ಜ 29 ರಂದು SSF ಸಂತೋಷ್ ನಗರ ಶಾಖೆಯ ಮಹಾಸಭೆ ಅಬ್ದುಲ್ ರಝಾಕ್ ಮದನಿ ಉಸ್ತಾದರ ಅಧ್ಯಕ್ಷತೆಯಲ್ಲಿ ಜರುಗಿತು. ಸಭೆಯಲ್ಲಿ ಆಹ್ಲುಸುನ್ನಲ್ ವಲ್’ಜಮಾಅತಿನ ನೈಜವಾದ ಆದರ್ಶವನ್ನು ಸಂಘದ ಕಾರ್ಯಕರ್ತರಿಗೆ ಭೋಧನೆ ಮಾಡಲಾಯಿತು. ರಫೀಕ್ ಉಸ್ತಾದರ ದುಆದ ಮೂಲಕ ಅಧಿಕೃತವಾಗಿ ಚಾಲನೆ ನೀಡಲಾಯಿತು.
ಸಲಾಹುದ್ದೀನ್ ರವರು ಸ್ವಾಗತ ಭಾಷಣವನ್ನು ನಡೆಸಿ, ಮುಆದ್ದಿನ್ ಉಸ್ತಾದರು ಉದ್ಘಾಟನೆ ಮಾಡಿದರು
ಪ್ರಧಾನ ಕಾರ್ಯದರ್ಶಿ ವಾರ್ಷಿಕ ವರದಿ ಹಾಗೂ ಲೆಕ್ಕ ಪತ್ರ ಮಂಡಿಸಿದರು. ಪ್ರಸ್ತುತ ಪತ್ರವನ್ನು ಸಭೆ ಅಂಗೀಕರಿಸಿ ಹಾಲಿ ಕಮಿಟಿಯನ್ನು ಬರ್ಖಾಸ್ತುಗೊಳಿಸಲಾಯಿತು.
ತೊಕ್ಕೊಟ್ಟು ಸೆಕ್ಟರ್ ಇದರ ಉಪಾಧ್ಯಕ್ಷರಾದ ಅನ್ಸಾರ್ ಅಲೇಕಲ ರವರು ಹೊಸ ಕಮಿಟಿಯನ್ನು ಆರಿಸುವ ಮೇಲುಸ್ತುವಾರಿ ವಹಿಸಿಕೊಂಡರು.
ಮೊದಲಿಗೆ 20 ಎಕ್ಸಿಕ್ಯೂಟಿವ್ ಸದಸ್ಯರನ್ನ ಆರಿಸಿ ಅದರಿಂದ ಸೂಚನೆ ಮತ್ತು ಅನುಮೋದನೆಯ ಮೇರೆಗೆ ಸಂಘದ ಹೊಸ ಕಮಿಟಿಯನ್ನು ರೂಪೀಕರಿಸಲಾಯಿತು.
ಅಧ್ಯಕ್ಷರಾಗಿ ಸಲಾಹುದ್ದೀನ್ ಮುಸ್ಲಿಯಾರ್, ಉಪಾಧ್ಯಕ್ಷರಾಗಿ ಮುನೀರ್, ಪ್ರಧಾನ ಕಾರ್ಯದರ್ಶಿಯಾಗಿ ಝೈನುದ್ದೀನ್, ಜೊತೆ ಕಾರ್ಯದರ್ಶಿಯಾಗಿ ಸುಲ್ತಾನ್, ಕೋಶಾಧಿಕಾರಿಯಾಗಿ ಶಬೀರ್ ಮತ್ತು ಆರು ಕಾರ್ಯದರ್ಶಿಗಳನ್ನು ಆಯ್ಕೆ ಮಾಡುವ ಮೂಲಕ ಹೊಸ ಕಮಿಟಿಯನ್ನು ಜಾರಿಗೆ ತರಲಾಯಿತು.
ಹೊಸ ಕಮಿಟಿಯನ್ನು ಉದ್ದೇಶಿಸಿ ಅಬ್ದುಲ್ ರಝಾಕ್ ಮದನಿ ಉಸ್ತಾದರು ದಿಕ್ಸೂಚಿ ಭಾಷಣವನ್ನು ಮಾಡಿದರು. ಕೊನೆಯಲ್ಲಿ ನಮ್ಮೂರಿನ ಆದ್ಯ ಕಾಲದಿಂದ ಹಿಡಿದು ಇದುವರೆಗೂ ಮರಣ ಹೊಂದಿದ ಎಲ್ಲಾ ನಾಗರಿಕರ ಮೇಲೆ ತಹ್ಲೀಲ್ ಹೇಳಿ ಹದಿಯಾಗಿಸಿ ದುಆ ಮಾಡಲಾಯಿತು.
ವೇದಿಕೆಯಲ್ಲಿ BJM & SJM ಅಧ್ಯಕ್ಷರಾದ ಇಲ್ಯಾಸ್, ಸಂಘಟನೆಯ ಪ್ರಧಾನ ಹಿತೈಶಿಯಾದ ರಹೀಮ್ ರವರು ಉಪಸ್ಥಿತರಿದ್ದರು.