ನವದೆಹಲಿ, ಮಾರ್ಚ್ 06: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ಹೊಸ ಕೃಷಿ ಕಾನೂನುಗಳ ವಿರುದ್ಧ ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ ರೈತರ ಹೋರಾಟ ನೂರನೇ ದಿನಕ್ಕೆ ತಲುಪಿದೆ.
ಪ್ರತಿಭಟನಾನಿರತ ರೈತ ಸಂಘಗಳು ಮಾರ್ಚ್ 6 ಅನ್ನು ‘ಕಪ್ಪು ದಿನ’ವಾಗಿ ಆಚರಿಸುತ್ತಿದ್ದು, ಕುಂಡ್ಲಿ-ಮನೇಸರ್-ಪಾಲ್ವಾಲ್ (ಕೆಎಂಪಿ) ಎಕ್ಸ್‌ಪ್ರೆಸ್‌ವೇಯನ್ನು ತಡೆಹಿಡಿಯಲಾಗಿದೆ. ಈ ಕುರಿತು ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಎಂಪಿ) ಶುಕ್ರವಾರ ಪ್ರಕಟಿಸಿತ್ತು. ಸರ್ಕಾರ ಮತ್ತು ರೈತ ಸಂಘಗಳ ನಡುವೆ ಒಟ್ಟು 11 ಸುತ್ತಿನ ಮಾತುಕತೆ ನಡೆದಿದ್ದು, ಒಮ್ಮತಕ್ಕೆ ಬರಲು ಸಾಧ್ಯವಾಗಿಲ್ಲ.