ದೋಹಾ: ಖತಾರ್ ವೀಸಾ ಹೊಂದಿರುವವರು ದೇಶಕ್ಕೆ ಮರಳಲು ಅಗತ್ಯವಾದ ಮರು ಪ್ರವೇಶ ಪರವಾನಗಿ ಕಾರ್ಯವಿಧಾನಗಳನ್ನು ಸರ್ಕಾರ ತಿದ್ದುಪಡಿ ಮಾಡಿದೆ. ಪ್ರಸ್ತುತ , ಕತಾರ್ ಪೋರ್ಟಲ್ ವೆಬ್‌ಸೈಟ್‌ನಲ್ಲಿ ನೇರವಾಗಿ ಪ್ರಾಯೋಜಕರು ಅರ್ಜಿ ಸಲ್ಲಿಸಿ ಎರಡು ವಾರಗಳ ಕಾಲ ಕಾಯುವ ಮೂಲಕ ಮಾತ್ರ ಮರು-ಪ್ರವೇಶ ಪರವಾನಗಿ ಲಭ್ಯವಾಗುತ್ತಿತ್ತು.
ಆದರೆ ಇಂದಿನಿಂದ, ಅನಿವಾಸಿಯೊಬ್ಬರು ಕತಾರ್‌ನಿಂದ ಹೊರಟ ಕೂಡಲೇ ಸ್ವಯಂಚಾಲಿತವಾಗಿ ಮರು-ಪ್ರವೇಶ ಪರವಾನಗಿ ಲಭ್ಯವಾಗಲಿದೆ. ಈ ಮರು ಪ್ರವೇಶ ಪರವಾನಗಿಯನ್ನು ಗೃಹ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಎಲ್ಲಿಂದಲಾದರೂ ಡೌನ್‌ಲೋಡ್ ಮಾಡಬಹುದು.
ಆದಾಗ್ಯೂ, ಪ್ರಸ್ತುತ ಕತಾರ್‌ನಲ್ಲಿರುವವರು ಮಾತ್ರ ಈ ರೀತಿಯಲ್ಲಿ ಸ್ವಯಂಚಾಲಿತ ಮರು-ಪ್ರವೇಶ ಪರವಾನಗಿಯನ್ನು ಪಡೆಯಬಹುದು. ಪ್ರಸ್ತುತ, ವಿದೇಶದಲ್ಲಿರುವವರು ಮೊದಲಿನಂತೆ ಕತಾರ್ ಪೋರ್ಟಲ್ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಿ ಕಾಯಬೇಕಾಗುತ್ತದೆ.