ಕುಂದಾಪುರ: ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಸಂಘಟನೆಯನ್ನು ಬಲಿಷ್ಠವಾಗಿ ಕಟ್ಟಲು ಹಾಗೂ ನೂತನ ಜಿಲ್ಲಾ ಸಮಿತಿಗಳ ರಚನೆಗಾಗಿ ರಾಜ್ಯ ನಾಯಕರ ಉತ್ತರ ಕರ್ನಾಟಕ ಜಿಲ್ಲಾ ಸಂಚಾರ VOYAGE-2020ಗೆ ಇಂದು ಕುಂದಾಪುರ ದರ್ಗಾ ಝಿಯಾರತ್‌ನೊಂದಿಗೆ ಚಾಲನೆ ನೀಡಲಾಯಿತು.
ರಾಜ್ಯ ನಾಯಕರ ತಂಡ ಉತ್ತರ ಕನ್ನಡ, ಹಾವೇರಿ, ಗದಗ, ಧಾರವಾಡ, ಬೆಳಗಾವಿ, ಬಾಗಲಕೋಟೆ, ಬಿಜಾಪುರ, ಗುಲ್ಬರ್ಗ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳಿಗೆ ಭೇಟಿ ನೀಡಲಿದೆ.
ರಾಜ್ಯ ಎಸ್ಸೆಸ್ಸೆಫ್ ಪ್ರಭಾರ ಅಧ್ಯಕ್ಷ ಹಾಫಿಝ್ ಸುಫ್ಯಾನ್ ಸಖಾಫಿ, ಪ್ರಧಾನ ಕಾರ್ಯದರ್ಶಿ ಯಾಕೂಬ್ ಮಾಸ್ಟರ್ ಕೊಡಗು, ಕೋಶಾಧಿಕಾರಿ ರವೂಫ್ ಖಾನ್, ಡೆಪ್ಯುಟಿ ಅಧ್ಯಕ್ಷ ಮೌಲಾನಾ ಗುಲಾಂ ಹುಸೈನ್ ನೂರಿ, ಕಾರ್ಯದರ್ಶಿಗಳಾದ ಅಶ್ರಫ್ ಅಮ್ಜದಿ ಉಡುಪಿ, ಮುಸ್ತಫಾ ನಈಮಿ ಹಾವೇರಿ, ನವಾಝ್ ಭಟ್ಕಳ್, ಇಸ್ಮಾಯಿಲ್ ಮಾಸ್ಟರ್ ರಾಜ್ಯ ಸದಸ್ಯರಾದ ಮುಬಶ್ಶಿರ್ ಅಹ್ಸನಿ, ಅಶ್ರಫ್ ಮುಸ್ಲಿಯಾರ್, ಶರೀಫ್ ಕೊಡಗು, ಸಫ್ವಾನ್ ಚಿಕ್ಕಮಗಳೂರು, ಕೊಂಬಾಳಿ ಝುಹ್ರಿ, ಮುನೀರ್ ಸಖಾಫಿ ಉಳ್ಳಾಲ, ರಫೀಕ್ ಮಾಸ್ಟರ್, ಮುನೀರ್ ಮದನಿ ಮೈಸೂರು, ಕಬೀರ್ ಅಮ್ಜದಿ ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ.