janadhvani

Kannada Online News Paper

ವಂದೇ ಭಾರತ್: ಸಂಕಷ್ಟದಲ್ಲಿದ್ದ ಕನ್ನಡಿಗರ ಪ್ರಯಾಣಕ್ಕೆ ಸೌದಿ ಕೆಸಿಎಫ್ ಸಹಕಾರ

ಜಿದ್ದಾ: ಸೌದಿ ಅರೇಬಿಯಾದಲ್ಲಿ ಸಂಕಷ್ಟದಲ್ಲಿದ್ದ ಭಾರತೀಯರನ್ನು ತಾಯಿನಾಡಿಗೆ ಕರೆತರಲು ಭಾರತ ಸರ್ಕಾರವು ವಂದೇಭಾರತ್ ಮಿಷನ್ ಆರಂಭಿಸಿದ್ದು, ಇದರನ್ವಯ ಜಿದ್ದಾದಿಂದ ಬೆಂಗಳೂರಿಗೆ ಇಂದು ವಿಮಾನ ಹೊರಟಿದೆ.

ಮದೀನಾ, ಮಕ್ಕ, ತ್ವಾಯಿಫ್ ಹಾಗೂ ಜಿದ್ದಾ ಪರಿಸರದಲ್ಲಿರುವ ಅನಿವಾಸಿ ಕನ್ನಡಿಗರಲ್ಲಿ ತುರ್ತಾಗಿ ಊರಿಗೆ ಹೋಗಬೇಕಾದವರನ್ನು ಗುರುತಿಸಿ ಅವರ ಮಾಹಿತಿಯನ್ನು ರಾಯಭಾರಿ ಕಚೇರಿಗೆ ನೀಡಿ ಊರಿಗೆ ಹೋಗಲು ಅವಕಾಶ ಕಲ್ಪಿಸುವಲ್ಲಿ ಕೆಸಿಎಫ್ ಸೌದಿ ಅರೇಬಿಯಾ ಸಮಿತಿಯು ಸಕ್ರಿಯವಾಗಿ ಕಾರ್ಯ ನಿರ್ವಹಿಸಿದೆ.

ಗರ್ಭಿಣಿಯವರು, ಹಿರಿಯರು, ಮಕ್ಕಳು ಹಾಗೂ ಅನಾರೋಗ್ಯದಿಂದಿರುವವರು ಒಟ್ಟು 15 ರಷ್ಟು ಕನ್ನಡಿಗರಿಗೆ ಇವತ್ತಿನ ವಿಮಾನದಲ್ಲಿ ವ್ಯವಸ್ಥೆ ಮಾಡಲಾಗಿದೆ.

ರಾಯಭಾರಿ ವೆಬ್‌ಸೈಟ್ ನಲ್ಲಿ ನೊಂದಾವಣೆ ಮಾಡುವುದರಿಂದ ಹಿಡಿದು ವಿಮಾನ ಜಿದ್ದಾದಿಂದ ಹಾರಾಟ ಆರಂಭಿಸುವಲ್ಲಿಯವರೆಗೆ ಯಾತ್ರಾರ್ಥಿಗಳೊಂದಿಗೆ ಸಂಪರ್ಕದಲ್ಲಿದ್ದು ಅವರಿಗೆ ಬೇಕಾದ ಸಂಪೂರ್ಣ ಮಾಹಿತಿಗಳನ್ನು ನೀಡುತ್ತಿದ್ದ ಸಂಘಟನೆಯ ಈ ಸೇವೆಯನ್ನು ಯಾತ್ರಾರ್ಥಿಗಳು ಹಾಗೂ ಅವರ ಕುಟುಂಬದವರು ಮನದಾಳದಿಂದ ಅಭಿನಂದಿಸಿದ್ದಾರೆ.

error: Content is protected !! Not allowed copy content from janadhvani.com