janadhvani

Kannada Online News Paper

ಸೆ.15 ರಿಂದ ಸೌದಿಗೆ ಪ್ರವೇಶಾನುಮತಿ- ಜ.1ರಿಂದ ವಿಮಾನಯಾನ ಸಾಮಾನ್ಯ ಸ್ಥಿತಿಗೆ

ರಿಯಾದ್: ದೇಶಕ್ಕೆ ಹಿಂದಿರುಗುವವರಿಗೆ ಮತ್ತು ದೇಶದಿಂದ ಹೊರ ಹೋಗುವವರ ಮೇಲಿನ ಪ್ರಯಾಣ ನಿರ್ಬಂಧವನ್ನು ಸೌದಿ ಅರೇಬಿಯಾ ಸಂಪೂರ್ಣವಾಗಿ ಹಿಂಪಡೆಯಲಿದ್ದು,ಸೆಪ್ಟೆಂಬರ್ 15 ರಿಂದ ನೆಲ, ಜಲ, ವಾಯುಮಾರ್ಗಗಳನ್ನು ಭಾಗಶಃ ತೆರೆಯಲಾಗುವುದು ಎಂದು ಗೃಹ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.ಸಂದರ್ಶಕ , ಕೆಲಸದ ವೀಸಾ ಮತ್ತು ರಜೆಯಲ್ಲಿ ತೆರಳಿದವರು ಅಂದಿನಿಂದ ಸೌದಿ ಅರೇಬಿಯಾವನ್ನು ಪ್ರವೇಶಿಸಬಹುದು.

ಕೋವಿಡ್‌–19 ಹಿನ್ನೆಲೆಯಲ್ಲಿ ಹೇರಲಾಗಿದ್ದ ನಿರ್ಬಂಧಗಳನ್ನು ಸಡಿಲಗೊಳಿಸುವ ಕ್ರಮವಾಗಿ ಈ ನಿರ್ಧಾರಕ್ಕೆ ಬರಲಾಗಿದೆ. ದೇಶಕ್ಕೆ ಪ್ರವೇಶಿಸಲು ಅನುಮತಿ ನೀಡುವ ದಿನಾಂಕವನ್ನು ಜನವರಿ 1 ಕ್ಕಿಂತ 30 ದಿನಗಳ ಮೊದಲು ಮತ್ತೊಮ್ಮೆಘೋಷಿಸಲಾಗುವುದು ಎಂದು ತಿಳಿಸಿದೆ. ಹಂತ ಹಂತವಾಗಿ ಉಮ್ರಾ ಸೇವೆಗಳನ್ನು ತೆರೆಯುವುದಾಗಿ ಸೌದಿ ಗೃಹ ಸಚಿವಾಲಯ ತಿಳಿಸಿದೆ.

ಸರ್ಕಾರಿ ನೌಕರರು, ಸೈನಿಕರು, ಅಧಿಕೃತ ಉದ್ಯೋಗಿಗಳು, ರಾಯಭಾರ ಕಚೇರಿಗಳ ಉದ್ಯೋಗಿಗಳು,ಸೌದಿಯ ಹೊರಗಿನ ಕಂಪನಿಗಳಲ್ಲಿ ಕೆಲಸಮಾಡುವವರು,ಹೊರಗಿನ ದೇಶದಲ್ಲಿ ವ್ಯಾಪಾರ ಮಾಡುವವರು, ಹೊರ ದೇಶದಲ್ಲಿ ಚಿಕಿತ್ಸೆ ಪಡೆಯುತ್ತಿರುವವರು, ಹೊರ ದೇಶದಲ್ಲಿನ ವೈದ್ಯಕೀಯ ವಿದ್ಯಾರ್ಥಿಗಳು, ಕ್ರೀಡಾ ಸ್ಪರ್ಧಿಗಳು, ಸೌದಿ ಅರೇಬಿಯಾದಲ್ಲಿ ವಾಸ ವಿಸಾ ಹೊಂದಿರುವವರು ಮತ್ತು ಅವಲಂಬಿತರು ಮಾತ್ರ ಭಾಗಶಃ ಗಡಿ ತೆರೆಯುವ ಸಮಯದಲ್ಲಿ ಸೌದಿ ಅರೇಬಿಯಾವನ್ನು ಪ್ರವೇಶಿಸಲು ಮತ್ತು ತೆರಳಲು ಅನುಮತಿಸಲಾಗುವುದು.

ಸೌದಿ ಅರೇಬಿಯಾಕ್ಕೆ ಬರುವವರು 48 ಗಂಟೆಗಳ ಒಳಗೆ ಕೋವಿಡ್ ಪರೀಕ್ಷೆಗೆ ಒಳಗಾಗಬೇಕು ಮತ್ತು ರೋಗ ಮುಕ್ತ ಪ್ರಮಾಣಪತ್ರವನ್ನು ಹಾಜರುಪಡಿಸಬೇಕು. ಆದರೆ, ಕೋವಿಡ್ ಪೀಡಿತ ದೇಶಗಳಿಂದ ಸೌದಿಗೆ ಮರಳುವ ಬಗ್ಗೆ ಸಮಿತಿ ತೀರ್ಮಾನಿಸುತ್ತದೆ ಎಂದು ಗೃಹ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

error: Content is protected !! Not allowed copy content from janadhvani.com