janadhvani

Kannada Online News Paper

ಕೈಕುಲುಕಲು ಮರೆತು ಬಾಲಕಿಯ ಮೆನೆಗೆ ತೆರಳಿ ಅಚ್ಚರಿ ಮೂಡಿಸಿದ ದೊರೆ- ವೀಡಿಯೋ ವೈರಲ್

ಅಬುಧಾಬಿ: ಸರ್ಕಾರಿ ಸಮಾರಂಭದಲ್ಲಿ ಕೈಕುಲುಕಲು ಬಂದ ಬಾಲಕಿಯನ್ನು ನೋಡದೇ ಮುಂದೆ ಸಾಗಿದ್ದ ಅಬುಧಾಬಿ ದೊರೆ ಮತ್ತು ಯುಎಇ ಸಶಸ್ತ್ರ ಪಡೆಗಳ ಉಪ ಮುಖ್ಯಸ್ಥರೂ ಆದ ಶೈಖ್ ಮುಹಮ್ಮದ್ ಬಿನ್ ಝಾಯಿದ್ ಆಲ್ ನಹ್ಯಾನ್ ಅವರು ಸ್ವದೇಶೀ ಬಾಲಕಿಯ ಮನೆಗೆ ತೆರಳಿ ಅವರನ್ನುಅಚ್ಚರಿ ಪಡಿಸಿದರು.

ಯುಎಇಯ 48ನೇ ರಾಷ್ಟ್ರೀಯ ದಿನದಂದು ಸ್ಥಳೀಯ ಹುಡುಗಿ ಆಯಿಷಾ ಮುಹಮ್ಮದ್ ಮುಷೈತ್ ಅಲ್-ಮಸ್ರೂಯಿ ಮನೆಗೆ ದೊರೆ ಭೇಟಿ ನೀಡಿದ್ದರು. ಶೈಖ್ ಮುಹಮ್ಮದ್ ಅವರ ಭೇಟಿಯು ನವ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಆಯಿಷಾ ಮತ್ತು ಅವರ ಕುಟುಂಬವನ್ನು ನೋಡಿ ಸಂತೋಷವಾಗಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಸೌದಿ ಅರೇಬಿಯಾದ ದೊರೆ ಮೊಹ್ಮದ್ ಬಿನ್ ಸಲ್ಮಾನ್ ಅಬುಧಾಬಿ ಪ್ರವಾಸದಲ್ಲಿದ್ದು, ಈ ವೇಳೆ ಸೌದಿ ದೊರೆಯನ್ನು ಸ್ವಾಗತಿಸಲು ಮಕ್ಕಳ ಗುಂಪೊಂದು ಅಧ್ಯಕ್ಷರ ಅರಮನೆ ಮುಂದೆ ಜಮಾಯಿಸಿತ್ತು.ಈ ವೇಳೆ ಸೌದಿ ದೊರೆ ಹಾಗೂ ಅಬುಧಾಬಿ ದೊರೆ ಮಕ್ಕಳ ಕೈಕುಲುಕುತ್ತ ಮುಗುಳ್ನಗೆಯಿಂದ ಮುನ್ನಡೆಯುತ್ತಿದ್ದರು. ಆದರೆ ಸರತಿ ಸಾಲಿನಲ್ಲಿ ಕೊನೆಯಲ್ಲಿ ಆಯಿಷಾ ಮುಹಮ್ಮದ್ ಮುಷೈತ್ ಅಲ್-ಮಸ್ರೂಯಿ ಎಂಬ ಬಾಲಕಿ ದೊರೆಯ ಕೈಕುಕುಕಲು ಮುಂದಾದಾಗ ಅಚಾತುರ್ಯದಿಂದ ಆಕೆಯತ್ತ ನೋಡದೇ ಶೈಖ್ ಮುಂದೆ ಸಾಗಿದ್ದರು,ಬಳಿಕ ಬಾಲಕಿ ತಮ್ಮ ಕೈಕುಲುಕಲು ಮುಂದೆ ಬಂದಿದ್ದ ವಿಡಿಯೋ ನೋಡಿದ್ದ ಶೈಖ್, ಬಾಲಕಿಯ ಮನೆಗೆ ತೆರಳಿ ಆಕೆಯ ಹಣೆಗೆ ಮುತ್ತಿಟ್ಟು ಆಶೀರ್ವದಿಸಿದ್ದಾರೆ.

ಖುದ್ದು ಅಬುಧಾಬಿ ದೊರೆ ತಮ್ಮ ಮನೆಗೆ ಬಂದಿರುವುದನ್ನು ನಂಬಲಾಗದ ಪುಟಾಣಿಗಳು, ಆಶ್ವರ್ಯಕರ ಕಣ್ಣುಗಳಿಂದ ಅವರನ್ನೇ ನೋಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

error: Content is protected !! Not allowed copy content from janadhvani.com