ರಿಯಾದ್ :ಮರು ಪ್ರವೇಶ ವೀಸಾ ಅವಧಿ ಮುಗಿದ ನಂತರ ಸೌದಿ ಅರೇಬಿಯಾಕ್ಕೆ ಮರಳಲು ಸಾಧ್ಯವಾಗದ ಅವಲಂಬಿತ ವೀಸಾ ಹೊಂದಿರುವವರು ದೇಶಕ್ಕೆ ಮರಳಲು ಅಡ್ಡಿಯಿಲ್ಲ ಎಂದು ಪಾಸ್ಪೋರ್ಟ್ ಇಲಾಖೆ ತಿಳಿಸಿದೆ. ಅಂತವರಿಗೆ ಹೊಸ ವೀಸಾದಲ್ಲಿ ಮರಳಲು ಅನುಮತಿ ನೀಡಲಾಗುವುದು.
ಕೋವಿಡ್ ಹಿನ್ನೆಲೆಯಲ್ಲಿ ಮನೆಗೆ ತೆರಳಿ, ಸೌದಿಗೆ ಮರಳಲು ಸಾಧ್ಯವಾಗದ ಕುಟುಂಬಗಳಿಗೆ ಸೌದಿಯ ಜವಾಝಾತ್ ನಿರ್ಧಾರವು ಸಮಾಧಾನಕರವಾಗಿದೆ.
ಆದಾಗ್ಯೂ, ಕೆಲಸದ ವೀಸಾದಲ್ಲಿದ್ದವರು ರೀ ಎಂಟ್ರಿ ವೀಸಾದಲ್ಲಿ ತೆರಳಿ ಅವಧಿಯೊಳಗೆ ಸೌದಿಗೆ ಮರಳದೇ ಇದ್ದಲ್ಲಿ ಮೂರು ವರ್ಷಗಳ ಪ್ರವೇಶ ನಿಷೇಧವಿದೆ. ಆದರೆ, ತಮ್ಮ ಹಳೆಯ ಪ್ರಾಯೋಜಕರ ಅಧೀನದಲ್ಲೇ ಹೊಸ ವೀಸಾದಲ್ಲಿ ಮರಳುವುದಕ್ಕೆ ಯಾವುದೇ ಅಡ್ಡಿಯಿಲ್ಲ ಎಂದು ಜವಾಝಾತ್ ಮೂಲಗಳು ತಿಳಿಸಿವೆ.