janadhvani

Kannada Online News Paper

ಯುಎಇ ಸಂದರ್ಶಕ ವಿಸಾ: ಹೊಸ ನಿಯಮಗಳು ಜಾರಿ- ಬ್ಯಾಂಕ್ ವಿವರ ಕಡ್ಡಾಯ

ದುಬೈ: ಯುಎಇ ಪ್ರವಾಸಿ ಮತ್ತು ಸಂದರ್ಶಕ ವೀಸಾ ನಿಯಮಗಳನ್ನು ಬಿಗಿಗೊಳಿಸುತ್ತದೆ ಈ ನಿಟ್ಟಿನಲ್ಲಿ ಅಧಿಕಾರಿಗಳು ಟ್ರಾವೆಲ್ ಏಜೆನ್ಸಿಗಳಿಗೆ ಹೊಸ ಮಾರ್ಗಸೂಚಿಗಳನ್ನು ನೀಡಿದ್ದಾರೆ. ಆದರೆ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ಈ ಕ್ರಮವು ಕೋವಿಡ್ ರಕ್ಷಣಾ ಕ್ರಮಗಳ ಭಾಗವಾಗಿದೆ ಎಂದು ಹೇಳಲಾಗಿದೆ.

ಪ್ರಸ್ತುತ ರಿಟರ್ನ್ ಟಿಕೆಟ್ ಹೊಂದಿದ್ದರೆ ಯಾರಿಗೆ ಬೇಕಾದರೂ ಪ್ರವಾಸಿ ಅಥವಾ ಸಂದರ್ಶಕ ವೀಸಾದಲ್ಲಿ ದುಬೈಗೆ ಬರುವುದು ಸುಲಭವಾಗಿತ್ತು, ಇದೀಗ ವೀಸಾ ನಿಯಮಗಳಲ್ಲಿ ಕೆಲವು ಹೊಸ ಷರತ್ತುಗಳನ್ನು ಸೇರಿಸಲು ದುಬೈ ವಲಸೆ ಅಧಿಕಾರಿಗಳು ನಿರ್ಧರಿಸಿದ್ದಾರೆ.

ರಿಟರ್ನ್ ಟಿಕೆಟ್‌ ನೊಂದಿಗೆ ಆರು ತಿಂಗಳ ಬ್ಯಾಂಕ್ ಖಾತೆ ವಿವರಗಳು, ಹೋಟೆಲ್ ಕಾಯ್ದಿರಿಸುವಿಕೆ ಅಥವಾ ವಸತಿ ಸೌಕರ್ಯಗಳು, ಜೊತೆಗೆ ನಿಗದಿತ ದಿನಾಂಕದಂದು ಮರಳುವುದಾಗಿ ಅಫಿಡವಿಟ್ ನೀಡಬೇಕಾಗಿದೆ.

ಸಂಬಂಧಿಕರು ಅಥವಾ ಸ್ನೇಹಿತರನ್ನು ಭೇಟಿ ನೀಡುವವರು ಅವರ ಪೂರ್ಣ ವಿವರಗಳನ್ನು ಇತರ ದಾಖಲೆಗಳೊಂದಿಗೆ ಒದಗಿಸಬೇಕು.

ಸಮ್ಮೇಳನ ಮತ್ತು ಪ್ರದರ್ಶನಕ್ಕೆ ಹಾಜರಾಗಲು ಬರುವವರು ಇತರ ದಾಖಲೆಗಳೊಂದಿಗೆ ಆಹ್ವಾನ ಪತ್ರವನ್ನೂ ಹಸ್ತಾಂತರಿಸಬೇಕು.

