janadhvani

Kannada Online News Paper

ಕರ್ನಾಟಕ ಮುಸ್ಲಿಂ ಜಮಾಅತ್‌ ; ‘ಸಹಾಯ್’ ತುರ್ತು ಸೇವಾ ತಂಡಕ್ಕೆ ಅಧಿಕೃತ ಚಾಲನೆ

ಕರ್ನಾಟಕ ಮುಸ್ಲಿಂ ಜಮಾಅತ್ ಅಧೀನದಲ್ಲಿ ರಾಜ್ಯಾದ್ಯಂತ ಕಾರ್ಯಾಚರಿಸಲಿರುವ ‘ಸಹಾಯ್’ ತುರ್ತು ಸೇವಾ ತಂಡಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಧಿಕೃತ ಚಾಲನೆ ನೀಡಲಾಯಿತು.
ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮದಕ ಪ್ರಾರ್ಥನೆಗೆ ನೇತೃತ್ವ ನೀಡಿದರು.


ಎಸ್.ವೈ.ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಎಮ್ಮೆಸ್ಸೆಂ ಅಬ್ದುರ್ರಶೀದ್ ಝೈನಿ ಖಾಮಿಲ್ ಸಭೆಯನ್ನು ಉದ್ಘಾಟಿಸಿದರು.
ಸಭಾಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಉಪಾಧ್ಯಕ್ಷರಾದ ಮೌಲಾನ ಮುಹಮ್ಮದ್ ಫಾಝಿಲ್ ರಝ್ವಿ ಕಾವಳಕಟ್ಟೆ ಹಝ್ರತ್ ರವರು ‘ಸಹಾಯ್’ ತುರ್ತು ಸೇವಾ ತಂಡದ ಹೆಸರು ಮತ್ತು ಲೋಗೋ ಬಿಡುಗಡೆಗೊಳಿಸಿದರು.
ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಪ್ರಧಾನ ಕಾರ್ಯದರ್ಶಿ ಮೌಲಾನ NKM ಶಾಫಿ ಸ‌ಅದಿ ಬೆಂಗಳೂರು ವಿಷಯ ಮಂಡಿಸಿ, ತುರ್ತು ಸೇವಾ ತಂಡದ ಅನಿವಾರ್ಯತೆ, ಕಾರ್ಯಾಚರಣೆ ಹಾಗೂ ಯೋಜನೆಗಳ ಕುರಿತು ಸಮಗ್ರವಾಗಿ ವಿವರಿಸಿದರು.

ಕೆಸಿಎಫ್ ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಡಿ.ಪಿ.ಯೂಸುಫ್ ಸಖಾಫಿ ಬೈತಾರ್ ರವರು ‘ಸಹಾಯ್’ ಜಿಲ್ಲಾ ತಂಡವನ್ನು ಘೋಷಿಸಿದರು.

ಎಸ್ಸೆಸ್ಸೆಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಇಸ್ಮಾಈಲ್ ಮಾಸ್ಟರ್ ಮರಿಕ್ಕಳರವರು ‘ಸಹಾಯ್’ ತುರ್ತು ಸೇವಾ ತಂಡದ ಸಾಮಾಜಿಕ ಜಾಲತಾಣದ ವಿವಿಧ ಖಾತೆಯನ್ನು ಅನಾವರಣಗೊಳಿಸಿದರು.

ಬೇಕಲ್ ಉಸ್ತಾದರ ಪುತ್ರ ಅಬ್ದುಲ್ ಜಲೀಲ್ ಬ್ರೈಟ್ ತುರ್ತು ಸೇವಾತಂಡದ ಸರ್ಕಲ್ ವಿಭಾಗಕ್ಕೆ PPE ಕಿಟ್ ವಿತರಣೆ ಮಾಡಿದರು.

ಮುಸ್ಲಿಂ ಜಮಾಅತ್ ರಾಜ್ಯ ನಾಯಕರಾದ ಸ್ವಾದಿಖ್ ಮಾಸ್ಟರ್ ಮಲೆಬೆಟ್ಟುರವರು ಮುಸ್ಲಿಮ್ ಜಮಾಅತ್ ತಾಲೂಕು ಸಮಿತಿಗೆ ಕಿಟ್ ವಿತರಣೆ ಮಾಡಿದರು.

‘ಸಹಾಯ್’ ತುರ್ತು ಸೇವಾ ತಂಡವು ಜಿಲ್ಲಾ ವ್ಯಾಪ್ತಿಯಲ್ಲಿ ಹನ್ನೊಂದು ಸರ್ಕಲ್ ಗಳ ಅಧೀನದಲ್ಲಿ ಕಾರ್ಯಾಚರಿಸಲಿದ್ದು, ಆರೋಗ್ಯ, ಸಾಂತ್ವನ‌ ಹಾಗೂ ಇನ್ನಿತರ ತುರ್ತು ಸೇವೆಯಲ್ಲಿ ನಿರಂತರವಾಗಿ ಕಾರ್ಯಾಚರಿಸಲಿದೆ.

ಈ ಸಂದರ್ಭದಲ್ಲಿ ಮುಸ್ಲಿಂ ಜಮಾಅತ್ ರಾಜ್ಯ ನಾಯಕರಾದ ಇಸ್ಮಾಈಲ್ ಸ‌ಅದಿ ಕಿನ್ಯ, ಹಾವೇರಿ ಜಿಲ್ಲಾ ನಾಯಕರಾದ ಬಿ.ಎ.ಇಬ್ರಾಹಿಂ ಸಖಾಫಿ ದಾವಣಗೆರೆ, ಬೆಳ್ತಂಗಡಿ ತಾಲೂಕು ಅಧ್ಯಕ್ಷರಾದ ಎಸ್‌.ಎಂ ಕೋಯ ತಂಙಳ್ ಉಜಿರೆ, ಪುತ್ತೂರು ತಾಲೂಕ್ ಅಧ್ಯಕ್ಷ ಇಸ್ಮಾಈಲ್ ಹಾಜಿ, ಬಂಟ್ವಾಳ ತಾಲೂಕು ಪ್ರಧಾನ ಕಾರ್ಯದರ್ಶಿ ಹಾಜಿ ಅನ್ವರ್ ಗೂಡಿನಬಳಿ ,ಬಶೀರ್ ಹಾಜಿ ಮಿತ್ತಬೈಲ್ ಮುಂತಾದ ಹಲವಾರು ಉಲಮಾ ಉಮರಾ ನಾಯಕರು ಉಪಸ್ಥಿತರಿದ್ದರು.

‘ಸಹಾಯ್’ ತುರ್ತು ಸೇವಾ ತಂಡದ ಜಿಲ್ಲಾ ಕೋಡಿನೇಟರ್ ಸಿರಾಜುದ್ದೀನ್ ಸಖಾಫಿ ಸ್ವಾಗತಿಸಿ, ರಾಜ್ಯ ಕೋಡಿನೇಟರ್ ಅಶ್ರಫ್ ಕಿನಾರ ವಂದಿಸಿದರು

error: Content is protected !! Not allowed copy content from janadhvani.com