ದೋಹಾ: ಮುಂದಿನ ತಿಂಗಳಲ್ಲಿ ಖತರ್‌ನಿಂದ ಭಾರತದ 12 ಭಾಗಗಳಿಗೆ ವಿಮಾನ ಸೇವೆಯನ್ನು ಪುನರಾರಂಭಿಸಲು ಖತರ್ ಏರ್‌ವೇಸ್ ಸಜ್ಜಾಗಿದೆ.
ಭಾರತದ ಅನುಮತಿ ದೊರೆತ ಕೂಡಲೇ ಮುಂದಿನ ಕ್ರಮ ಕೈಗೊಳ್ಳಲಾಗುವುದು. ವಲಸಿಗರಿಂದ ಹೆಚ್ಚುತ್ತಿರುವ ಬೇಡಿಕೆಯ ಹಿನ್ನೆಲೆಯಲ್ಲಿ ಖತರ್ ಏರ್‌ವೇಸ್ ಈ ಕ್ರಮ ಕೈಗೊಂಡಿದೆ. ಮುಂದಿನ ತಿಂಗಳು ಈ ಸೇವೆಯು ಭಾರತ ಸೇರಿದಂತೆ ವಿಶ್ವಾದ್ಯಂತ 81 ಸ್ಥಳಗಳಿಗೆ ತಲುಪುವ ನಿರೀಕ್ಷೆಯಿದೆ ಎಂದು ಖತರ್ ಏರ್‌ವೇಸ್ ಸಿಇಒ ಅಕ್ಬರ್ ಅಲ್-ಬೆಕಿರ್ ತಿಳಿಸಿದ್ದಾರೆ.
ಆದರೆ, ಭಾರತ ಸೇರಿದಂತೆ ದೇಶಗಳ ಅನುಮೋದನೆ ಲಭಿಸಿದ ಬಳಿಕವಷ್ಟೇ ಟಿಕೆಟ್ ಕಾಯ್ದಿರಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಬಹುದು ಎಂದವರು ತಿಳಿಸಿದರು. ಈ ಸೇವೆಯು ಭಾರತದ 12 ಕೇಂದ್ರಗಳಲ್ಲಿ ಲಭ್ಯವಿರುತ್ತದೆ. ಕೋಝಿಕೋಡ್, ಕೊಚ್ಚಿ ಮತ್ತು ತಿರುವನಂತಪುರಂ, ದೆಹಲಿ, ಅಹಮದಾಬಾದ್, ಅಮೃತಸರ, ಬೆಂಗಳೂರು, ಮುಂಬೈ, ಗೋವಾ, ಕೋಲ್ಕತಾ ಮತ್ತು ಚೆನ್ನೈ ನಗರಗಳಲ್ಲಿ ಈ ಸೇವೆ ಲಭ್ಯವಾಗಲಿದೆ.
ಕೋವಿಡ್‌ನ ಹಿನ್ನೆಲೆಯಲ್ಲಿ ತಮ್ಮ ದೇಶಗಳಿಗೆ ಮರಳಲು ಬಯಸುವ ಹತ್ತು ಲಕ್ಷ ವಲಸಿಗರನ್ನು ವಾಪಸ್ ಕಳುಹಿಸುವ ಗುರಿಯಾಗಿದೆ ಕಂಪನಿಯ ಉದ್ದೇಶ ಎಂದು ಖತರ್ ಏರ್‌ವೇಸ್‌ನ ಸಿಇಒ ತಿಳಿಸಿದ್ದಾರೆ. ಖತರ್ ಏರ್ವೇಸ್ ಪ್ರಸಕ್ತ ಕೇರಳ ಸೇರಿದಂತೆ ಭಾರತದ ವಿವಿಧ ಭಾಗಗಳಿಗೆ ಸರಕು ಸೇವೆಗಳನ್ನು ನಿರ್ವಹಿಸುತ್ತಿದೆ.