸಂಘರ್ಷ : ಸೌದಿಯಲ್ಲಿ ತುರ್ತು ಭೂಸ್ಪರ್ಶ
ಮಂಗಳೂರಿನ MRPL ಘಟಕದಲ್ಲಿ ಭಾರೀ ಸ್ಫೋಟ: ದಟ್ಟ ಹೊಗೆ, ಸುತ್ತಮುತ್ತಲಿನ ಮನೆಗಳಿಗೆ ಹಾನಿ- ಹಲವರಿಗೆ ಗಾಯ
ಅಣು-ವಿಕಿರಣ ಸೋರಿಕೆಯಾದರೆ ಏನು ಮಾಡಬೇಕು?; ಜಾಗರೂಕತೆಯ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದ CDAA
ಗಂಟೆಗಟ್ಟಲೆ ರೀಲ್ಸ್ ಸ್ಕ್ರೋಲಿಂಗ್- ದೇಹದ ಮೇಲೆ ಪರಿಣಾಮ!
ಒಮಾನ್:ಕಾರ್ಮಿಕ ಕಾಯ್ದೆ ಉಲ್ಲಂಘನೆ ವಿರುದ್ಧ ಕಠಿಣ ಕ್ರಮ- ಫೀಲ್ಡ್ ತಪಾಸಣೆಗೆ ಮುಂದಾದ ಕಾರ್ಮಿಕ ಸಚಿವಾಲಯ
ರಸ್ತೆ ಬದಿಯ ಪೈಪ್ ಸರಿಪಡಿಸಿದ ಭಾರತೀಯ ಡೆಲಿವರಿ ಯುವಕ – ದುಬೈ ಸರ್ಕಾರದ ಗೌರವ
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಸಪ್ಟೆಂಬರ್-17 : ಉಪ್ಪಿನಂಗಡಿಯಲ್ಲಿ ಬೃಹತ್ ಮೀಲಾದ್ ರ್ಯಾಲಿ ಹಾಗೂ ಕಾನ್ಫರೆನ್ಸ್
SIR ನೋಟೀಸ್ ಗೊಂದಲ: ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಪರಿಹಾರ- ಉಸ್ತುವಾರಿ ಸಚಿವರಿಂದ ಭರವಸೆ
ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿ; 73 ನಾಗರಿಕರಿಗೆ ಗಾಯ