ಹೊಸ ದುಬೈಗೆ ಪ್ರವಾಸಿಗರಿಗೆ

1. ನಿಗದಿತ ದಿನಾಂಕದಂದು ಮರಳುವ ಬಗ್ಗೆ ಅಫಿಡವಿಟ್

2. ಆರು ತಿಂಗಳ ಬ್ಯಾಂಕ್ ಖಾತೆ ವಿವರಗಳು

3. ಹೋಟೆಲ್ ಕಾಯ್ದಿರಿಸುವಿಕೆ / ವಸತಿ

4. ರಿಟರ್ನ್ ವಿಮಾನ ಟಿಕೆಟ್

ಕುಟುಂಬ / ಸ್ನೇಹಿತರನ್ನು ಭೇಟಿ ಮಾಡಲು

1. ಸಂಬಂಧಪಟ್ಟ ಕುಟುಂಬ ಸದಸ್ಯ / ಸ್ನೇಹಿತನ ವಿಳಾಸ

2. ನಿಗದಿತ ದಿನಾಂಕದಂದು ಮರಳುವ ಬಗ್ಗೆ ಅಫಿಡವಿಟ್

3. ಎಮಿರೇಟ್ಸ್ ಐಡಿಯ ಪ್ರತಿ

4. ಹೋಟೆಲ್ ಕಾಯ್ದಿರಿಸುವಿಕೆ ಅಥವಾ ವಸತಿ

5. ಆರು ತಿಂಗಳ ಬ್ಯಾಂಕ್ ಖಾತೆ ವಿವರಗಳು

6. ರಿಟರ್ನ್ ವಿಮಾನ ಟಿಕೆಟ್

ಸಮ್ಮೇಳನಗಳಲ್ಲಿ ಭಾಗವಹಿಸಲು

1. ನಿಗದಿತ ದಿನಾಂಕದಂದು ಮರಳುವ ಬಗ್ಗೆ ಅಫಿಡವಿಟ್

2. ಹೋಟೆಲ್ ಕಾಯ್ದಿರಿಸುವಿಕೆ /ವಸತಿ

3. ಆಮಂತ್ರಣ ಪ್ರತಿ

4. ಆರು ತಿಂಗಳ ಬ್ಯಾಂಕ್ ವಹಿವಾಟು ವಿವರಗಳು

5. ರಿಟರ್ನ್ ವಿಮಾನ ಟಿಕೆಟ್

ಪ್ರದರ್ಶನ ಉದ್ದೇಶಗಳಿಗಾಗಿ

1. ನಿಗದಿತ ದಿನಾಂಕದಂದು ಮರಳುವ ಬಗ್ಗೆ ಅಫಿಡವಿಟ್

2. ಹೋಟೆಲ್ ಕಾಯ್ದಿರಿಸುವಿಕೆ /ವಸತಿ

3. ಆಹ್ವಾನದ ಪ್ರತಿ

4. ಆರು ತಿಂಗಳ ಬ್ಯಾಂಕ್ ವಿವರಗಳು

5. ರಿಟರ್ನ್ ವಿಮಾನ ಟಿಕೆಟ್

ಸಂದರ್ಶಕ ಮತ್ತು ಪ್ರವಾಸಿ ವೀಸಾ ಹೊಂದಿರುವವರು ವೈದ್ಯಕೀಯ ವಿಮೆಯನ್ನು ಪಡೆಯಬೇಕು ಎಂದು ಈಗಾಗಲೇ ಸೂಚಿಸಲಾಗಿದೆ. ಆದಾಗ್ಯೂ, ಶುಲ್ಕದಲ್ಲಿ ಏನಾದರೂ ಬದಲಾವಣೆಗಳಿವೆಯೇ ಎಂಬುದು ಸ್ಪಷ್ಟವಾಗಿಲ್ಲ. ಹೊಸ ನಿಯಮಗಳು ಯುರೋಪಿಯನ್ ದೇಶಕ್ಕೆ ವೀಸಾಕ್ಕೆ ಅರ್ಜಿ ಸಲ್ಲಿಸುವ ಕಾರ್ಯವಿಧಾನಗಳಿಗೆ ಹೋಲುತ್ತವೆ.

error: Content is protected !! Not allowed copy content from janadhvani.com