ಬೆಳಂದೂರು ನೂರುಲ್ ಹುದಾ ಮದರಸ ವಿದ್ಯಾರ್ಥಿಗಳಿಗೆ ATC ಅಬ್ದುಲ್ ಕರೀಂ ಹಾಜಿ ಕಾಣಿಯೂರು ಹಾಗೂ ಮಾಮು ಬೆಳಂದೂರು ರವರು ಸೇರಿ ಮದರಸ ವಿದ್ಯಾರ್ಥಿಗಳಿಗೆ 9000 ಸಾವಿರ ರೂಪಾಯಿ ಖರ್ಚಿನಿಂದ ಉಚಿತ ಪಾಠ ಪುಸ್ತಕ ವಿತರಣೆ ಕಾರ್ಯಕ್ರಮ ದಿನಾಂಕ 23/06/2021 ಬುಧವಾರ ನೂರುಲ್ ಹುದಾ ಮದರಸ ಹಾಳಿನಲ್ಲಿ ನಡೆಯಿತು.
ತಖ್ವಾ ಮಸೀದಿ ಇಮಾಮ್ ಅಬ್ದುಲ್ ಹಮೀದ್ ಸಖಾಫಿಯವರು ಸ್ವಾಗತ ಮಾಡಿದ ಕಾರ್ಯಕ್ರಮದ ಉದ್ಘಾಟನೆಯನ್ನು ಯುಸುಫ್ ಸಖಾಫಿ ಬೆಳಂದೂರು ನೆರವೆರಿಸದರು.
ಅಬ್ದುಲ್ ಕರೀಂ ಹಾಜಿಯವರು ಉಚಿತ ಪಾಠ ಪುಸ್ತಕ ವಿತರಣೆಗೆ ಚಾಲನೆ ನೀಡಿದರು. ತಖ್ವಾ ಮಸೀದಿ ಆಡಳಿತ ಮಂಡಳಿ ನೇತಾರರಾದ ಮಾಮು ಬೆಳಂದೂರು,ಯುವ ಉದ್ಯಮಿ. ಹಾಗೂ ತಖ್ವಾ ಮಸೀದಿ ಅಧ್ಯಕ್ಷರಾದ ಅಬ್ಬಾಸ್ ಬೆಳಂದೂರು,ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ನಡುಗುಡ್ಡೆ,ಉಸ್ಮಾನ್ ಸುರುಳಿ ಮಜಲು,ಮುಹಮ್ಮದ್ ಇಟ್ಟಿಯಡ್ಕ,ಅಬ್ಬಾಸ್ ಕಲ್ಪಡ,ಮುಂತಾದ ಹಲವು ನಾಯಕರು ವಿದ್ಯಾರ್ಥಿಗಳಿಗೆ ಪಾಠ ಪುಸ್ತಕ ವಿತರಣೆ ಮಾಡಿದರು.
ಅಬ್ದುಲ್ ಕರೀಂ ಹಾಜಿ ಹಾಗೂ ಮಾಮು ಬೆಳಂದೂರು ರವರ ಮರಣ ಹೊಂದಿದ ತಾಯಿಯ ಹೆಸರಿನಲ್ಲಿ ದಾನವಾಗಿ ನೀಡಿದ ಮದರಸ ವಿದ್ಯಾರ್ಥಿಗಳ ಉಚಿತ ಪಾಠ ಪುಸ್ತಕ ವಿತರಣೆಯ ನಂತರ ಅವರ ಹೆಸರಿನಲ್ಲಿ ತಹ್ಲೀಲ್ ಹಾಗೂ ದುಆ ಮಜ್ಲಿಸಿಗೆ ಯುಸುಫ್ ಸಖಾಫಿ ನೇತೃತ್ವ ನೀಡಿದರು.
ಕಳೆದ ನಾಲ್ಕು ವರ್ಷಗಳ ಹಿಂದೆ ಊರಿನವರ ಸಹಾಯ ಸಹಕಾರದಿಂದ ನಿರ್ಮಾಣವಾದ ನೂರುಲ್ ಹುದಾ ಮದರಸ 7 ವಿದ್ಯಾರ್ಥಿಗಳಿಂದ ಆರಂಭಗೊಂಡ ಮದರಸ ಇದೀಗ ಸುಮಾರು 36 ವಿದ್ಯಾರ್ಥಿಗಳನ್ನು ಒಳಗೊಂಡು ಉತ್ತಮವಾದ ರೀತಿಯಲ್ಲಿ ಕಾರ್ಯಾಚರಿಸುತ್ತಿದೆ.
ವರದಿ:
ಅಬ್ದುಲ್ ಲತೀಫ್ ಮಿಸ್ಬಾಹಿ
ಬೆಳಂದೂರು