janadhvani

Kannada Online News Paper

ಡಿ ವೈ ಎಫ್ ಐ ವಿಟ್ಲ ವಲಯ ಸಮಿತಿ ವತಿಯಿಂದ ರಕ್ತದಾನ ಶಿಬಿರ

ವಿಟ್ಲ ಜೂನ್ 14 : ಡಿ.ವೈ.ಎಫ್.ಐ ವಿಟ್ಲ ವಲಯ ಸಮಿತಿ ಹಾಗೂ ಪ್ರಾದೇಶಿಕ ರಕ್ತಪೂರಣ ಕೇಂದ್ರ ವೆನ್ಲಾಕ್ ಆಸ್ಪತ್ರೆ ಮಂಗಳೂರು ಮತ್ತು ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ವಿಟ್ಲ ಸಮುದಾಯ ಆಸ್ಪತ್ರೆ ಯಲ್ಲಿ ರಕ್ತದಾನ ಶಿಬಿರವು ನಡೆಯಿತು. ಗಿಡಕ್ಕೆ ನೀರು ಹಾಕುವುದರ ಮೂಲಕ‌ ಚಾಲನೆ ನೀಡಲಾಯಿತು. ಕಾರ್ಯಕ್ರಮ ಉದ್ಘಾಟಿಸಿ ಜಿಲ್ಲಾ ಕ್ಷಯ ರೋಗ‌ ನಿಯಂತ್ರಣಾಧಿಕಾರಿ ಡಾ.ಬದ್ರುದ್ದೀನ್‌.ಎಂ.ಎನ್‌ ರವರು ಮಾತನಾಡಿ ರಕ್ತ ದಾನ ಮಾಡುವುದರ ಮೂಲಕ ಜನತೆ ಮಾನವೀಯ ಸಂಭಂದಗಳನ್ನು ಗಟ್ಟಿಗೊಳಿಸಲು ಮುಂದಾಗಬೇಕೆಂದು ಕರೆ ನೀಡಿದರು.

ಕಾರ್ಯಕ್ರಮ ದಲ್ಲಿ ಡಿ.ವೈ.ಎಫ್.ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ವಿಟ್ಲ ಆರೋಗ್ಯ ಕೇಂದ್ರದ ವೈಧ್ಯಾಧಿಕಾರಿಗಳಾದ ಡಾ.ವೇದಾವತಿ, ಡಾ.ವಿಶ್ವೇಶ್ವರ ಭಟ್, ಕಾರ್ಮಿಕ ‌ಮುಖಂಡರಾದ ರಾಮಣ್ಣ ವಿಟ್ಲ, ಡಿ.ವೈ.ಎಪ್.ಐ ವಿಟ್ಲ ವಲಯ ಸಮಿತಿ ಮಾರ್ಗದರ್ಶಕರಾದ ಮಹಮ್ಮದ್ ಇಕ್ಬಾಲ್ ಹಳೆಮನೆ, ಡಿ.ವೈ.ಎಫ್.ಐ ಬಂಟ್ವಾಳ ತಾಲೂಕು ಅಧ್ಯಕ್ಷರಾದ ಸುರೇಂದ್ರ ಕೋಟ್ಯಾನ್, ಪ್ರಗತಿಪರ ಬರಹಗಾರರಾದ ಅಬ್ದುಲ್ ಖಾದರ್ ಕುಕ್ಕಾಜೆ, ಸಾಮಾಜಿಕ ಕಾರ್ಯಕರ್ತರಾದ ರಾಜಾ ಚೆಂಡ್ತಿಮಾರ್ ನ್ಯಾಯವಾದಿ ತುಳಸೀದಾಸ್ ವಿಟ್ಲ, ನ್ಯಾಯವಾದಿ ಮಹಮ್ಮದ್ ಗಝಾಲಿ,ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ ಮಂಗಳೂರು ಇದರ ಮುಖ್ಯಸ್ಥ ರಾದ ಮಹೇಶ್, ಯುವ ನಾಯಕರಾದ ವಿ.ಕೆ.ಎಂ ಹಂಝ ಮೇಗಿನ ಪೇಟೆ , ಉದ್ಯಮಿಗಳಾದ ನಿಸಾರ್, ವಿ.ಎಚ್ ಸಾಧಿಕ್ ಬಂಟ್ವಾಳ ಮುಂತಾದವರು ವೇದಿಕೆಯಲ್ಲಿದ್ದರು.
ಅತೀ ಹೆಚ್ಚು ರಕ್ತದಾನ ಮಾಡಿದ ಮಹಮ್ಮದ್ ಇಕ್ಬಾಲ್ ಹಳೆಮನೆ, ಇಕ್ಬಾಲ್ ಕೋಲ್ಪೆ, ಇರ್ಪಾನ್ ಒಕ್ಕೆತ್ತೂರು ಇವರನ್ನು ಜಿಲ್ಲಾ ಏಡ್ಸ್ ನಿಯಂತ್ರಣ ಪ್ರಾಧಿಕಾರದಿಂದ ಸನ್ಮಾನಿಸಲಾಯಿತು. ಹಾಗೂ ಡಿ.ಗ್ರೂಪ್ ವಿಟ್ಲ ಇದರ ಅಂಬ್ಯುಲೆನ್ಸ್ ಚಾಲಕರಾದ ಉಬೈದ್ ಮತ್ತು ಸುಹೈಬ್ ರವರನ್ನು ಡಿ.ವೈ.ಎಫ್.ಐ ವಿಟ್ಲ ವಲಯ ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು.

ಡಿ.ವೈ.ಎಫ್.ಐ ಸಾಯ ಘಟಕದ ಮುಖಂಡರಾದ ಅಶೋಕ್ ಚವರ್ಕಾಡ್ , ಸುರೇಶ್ ಕುಂಞಪಾರೆ, ಯೋಗೀಶ್, ಡಿ.ವೈ.ಎಫ್.ಐ ವಿಟ್ಲ ವಲಯ ಸಮಿತಿ ಅಧ್ಯಕ್ಷರಾದ ನುಜುಂ ಅಳಿಕೆ, ಕಾರ್ಯದರ್ಶಿ ಜಮೀಲ್.ಎಂ,ಕೋಶಾಧಿಕಾರಿ ಆರೀಪ್ ಬಿ.ಕೆ, ಮುಖಂಡರಾದ ಸಪ್ವಾನ್, ತಮೀಮ್, ರಾಘವೇಂದ್ರ, ಶೌಕತ್ ಆಲಿ ಖಾನ್, ಸಲ್ಮಾನ್ ವಿ, ಶಹೀದ್ ಶೈನ್, ಶಮ್ಮಾಸ್ ಮುಂತಾದವರು ಕಾರ್ಯಕ್ರಮ ದ ನೇತೃತ್ವ ವಹಿಸಿದ್ದರು.

ವರದಿ : ಎಂ‌ ಕೆ ತಮೀಮ್ ಕೊಡಂಗಾಯಿ

error: Content is protected !! Not allowed copy content from janadhvani.com