janadhvani

Kannada Online News Paper

ಎನ್ ಪಿಆರ್  ಹೆಸರಿನಲ್ಲಿ ಮತ್ತೊಂದು ತಂತ್ರ ಹೆಣೆದ ಅಮಿತ್ ಶಾ

NRC ಮತ್ತು CAA ವಿರುದ್ಧ ತಾನು ಕನಸಿನಲ್ಲೂ ಊಹಿಸಿರದ ರೀತಿಯಲ್ಲಿ ದೇಶದಾದ್ಯಂತ ಪ್ರತಿಭಟನೆಗಳು, ಹೋರಾಟಗಳು ನಡೆಯುತ್ತಿರುವ ಮಧ್ಯೆ NRCಯನ್ನು ಹೆಸರು ಬದಲಾಯಿಸಿ ಜಾರಿ ಮಾಡಲು ಹೊರಟಿದ್ದಾರೆ ಈ ಲೂಟಿ ಕೋರರು.

ಭಾರತದಲ್ಲಿ ಆರ್ಥಿಕತೆ ಅಪಾಯದ ಮಟ್ಟವನ್ನು ಮೀರಿದೆ ಎಂದು ಜಾಗತಿಕ ಅರ್ಥಶಾಸ್ತ್ರಜ್ಞರು ವರದಿ ಮಾಡುತ್ತಿದ್ದಂತೆ, ಮತ್ತೆ 4000ಕೋಟಿ ರೂಪಾಯಿಯನ್ನು ಜೇಬಿಗಿಳಿಸಲು ಭಾರತದ ನಿರಕ್ಷರಿಗಳ ಸರಕಾರ ತೀರ್ಮಾನಿಸಿವೆ.

4000ಕೋಟಿ ಖರ್ಚು ಮಾಡಿ ದೇಶದಲ್ಲಿರುವ ಜನಸಂಖ್ಯೆಯನ್ನು ಎಣಿಸುವುದಂತೆ ಇವರು. ಎಲ್ಲಾ ಜನರ ಪಿಂಗರ್ ಪ್ರಿಂಟ್ ಶೇಖರಣೆ ಮಾಡುವುದಂತೆ.

ಇವುಗಳನ್ನೆಲ್ಲಾ ಒಂದೊಮ್ಮೆ ಆಧಾರ್ ಕಾರ್ಡ್ ನೆಪದಲ್ಲಿ ಮಾಡಿದ್ದು, ಅದು ಸೋರಿಕೆಯಾಗಿದ್ದು ಜಗತ್ತು ತಿಳಿದಿದೆ.

ಭಾರತದಲ್ಲಿ ಆಧಾರ್ ಕಾರ್ಡ್ ಹೊಂದಿರದವರು ಸದ್ಯಕ್ಕೆ ಬೆರಳೆಣಿಕೆಯ ಮಂದಿ ಇರಬಹುದಷ್ಟೆ. ಈಗಾಗಲೇ ಪಡೆದಿರುವ ಪಿಂಗರ್ ಪ್ರಿಂಟ್ ಮತ್ತು ಅಂಗಾಂಗಳ ಪ್ರಿಂಟ್ ಅನ್ನು ಮತ್ತೊಮ್ಮೆ ಮಾಡುವುದು ಸಮಯ, ಮಾನವ ಸಂಪನ್ಮೂಲ ಮತ್ತು ಹಣವನ್ನು ವ್ಯರ್ಥ ಮಾಡುವುದಲ್ಲವೇ.

ಅಗತ್ಯ ಬಿದ್ದರೆ, ಅಧಾರ್ ಕಾರ್ಡನ್ನು ಈಗಾಗಲೇ ಸರ್ವದಕ್ಕೂ ಲಿಂಕ್ ಮಾಡಿದ ಹಾಗೆ ಜನಸಂಖ್ಯಾ ತಂತ್ರಾಂಶಕ್ಕೂ ಲಿಂಕ್ ಮಾಡಿದರೆ ಸಾಕಲ್ಲವೇ? ಮತ್ತೆ 4000ಕೋಟಿ ಖರ್ಚು ಮಾಡುವುದು ಯಾವ ಪುರುಷಾರ್ಥಕ್ಕಾಗಿ.

ಈಗಾಗಲೇ NPRನ್ನು ಬುದ್ದಿಜೀವಿಗಳು ಮತ್ತು ಅರ್ಥಶಾಸ್ತ್ರಜ್ಞರು ವಿರೋಧಿಸಿದ್ದಾರೆ ಮತ್ತು ಉತ್ಪಾದನೆಯಿಲ್ಲದ (ಉಪಕಾರವಿಲ್ಲದ) ಖರ್ಚು (Unproductive Expenditure) ಅಂತ ಬಣ್ಣಿಸಿದ್ದಾರೆ.

