ಮೊಂಟೆಪದವು : ಎಸ್ಸೆಸ್ಸೆಫ್ ಮರಿಕ್ಕಳ ಶಾಖೆಯ ವತಿಯಿಂದ ನಡೆಯುವ ಶೈಖುನಾ ತಾಜುಲ್ ಪುಖಾಹಾಹ್ ಬೇಕಲ್ ಉಸ್ತಾದ್ ಅವರ ಅನುಸ್ಮರಣೆ ಕಾರ್ಯಕ್ರಮದ ಪ್ರಯುಕ್ತ ನಡೆಯುತ್ತಿರುವಂತಹ ಎರಡು ದಿನಗಳ ಧಾರ್ಮಿಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಎಸ್ಸೆಸ್ಸೆಫ್ ಮೋಂಟುಗೋಳಿ ಸೆಕ್ಟರ್ ಕರೆ ನೀಡಿದೆ.
ಇಂದು (ಜ.27)ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯಸಮಿತಿ ಸದಸ್ಯರಾದ ನೌಫಲ್ ಸಖಾಫಿ ಕಳಸ ಹಾಗೂ ನಾಳೆ (ಜ.28) ಎಸ್ಸೆಸ್ಸೆಫ್ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಡಾ.ಫಾರೂಕ್ ನಈಮಿ ಕೊಲ್ಲಂ ಮುಖ್ಯ ಭಾಷಣ ನಡೆಸಲಿದ್ದಾರೆ.
ಪ್ರಸುತ್ತ ಕಾರ್ಯಕ್ರಮಕ್ಕೆ ಸೆಕ್ಟರ್ ವ್ಯಾಪ್ತಿಯ ಎಲ್ಲಾ ಕಾರ್ಯಕರ್ತರು ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಎಸ್ಸೆಸ್ಸೆಫ್ ಮೋಂಟುಗೋಳಿ ಸೆಕ್ಟರ್ ಕರೆ ನೀಡಿದೆ.