janadhvani

Kannada Online News Paper

ಬಾಬರೀ ಮಸ್ಜಿದ್ ಪ್ರಕರಣ: ಬರೀ ಭೂಮಿ ಸಂಬಂಧಿಸಿದ ತರ್ಕವಲ್ಲ-ಕಾಂತಪುರಂ ಎ.ಪಿ.ಉಸ್ತಾದ್

ಕಣ್ಣೂರು(ಜನಧ್ವನಿ ವಾರ್ತೆ): ಬಾಬರೀ ಮಸ್ಜಿದ್ ಪ್ರಕರಣವು ಕೇವಲ ಭೂಮಿಗೆ ಸಂಭವಿಸಿದ ತರ್ಕವಲ್ಲ ಎಂದು ಅಖಿಲ ಭಾರತ ಸುನ್ನೀ ಜಂಇಯ್ಯುತುಲ್ ಉಲಮಾದ ಪ್ರ.ಕಾರ್ಯದರ್ಶಿ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಹೇಳಿದ್ದಾರೆ.ಅವರು ಕಣ್ಣೂರಿನಲ್ಲಿ ಎಸ್ಸೆಸ್ಸೆಫ್ ರಾಜ್ಯ ಸಮಿತಿಯು ಹಮ್ಮಿಕೊಂಡ ‘ಪ್ರೊಫ್‌ಸಮ್ಮಿಟ್’ನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಬಾಬರೀ ಮಸೀದಿಯಲ್ಲಿ ಅದೆಷ್ಟೋ ದಶಕಗಳ ಕಾಲ ಮುಸ್ಲಿಮರು ಆರಾಧನೆ ನಡೆಸುತ್ತಿದ್ದರು. ರಾಷ್ಟ್ರದ ಮೌಲ್ಯವನ್ನು ಕಡೆಗಣಿಸಿ, ಸವಾಲೊಡ್ಡಿ ಒಂದು ಗುಂಪು ಅದನ್ನು ನಾಶಪಡಿಸಿರುವ ಬಗ್ಗೆ ಇಲ್ಲಿ ಎಲ್ಲರೂ ಬಲ್ಲವರಾಗಿದ್ದಾರೆ. ಆದರೆ, ಅದನ್ನು ಇಲ್ಲಿನ ಆಡಳಿತ ವ್ಯವಸ್ಥೆಯು ಬರೀ ಭೂಮಿಗೆ ಸಂಬಂಧಿಸಿದ ತರ್ಕವಾಗಿ ಪರಿಗಣಿಸುವುದು ದೇಶದ ಇತಿಹಾಸ ಮತ್ತು ಇಲ್ಲಿನ ಪರಂಪರೆಯೊಂದಿಗೆ ತೋರುವ ಅನ್ಯಾಯವಾಗಿದೆ ಎಂದು ಅವರು ತಿಳಿಸಿದರು.

ಭಯೋತ್ಪಾದಕರು ಮತ್ತು ಆತಂಕವಾದಿಗಳನ್ನು ಪ್ರೋತ್ಸಾಹಿಸುವವರು ದೇಶದ ನಾಶವನ್ನು ಬಯಸುವವರಾಗಿದ್ದಾರೆ. ಒಂದು ಸಮಾಜವನ್ನು ಆತಂಕವಾದದತ್ತ ಕೊಂಡೊಯ್ದ ನಂತರ ಭಯೋತ್ಪದನೆಯ ವಿರುದ್ದ ಕ್ಯಾಂಪೇನ್ ನಡೆಸಿ ಕೈ ತೊಳೆಯುವಂತಹ ಕೆಲಸವನ್ನು ಇಲ್ಲಿನ ಸಲಫಿ ಸಂಘಟನೆಗಳು ಮಾಡುತ್ತಿವೆ ಎಂದು ಕಾಂತಪುರಂ ಹೇಳಿದರು.

