ಬೆಳ್ತಂಗಡಿ: ಎಸ್ಸೆಸ್ಸೆಫ್ ಬೆಳ್ತಂಗಡಿ ಡಿವಿಷನ್ ವತಿಯಿಂದ ಲೈಟ್ ಆಫ್ ಖುರ್‌ಆನ್ ಉಪನ್ಯಾಸವು ರಂಝಾನಿನ ಅದಿತ್ಯವಾರ ಗಳಲ್ಲಿ ಆನ್‌ಲೈನ್ ಮೂಲಕ ನಡೆಯಲಿದೆ.
ರಾಜ್ಯ ಸಮಿತಿಯ ಕಾರ್ಯದರ್ಶಿ ಹಾಫೀಲ್ ಯಾಕೂಬು ಸ ಅದಿ ಲೈಟ್ ಆಫ್ ಖುರ್‌ಆನ್ ಉದ್ಘಾಟನಾ ಉಪನ್ಯಾಸವನ್ನು ಇಂದು ಸಂಜೆ 4.30ಕ್ಕೆ ನೆರೆವೇರಿಸಲಿದ್ದಾರೆ. ಡಿವಿಷನ್ ಅದ್ಯಕ್ಷರಾದ ನಝೀರ್ ಮದನಿ ಪುಂಜಾಲಕಟ್ಟೆ ಅಧ್ಯಕ್ಷತೆ ವಹಿಸಲಿದ್ದಾರೆ.ರಂಝಾನ್‌ನ ಪ್ರತಿ ಅದಿತ್ಯವಾರ ವಿವಿಧ ವಿದ್ವಾಂಸರ ತರಗತಿಯು ಟ್ಯೂಬ್ ಚಾನೆಲ್‌ನಲ್ಲಿ ನೇರಪ್ರಸಾರವಾಗಲಿದೆ. ಸಂಘಟನೆಯ ಕಾರ್ಯಕರ್ತರೂ ಸದುಪಯೋಗ ಪಡಿಸಿಕೊಳ್ಳಬೇಕಾಗಿ ಎಸ್ಸೆಸ್ಸೆಫ್ ಬೆಳ್ತಂಗಡಿ ಡಿವಿಷನ್ ಪ್ರಧಾನ ಕಾರ್ಯದರ್ಶಿ ಶರೀಪ್ ಶಾಝ್ ನಾವೂರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.