ಅರಂತೋಡು: 74ನೇ ಸ್ವಾತಂತ್ರ್ಯ ದಿನಾಚರಣೆ ಮತ್ತು ಫ್ರೀಡಂ ಸ್ಕ್ವೇರ್
ಸುಳ್ಯ: ಅರಂತೋಡು ಎಸ್ ಕೆ ಎಸ್ ಎಸ್ ಎಫ್ ವತಿಯಿಂದ 74 ನೇ ಸ್ವಾತಂತ್ರ್ಯ ದಿನಾಚರಣೆ ಮತ್ತು ಫ್ರೀಡಂ ಸ್ಕ್ವೇರ್ ನ್ನು ಆಚರಿಸಲಾಯಿತು.ಬದ್ರಿಯಾ ಜಮ್ಮಾ ಮಸೀದಿ ಅಧ್ಯಕ್ಷ ರಾದ ಹಾಜಿ ಅಶ್ರಫ್ ಗುಂಡಿ ಧ್ವಜರೋಹಣ ಗೈದರು.
ಮಸೀದಿ ಖತೀಬರಾದ ಅಲ್ ಹಾಜ್ ಇಸ್ಹಾಖ್ ಬಾಖವಿ ದುವಾ ನೇರವೇರಿಸಿ ಮಾತನಾಡಿ ಸ್ವಾತಂತ್ರ್ಯ ದಿನಾಚರಣೆ ದಿನದಂದು ಎಸ್ ಕೆ ಎಸ್ ಎಸ್ ಎಫ್ ಕೇಂದ್ರ ಸಮಿತಿ ನಿರ್ದೇಶನ ಪ್ರಕಾರ ಜಿಲ್ಲಾ ದ್ಯಾಂತ ಫ್ರೀಡಂ ಸ್ಕ್ವೇರ್ ನಡೆಸುತ್ತಿರುವದು ಶ್ಲಾಘನೀಯ .ಸ್ವಾತಂತ್ರ್ಯ ಹೋರಾಟದಲ್ಲಿ ಹೋರಾಡಿದ ವೀರ ಪುರುಷರ ನ್ನು ಸ್ಮರಿಸಬೇಕಾದದ್ದು ಪ್ರತಿ ಭಾರತೀಯ ಪ್ರಜೆಯ ಕರ್ತವ್ಯ ಎಂದು ಹೇಳಿದರು.ಎಸ್ ಕೆ ಎಸ್ ಎಸ್ ಎಫ್ ಅಧ್ಯಕ್ಷ ತಾಜುದ್ದೀನ್ ಅರಂತೋಡು ಅಧ್ಯಕ್ಷತೆ ವಹಿಸಿದರು.
74ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಸಸಿ ನೆಡುವ ಕಾರ್ಯಕ್ರಮ ಅಯೋಜಿಸಲಾಯಿತು. ಕಾರ್ಯದರ್ಶಿ ಮೂಸಾನ್ ಸ್ವಾಗತಿಸಿ ಮಜೀದ್ ವಂದಿಸಿದರು.
ಅರಂತೋಡು ಗ್ರಾಮ ಪಂಚಾಯತ್
ಅರಂತೋಡು ಗ್ರಾಮ ಪಂಚಾಯತ್ ವತಿಯಿಂದ 74ನೇ ಸ್ವಾತಂತ್ರ್ಯ ದಿನಾಚರಣೆ ಯನ್ನು ಆಚರಿಸಲಾಯಿತು .
ಧ್ವಜಾರೋಹಣ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ನೇರವೇರಿಸಿದರು. ಮಾಜಿಗ್ರಾಮ ಪಂಚಾಯತ್ ಉಪಾಧ್ಯಕ್ಷ ಶಿವಾನಂದ ಕುಕ್ಕುಂಬಳ ಸ್ವಾತಂತ್ರ್ಯ ಸೇನಾನಿಗಳ ಸ್ಮರಿಸಿದರು ಮಾಜಿ ಅಧ್ಯಕ್ಷೆ ಲೀಲಾವತಿ ಕೊಡಂಕೇರಿ,ಅರಂತೋಡು ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ನಿರ್ದೇಶಕ ವಿನೋದ್ ಉಳುವಾರು, ಪಂಚಾಯತ್ ಮಾಜಿ ಉಪಾಧ್ಯಕ್ಷ ಅಶ್ರಫ್ ಗುಂಡಿ,ಗ್ರಾಮಕರಣಿಕ ಗಿರಿಜಾಕ್ಷಿ,ಕಿಶೋರ್ ಕುಮಾರ್ ಉಳುವಾರು, ನಿವೃತ ಸೈನಿಕರಾದ ಜನಾರ್ದನ ಇರ್ಣೆ,ಫಸೀಲು ಅರಂತೋಡು,ಹಾಗೂ ಪಂಚಾಯತ್ ಸಿಬ್ಬಂದಿ ಗಳು ಉಪಸ್ಥಿತರಿದ್ದರು .