ಮಂಗಳೂರು: ಕೊರೋನ ವೈರಸ್ ಹರಡುವುದನ್ನು ತಡೆಯಲು ಸರಕಾರ ಕೈಗೊಂಡ ಲಾಕ್ ಡೌನ್ ಪ್ರಯುಕ್ತ ಸಂಕಷ್ಟದಲ್ಲಿದ್ದ ಕುಟುಂಬದ ಬಗ್ಗೆ ಸಮಾಜ ಸೇವಕರಾದ ಅಶ್ರಫ್ ಕಿನಾರ ಮಂಗಳೂರು ಅವರು ಸಾಮಾಜಿಕ ತಾಣದಲ್ಲಿ ವಾಯ್ಸ್ ಒಂದನ್ನು ಹಂಚಿದ್ದರು.
ಅವರ ವಾಯ್ಸ್ ಗೆ ಸ್ಪಂದಿಸಿ, ಕೊಡುಗೈದಾನಿಯೊಬ್ಬರು ಸಹಾಯ ಹಸ್ತವನ್ನು ಚಾಚಿದ್ದು, ಸಹಾಯದ ಕಿಟ್ ನ್ನು ಅಶ್ರಫ್ ಕಿನಾರ ಅವರ ನೇತೃತ್ವದಲ್ಲಿ, ಸಜೀಪ ಮೂಡ ಹಾಗೂ ಸಜೀಪ ಮುನ್ನೂರು, ಪಂಚಾಯತ್ ವ್ಯಾಪ್ತಿಯಲ್ಲಿ ಕೊಳಕೆ, ಆಲಾಡಿ ಮುನ್ನೂರು ,ನಂದಾವರ ಮತ್ತು ಮೆಲ್ಕಾರ್ ರಂಗೇಲ್ ನಲ್ಲಿ ಅರ್ಹರಾದ 10 ಕುಟುಂಬಗಳಿಗೆ ವಿತರಿಸಲಾಯಿತು.
ಈ ಸಂದರ್ಭದಲ್ಲಿ SYS ನಾಯಕರಾದ ಪಾಣೆ ಮಂಗಳೂರು ಸೆಂಟರ್ MM ಹಮೀದ್ ಹಾಜಿ, ಮುಹಮ್ಮದ್ ರಪೀಕ್, ಸಿದ್ದೀಖ್ ಕೊಐಳಕೆ,ಕೊಳಕೆ ಬ್ರಾಂಚ್ ಪ್ರಧಾನ ಕಾರ್ಯದರ್ಶಿ ಅಲ್ತಾಪ್ ಕೊಳಕೆ ಜೊತೆಯಲ್ಲಿದ್ದರು.
ಸಹಾಯ ಹಸ್ತ ನೀಡಿದ, ಸ್ವೀಕರಿಸಿದ, ಸಹಕರಿಸಿದ ಎಲ್ಲರಿಗೂ ಬರ್ಕತ್ ನೀಡಲಿ ಎಂದು
ಅಶ್ರಫ್ ಕಿನಾರ ಮಂಗಳೂರು( ಕಾರ್ಯದರ್ಶಿ SჄS ಕರ್ನಾಟಕ),(ಕೋ ಆರ್ಡಿನೇಟರ್ ಕರ್ನಾಟಕ ಮುಸ್ಲಿಂ ಜಮಾಅತ್) ಪತ್ರಿಕಾ ಪ್ರಕಟನೆಯಲ್ಲಿ ಆಶಿಸಿದ್ದಾರೆ.