ಬಹು ಸಂಸ್ಕೃತಿಗಳ ನಡುವಿನ ಜೀವನ ಶಾಂತವಾಗಿರಲೇ ಬೇಕು. ಅದಕ್ಕೆ ಅಹ್ಲುಸುನ್ನತಿ ವಲ್ ಜಮಾಅತ್ತಿನ ಆಶಯಾದರ್ಶಗಳನ್ನು ಹಿಂಬಾಲಿಸುವ ಪಾರಂಪರಿಕ ಇಸ್ಲಾಂ ಮಾತ್ರವಾಗಿದೆ ಏಕೈಕ ಹಾದಿ. ಎಲ್ಲಾ ತರಹದ ಅಧ್ಯಯನವನ್ನು ಇಸ್ಲಾಂ ಪ್ರೋತ್ಸಾಹಿಸಿದೆ.ಕಲಿಯುವವನ ಮನದ ಇಂಗಿತದಂತೆ ಇಸ್ಲಾಮೀ ದೃಷ್ಟಿಕೋನದಲ್ಲಿ ಗುಣವೂ ಲಭಿಸಲಿದೆ. ಶಾಸ್ತ್ರವು ಹೊಸ ಹೊಸ ಪ್ರಯೋಗಗಳ ಹಿಂದೆ ಸಾಗುತ್ತಿದೆ. ಆ ಪ್ರಯೋಗಗಳೆಲ್ಲವೂ ಕಡೆಗೆ ಕುರ್‌ಆನ್ ವಚನಗಳು ಕಲಿಸಿದ ಸತ್ಯವನ್ನು ಅಂಗೀಕರಿಸಿ ಸಮಾಪ್ತಿ ಗೊಳ್ಳುತ್ತದೆ. ಕುರ್‌ಆನ್ ಕಲಿತ ವಿದ್ಯಾರ್ಥಿಗಳಿಗೆ ಶಾಸ್ತ್ರ ವಲಯದಲ್ಲಿ ಉನ್ನತ ಬದಲಾವಣೆ ತರಲು ಸಾಧ್ಯವಿದೆ ಎಂದು ಕಾಂತಪುರಂ ಉಸ್ತಾದ್ ಹೇಳಿದ್ದಾರೆ.

ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಡಾ. ಪಿ.ಎ. ಫಾರೂಖ್ ನ‌ಈಮಿ ಅಲ್ ಬುಖಾರಿ ಅಧ್ಯಕ್ಷತೆ ವಹಿಸಿದ್ದರು. ಸಚಿವ ಕಡನ್ನಪಳ್ಳಿ ರಾಮಚಂದ್ರನ್, ಸೈಯ್ಯಿದ್ ಹಾಮಿದ್ ಕೋಯಮ್ಮ ತಂಙಳ್, ಶಾಸಕ ಟಿ.ವಿ. ರಾಜೇಶ್, ಎಸ್.ಎಸ್.ಎ. ಖಾದರ್ ಹಾಜಿ, ಡಾ. ಶಾಹುಲ್ ಹಮೀದ್, ಕೆ. ಅಬ್ದುಲ್ ರಶೀದ್ ನರಿಕ್ಕೋಡ್, ಮುಹಮ್ಮದ್ ಶಾಫಿ ವಳ್ಳಕಡವ್ ಮುಂತಾದವರು ಮಾತನಾಡಿದರು.

ಪೊನ್ಮಲ ಅಬ್ದುಲ್ ಖಾದರ್ ಮುಸ್ಲಿಯಾರ್, ಕೂಟಂಪಾರ ಅಬ್ದುರ್ರಹ್ಮಾನ್ ದಾರಿಮಿ, ಇಬ್ರಾಹೀಂ ಬಾಖವಿ ಮೇಲ್ಮುರಿ, ಎನ್.ಎಂ. ಸ್ವಾದಿಕ್ ಸಖಾಫಿ, ಎನ್.ವಿ. ಅಬ್ದುಲ್ ರಝಾಕ್ ಸಖಾಫಿ, ದೇವರ್ಶೋಲ ಅಬ್ದುಸ್ಸಲಾಂ ಮುಸ್ಲಿಯಾರ್ ಮುಂತಾದವರು ವಿವಿಧ ವಿಷಯಗಳಲ್ಲಿ ಶಿಬಿರ ನಡೆಸಿದರು.

error: Content is protected !! Not allowed copy content from janadhvani.com