ನಾಳೆಯಿಂದ (ಸೆಪ್ಟೆಂಬರ್ 18) ರಿಂದ ಜಾರಿಗೆ ಬರುವಂತೆ ಸ್ಟೇಟ್ ಬ್ಯಾಂಕ್ ಹೊಸ ನಿಯಮವನ್ನು ಹೊರಡಿಸಿದೆ. SBI ಖಾತೆ ಹೊಂದಿರುವವರು SBI, ATM ಮೆಷಿನ್ ಮೂಲಕ 10,000 ಅಥವ ಅದಕ್ಕಿಂತ ಅಧಿಕ ಹಣ ಪಡೆಯಲು OTP ಕಡ್ಡಾಯಗೊಳಿಸಿದೆ.
ಗ್ರಾಹಕರು ಬ್ಯಾಂಕ್ ನಲ್ಲಿ ನೊಂದಾವಣೆ ಮಾಡಿದ ಮೊಬೈಲ್ ಸಂಖ್ಯೆಗೆ OTP ಬರಲಿದ್ದು, ಮೆಷಿನ್ ನಲ್ಲಿ ಈ ಸಂಖ್ಯೆಯನ್ನು ಖಚಿತಪಡಿಸಿದರೆ ಮಾತ್ರ ಹಣ ಪಡೆಯಲು ಸಾಧ್ಯ. ಇತ್ತೀಚಿನ ದಿನಗಳಲ್ಲಿ ಎಟಿಎಂ ನಲ್ಲಿ ನಡೆಯುವ ವಂಚನೆ ಪ್ರಕರಣಗಳಿಗೆ ಕಡಿವಾಣ ಹಾಕಲಾಗಿದೆ ಈ ಹೊಸ ನಿಮಯ ಎಂದು ತಿಳಿದುಬಂದಿದೆ.
SBI ಹೊರತುಪಡಿಸಿ ಇತರ ಬ್ಯಾಂಕ್ ಗಳ ATM ಮೂಲಕ ಹಣ ಪಡೆಯುವುದಾದರೆ ಈ ನಿಯಮ ಅನ್ವಯಿಸುವುದಿಲ್ಲ.