ರಿಯಾದ್: ಕೇಂದ್ರ ಸರಕಾರ ಜಾರಿಗೆ ತಂದಿರುವ CAA ಮತ್ತು ಜಾರಿಗೊಳಿಸಲು ಉದ್ದೇಶಿಸಿರುವ NRC ವಿರುದ್ಧ ಕೆಸಿಎಫ್ ರಿಯಾದ್ ಝೋನ್ ವಿರೋಧವನ್ನು ವ್ಯಕ್ತಪಡಿಸಿದೆ.
ಇದೇ ಸಂಧರ್ಭದಲ್ಲಿ ದೇಶದಲ್ಲಿ ಶಾಂತಿ ನೆಲೆಸಲು ಮತ್ತು ದೇಶದ ನಾನಾ ಭಾಗಗಳಲ್ಲಿ ಶಾಂತಿಯುತ ಮೆರವಣಿಗೆಯಲ್ಲಿ ಹುತಾತ್ಮರಾದವರಿಗಾಗಿ ಕೆಸಿಎಫ್ ರಿಯಾದ್ ಝೋನ್ ವತಿಯಿಂದ ಆಧ್ಯಾತ್ಮಿಕ ಮಜ್-ಲಿಸ್ ಮತ್ತು ಪ್ರಾರ್ಥನಾ ಸಂಗಮವನ್ನು ಏರ್ಪಡಿಸಿ ಕುರಾನ್ , ತಹಲೀಲ್ ಸಮರ್ಪಿಸಿ ಪ್ರಾರ್ಥನೆ ನೆರವೇರಿಸಲಾಯಿತು.
ರಿಯಾದ್ ಪ್ರಾಂತ್ಯದ ಹಲವಾರು ಸಹೋದರ ಬಾಂದವರು ಈ ಪ್ರತಿರೋದದಲ್ಲಿ ಪಾಲ್ಗೊಂಡಿದ್ದರು.
ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದ ಮಂಗಳೂರಿನ ನಾಗರಿಕರ ಮೇಲೆ ಲಾಠಿಚಾರ್ಜ್ ಹಾಗೂ ಗೋಲಿಬಾರ್ ನಡೆಸಿರುವುದನ್ನು ಖಂಡಿಸುವುದಲ್ಲದೆ ಅಸಂವಿಧಾನಿಕವಾದ ಈ ಕಾನೂನನ್ನು ಹಿಂದಕ್ಕೆ ಪಡೆಯುವಂತೆ ಆಗ್ರಹಿಸುತ್ತಿದ್ದೇವೆ.
ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿದ ಪೋಲೀಸರ ದೌರ್ಜನ್ಯವನ್ನು ಕೆಸಿಎಫ್ ರಿಯಾದ್ ಝೋನ್ ಖಂಡಿಸುವುದಲ್ಲದೆ ತಪ್ಪಿತಸ್ಥ ಪೋಲೀಸರ ವಿರುದ್ಧ ಶೀಘ್ರ ಕಾನೂನು ಕ್ರಮ ಕೈಗೊಂಡು ಜಿಲ್ಲೆಯಲ್ಲಿ ಶಾಂತಿ ನೆಲೆಸಲು ಬೇಕಾದ ಎಲ್ಲಾ ಏರ್ಪಾಡು ಮಾಡಬೇಕಾಗಿ ಕೆಸಿಎಫ್ ಆಗ್ರಹಿಸಿದೆ.