ದುಬೈ: ಯುಎಇಯಿಂದ ವಿವಿಧ ಕಡೆಗೆ ವಿಮಾನಯಾನ ಟಿಕೆಟ್ಗಳ ದರವು ಗಣನೀವಾಗಿ ಕಡಿಮೆಯಾಗಿದೆ. ವಿಮಾನಯಾನ ಸಂಸ್ಥೆಗಳು ಯಾತ್ರೆ ಮೊಟಕುಗೊಳಿಸುವುದಾದರೆ ಟಿಕೆಟ್ ದರವನ್ನು ಹಿಂದಿರುಗಿಸುವುದಕ್ಕೂ ತಯಾರಿದೆ.
ಮಾರ್ಚ್ 13 ರಿಂದ ಮಾರ್ಚ್ 20 ರವರೆಗೆ, ಕೊಚ್ಚಿನ್ಗೆ ತೆರಳುವ ವಿಮಾನ ದರವನ್ನು ಪ್ರಕಟಿಸಿದ್ದು, ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್ಪ್ರೆಸ್ನಲ್ಲಿ ಸರಾಸರಿ 698 ದಿರ್ಹಂ ನಿಗದಿಪಡಿಸಿದೆ. ಎಮಿರೇಟ್ಸ್ ಏರ್ಲೈನ್ ಅದೇ ಪ್ರದೇಶಕ್ಕೆ 895 ಟಿಕೆಟ್ ದರವನ್ನು ಆಫರ್ ಮಾಡಿದೆ. ಮುಂಬೈಗೆ ಟಿಕೆಟ್ 660 ದಿರ್ಹಂ ಆಗಿದ್ದು, ದುಬೈನಿಂದ ಕರಾಚಿಗೂ ಟಿಕೆಟ್ ದರವನ್ನು ಇಳಿಸಲಾಗಿದ್ದು, 862 ದಿರ್ಹಂ ನಿಗದಿಪಡಿಸಿದೆ.
ನ್ಯೂಯಾರ್ಕ್ಗೆ ಸ್ಟಾಪ್ ಓವರ್ ಫ್ಲೈಟ್ ಟಿಕೆಟ್ 1,938 ದಿರ್ಹಂಗೆ ಲಭ್ಯವಿದೆ. ಎಮಿರೇಟ್ಸ್ ನೇರ ವಿಮಾನಗಳ ದರವು 4,225 ದಿರ್ಹಂ ಆಗಿದೆ. ಶಾರ್ಜಾ ಮತ್ತು ಅಬುಧಾಬಿ ವಿಮಾನ ನಿಲ್ದಾಣಗಳಿಂದ ಕೂಡ ವಿಮಾನ ದರಗಳು ಇಳಿಕೆಯಾಗಿವೆ.
ಕೆಲವು ವಿಮಾನಗಳು ಮಾರ್ಗಗಳನ್ನು ತ್ಯಜಿಸುವ ಅಥವಾ ಸಂಪೂರ್ಣವಾಗಿ ಸ್ಥಗಿತಗೊಳಿಸುವುದರಿಂದ ಇನ್ನಷ್ಟು ಇಳಿಯುವ ಸಂಭವವಿದೆ. ಆದರೆ ದೇಶದ ನಾಗರಿಕರು ಮತ್ತು ನಿವಾಸಿಗಳು ಎಲ್ಲಾ ಅನಗತ್ಯ ಪ್ರಯಾಣವನ್ನು ತಪ್ಪಿಸುತ್ತಿದ್ದಾರೆ ಎನ್ನಲಾಗಿದೆ.















ಇನ್ನಷ್ಟು ಸುದ್ದಿಗಳು
ದುಬೈ-ಇಸ್ರೇಲ್ ವಿಮಾನದಲ್ಲಿ ಪೈಲಟ್ಗಳ ನಡುವೆ ಸಂಘರ್ಷ : ಸೌದಿಯಲ್ಲಿ ತುರ್ತು ಭೂಸ್ಪರ್ಶ
ಅಣು-ವಿಕಿರಣ ಸೋರಿಕೆಯಾದರೆ ಏನು ಮಾಡಬೇಕು?; ಜಾಗರೂಕತೆಯ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದ CDAA
ಒಮಾನ್:ಕಾರ್ಮಿಕ ಕಾಯ್ದೆ ಉಲ್ಲಂಘನೆ ವಿರುದ್ಧ ಕಠಿಣ ಕ್ರಮ- ಫೀಲ್ಡ್ ತಪಾಸಣೆಗೆ ಮುಂದಾದ ಕಾರ್ಮಿಕ ಸಚಿವಾಲಯ
ರಸ್ತೆ ಬದಿಯ ಪೈಪ್ ಸರಿಪಡಿಸಿದ ಭಾರತೀಯ ಡೆಲಿವರಿ ಯುವಕ – ದುಬೈ ಸರ್ಕಾರದ ಗೌರವ
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿ; 73 ನಾಗರಿಕರಿಗೆ ಗಾಯ
ಹಾರ್ಮುಜ್ ತೆರೆಯುವುದಕ್ಕೆ ಆದ್ಯತೆ; ಬಿಕ್ಕಟ್ಟು ಮುಂದುವರಿದರೆ ಕೈಗಾರಿಕಾ ದುರಂತ- ಕತಾರ್
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