ರಿಯಾದ್: ಕೋವಿಡ್ ಮಹಾಮಾರಿಯ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾ ವಿಧಿಸಿರುವ ಅಂತರರಾಷ್ಟ್ರೀಯ ಪ್ರಯಾಣ ನಿಷೇಧವನ್ನು ಮೇ. 17 ಸೋಮವಾರ ಬೆಳಿಗ್ಗೆ ತೆಗೆದುಹಾಕಿದೆ, ಆದರೆ ಭಾರತ ಸೇರಿದಂತೆ 13 ದೇಶಗಳೊಂದಿಗೆ ಪ್ರಯಾಣ ನಿಷೇಧವನ್ನು ಜಾರಿಯಲ್ಲಿರಿಸಲಾಗಿದೆ.ಈ ದೇಶಗಳಿಗೆ ಸ್ವದೇಶಿಗಳಿಗೆ ಪ್ರಯಾಣವನ್ನು ನಿಷೇಧಿಸಲಾಗಿದೆ. ಭಾರತದ ಜೊತೆಗೆ, ಈ ಪಟ್ಟಿಯಲ್ಲಿ ಲಿಬಿಯಾ, ಸಿರಿಯಾ, ಲೆಬನಾನ್, ಯೆಮೆನ್, ಇರಾನ್, ಟರ್ಕಿ, ಅರ್ಮೇನಿಯಾ, ಸೊಮಾಲಿಯಾ, ಕಾಂಗೋ , ಅಫ್ಘಾನಿಸ್ತಾನ, ವೆನೆಜುವೆಲಾ ಮತ್ತು ಬೆಲಾರಸ್ ಸೇರಿವೆ.
ಕೆಲವು ದೇಶಗಳಲ್ಲಿ ಸಾಂಕ್ರಾಮಿಕ ರೋಗ ಇನ್ನೂ ನಿಯಂತ್ರಣದಲ್ಲಿಲ್ಲದ ಕಾರಣ, ಮತ್ತು ಕೆಲವು ಪ್ರದೇಶಗಳಲ್ಲಿ ವೈರಸ್ನ ಆನುವಂಶಿಕ ರೂಪಾಂತರಗಳನ್ನು ಗುರುತಿಸಲಾದ ಹಿನ್ನೆಲೆಯಲ್ಲಿ ನಿಷೇಧವು ಜಾರಿಯಲ್ಲಿದೆ ಎಂದು ಸೌದಿ ಆಂತರಿಕ ಸಚಿವಾಲಯ ತಿಳಿಸಿದೆ. ಈ ದೇಶಗಳಿಗೆ ಪ್ರಯಾಣಿಸುವವರು ಪೂರ್ವಾನುಮತಿ ಪಡೆಯಬೇಕು ಎಂದು ಗೃಹ ಸಚಿವಾಲಯ ಒತ್ತಾಯಿಸಿದೆ.
ಅಸ್ಥಿರತೆ ಮುಂದುವರಿದ ಅಥವಾ ವೈರಸ್ ಹರಡುವಿಕೆಗೆ ಸಾಕ್ಷಿಯಾಗುವ ಪ್ರದೇಶಗಳಲ್ಲಿ ಜಾಗರೂಕರಾಗಿರಬೇಕು ಮತ್ತು ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕೆಂದು ಸಚಿವಾಲಯ ಕೇಳಿದೆ.
ಭಾರತೀಯ ವಲಸಿಗರಿಗೆ ಆಸರೆಯಾಗಿರುವ ಯುಎಇಯಿಂದ ಸೌದಿ ಪ್ರಯಾಣ ನಿಷೇಧ ತೆರವುಗೊಳಿಸಲಾಗಿದೆ, ಆದರೆ ಭಾರತದಿಂದ ಸದ್ಯಕ್ಕೆ ಯುಎಇ ಪ್ರಯಾಣ ಅನಿರ್ದಿಷ್ಟಾವಧಿಗೆ ನಿಷೇಧಿಸಲಾಗಿದ್ದು ಅನಿವಾಸಿಗಳನ್ನು ತೀವ್ರ ಸಂಕಷ್ಟಕ್ಕೆ ದೂಡಿದೆ.
















ಇನ್ನಷ್ಟು ಸುದ್ದಿಗಳು
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