janadhvani

Kannada Online News Paper

ಪ್ರಾರ್ಥನೆಯೊಂದಿಗೆ ಸೃಷ್ಟಿಕರ್ತನತ್ತ ಹತ್ತಿರವಾಗಿ- ಜಾಗತಿಕ ಪ್ರಾರ್ಥನಾ ಸಮಾವೇಶದಲ್ಲಿ ಎ.ಪಿ.ಉಸ್ತಾದ್

ಅಬುಧಾಬಿ: ಕೋವಿಡ್‌‌ನಿಂದ ಮುಕ್ತಿ ಪಡೆಯುವ ಸಲುವಾಗಿ ವಿಶ್ವಸಂಸ್ಥೆಯ ಸಹಯೋಗದೊಂದಿಗೆ ಅಬುಧಾಬಿ ಯುವರಾಜ ಮತ್ತು ಸಶಸ್ತ್ರ ಪಡೆಗಳ ಕಮಾಂಡರ್-ಇನ್-ಚೀಫ್, ಶೈಖ್ ಮುಹಮ್ಮದ್ ಬಿನ್ ಝಾಯಿದ್ ಆಲ್-ನಹ್ಯಾನ್ ಅವರ ನೇತೃತ್ವದಲ್ಲಿ ನಡೆಸಿದ ಜಾಗತಿಕ ಪ್ರಾರ್ಥನಾ ಸಮಾವೇಶ ಸಮಾಪ್ತಿಗೊಂಡಿದೆ.

ಈ ಕಾರ್ಯಕ್ರಮವನ್ನು ಯುಎಇ ಮಾನವ ಭ್ರಾತೃತ್ವದ ಉನ್ನತ ಸಮಿತಿಯು ಆನ್‌ಲೈನ್‌ನಲ್ಲಿ ಆಯೋಜಿಸಿದೆ. ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್, ಶೈಖುಲ್ ಅಝ್ಹರ್ ಅಹ್ಮದ್ ತ್ವಯ್ಯಿಬ್ ಮತ್ತು ಪೋಪ್ ಫ್ರಾನ್ಸಿಸ್ ನಾಯಕತ್ವದಲ್ಲಿ ಅನೇಕ ವಿಶ್ವ ನಾಯಕರ ಸಹಿತ ಜಾಗತಿಕ ಮಟ್ಟದ ಲಕ್ಷಗಟ್ಟಲೆ ಜನರು ಭಾಗವಹಿಸಿದ್ದರು. ಸ್ನೇಹವನ್ನು ಉತ್ತೇಜಿಸಲು ಪ್ರಾರ್ಥನಾ ವೇದಿಕೆ ಒಂದು ಸ್ಮರಣೀಯ ಅವಕಾಶವಾಗಿದ್ದು ಸಂತೋಷ ನೀಡಿದೆ ಎಂದು ಶೈಖ್ ಅಝ್ಹರ್ ಹೇಳಿದರು.

ಭಾರತೀಯ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಆನ್‌ಲೈನ್ ಸಮ್ಮೇಳನವನ್ನುದ್ದೇಶಿಸಿ ಮಾತನಾಡಿದರು. ನಾವು ಆಧುನಿಕ ಜಗತ್ತು ಎದುರಿಸಿದ ಅತ್ಯಂತ ದುರಂತಕರ ಬಿಕ್ಕಟ್ಟನಿಂದ ನಾವು ಮುಂದೆ ಸಾಗುತ್ತಿದ್ದೇವೆ ಎಂದು ತಿಳಿಸಿದ ಅವರು, ಪ್ರಾರ್ಥನೆಯೊಂದಿಗೆ ಸೃಷ್ಟಿಕರ್ತನತ್ತ ಇನ್ನಷ್ಟು ಹತ್ತಿರವಾಗಿ, ಈ ಸಂದಿಗ್ಧತೆಯಿಂದ ರಕ್ಷಣೆ ಪಡೆಯಲು ಸದಾ ಪ್ರಾರ್ಥಿಸುತ್ತಿರುವಂತೆ ಕಾಂತಪುರಂ ಕರೆ ನೀಡಿದರು.

error: Content is protected !! Not allowed copy content from janadhvani.com