ರಫೆಲ್ ಮೂಲಕ ಅಂಬಾನಿಯ ಜೇಬು ತುಂಬಿಸಿ ಭಾರತವನ್ನು ಬಡದೇಶವನ್ನಾಗಿ ಮಾಡಿದ ಬಿಜೆಪಿ, ಶಿವಾಜಿ ಪಾರ್ಕ್ ಮಾಡಲು 3000ಕೋಟಿ, ಸರ್ದಾರ್ ವಲ್ಲಭಭಾಯ್ ಪಟೇಲ್ ಯುನಿಟಿ ಪ್ರತಿಮೆ ಮಾಡಲು ಮತ್ತೊಂದು 3000ಕೋಟಿ ಖರ್ಚು ಮಾಡಿದೆ.

ಈ ರೀತಿ ಖರ್ಚು ಮಾಡಿರುವುದರಿಂದ ದೇಶದ ಆರ್ಥಿಕತೆಗೆ ಏನಾದರೂ ಉಪಕಾರ ಉತ್ಪಾದನೆ ಇದೆಯೇ?

NPR ಮೂಲಕ ಮೋದಿ ಮಾಡ ಹೊರಟಿರುವುದು ಗಾಯಗೊಂಡಿರುವ ಭಾರತದ ಬಡ ಆರ್ಥಿಕತೆಯ ಮೇಲೆ ಮತ್ತೊಂದು ಬರೆಯನ್ನು ಎಳೆಯುವುದು ಎಂದು ಸಾಮಾನ್ಯ ಬುದ್ದಿ ಉಪಯೋಗಿಸಿ ಚಿಂತಿಸಬಹುದಾಗಿದೆ.

ಎಕನಾಮಿಕ್ಸ್‌ನಲ್ಲಿ ಪಿಎಚ್‌ಡಿ ಮಾಡಬೇಕಿಲ್ಲ. NRC ಮತ್ತು CAA ಎಂಬ ಕಾಯ್ದೆ ವಿರುಧ್ದ ರೊಚ್ಚಿಗೆದ್ದ ನಾಗರೀಕರನ್ನು ಅದರಿಂದ ವಿಮುಖಗೊಳಿಸಲು ಮತ್ತು ಭಾರತವನ್ನು ಲೂಟಿ ಮಾಡಲು ಬಿಜೆಪಿ ಹೆಣೆದಿರುವ ಮತ್ತೊಂದು ತಂತ್ರ ಅಷ್ಟೇ

ಪ್ರಜಾಪ್ರಭುತ್ವವನ್ನು ಇಲ್ಲವಾಗಿಸಿ, ಮುಸ್ಲಿಮರಿಗೆ ಪೌರತ್ವವನ್ನು ನಿಷೇಧಿಸಿ ಶತ್ರುಗಳಿಲ್ಲದ ರಾಜ್ಯದಲ್ಲಿ ಹಾಯಾಗಿ ಸರ್ವಾಧಿಕಾರಿಯಾಗಬಹುದೆಂದು ಭಾವಿಸಿದ್ದ ಅಮಿತನಿಗೆ ಅಮಿತವಾದ ಅನಂದ ಇಲ್ಲದಂತೆ ಮಾಡಿದ ಸಿಟ್ಟಿನಲ್ಲಿ NPR ಮೂಲಕ ಇವಿಎಂ ಒಡೆಯುವ ಕಾಸು ಮಾಡ ಹೊರಟಿದ್ದಾರಷ್ಟೆ.

ಭಾರತವನ್ನು ಕೊಳ್ಳೆ ಹೊಡೆದ ಬ್ರಿಟಿಷರನ್ನು ಒದ್ದೋಡಿಸಿದ ಹಾಗೆ ಈ ಲೂಟಿಕೋರರಿಂದ ಭಾರತವನ್ನು ರಕ್ಷಿಸುವುದು ಕಾಲಘಟ್ಟದ ಮತ್ತು ಭವಿಷ್ಯದ ಭಾರತದ ಹಿತದೃಷ್ಟಿಯಿಂದ ಅತೀ ಅವಶ್ಯಕ.

ಮತ್ತೊಂದು ಸ್ವಾತಂತ್ರ್ಯ ಸಂಗ್ರಾಮದ ಹೊತ್ತಿಕೊಂಡಿರುವ ಕಿಚ್ಚು ನಂದದಿರಲಿ. ಸಂಘಿ ಆಡಳಿತ ಕೊನೆಗೊಂಡು ಭಾರತಾಂಬೆ ಸ್ವತಂತ್ರಗೊಳ್ಳಲಿ.

error: Content is protected !! Not allowed copy content from janadhvani.com