ರಿಯಾದ್: ಸೌದಿಯ ಗುರುತಿನ ದಾಖಲೆ ಇಕಾಮಾ ನವೀಕರಿಸಲು ಸಾಧ್ಯವಾಗದವರು ಮತ್ತು ಹುರೂಬ್ ಸಂತ್ರಸ್ತರಿಗೆ ಸೌದಿ ತೊರೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಸೌದಿ ಅರೇಬಿಯಾದ ಭಾರತೀಯ ರಾಯಭಾರ ಕಚೇರಿ ಪ್ರಕಟಿಸಿದೆ ಎಂದು ಮಲಯಾಳಂ ಪತ್ರಿಕೆಗಳು ವರದಿ ಮಾಡಿದೆ. ಈ ಕುರಿತ ಅಧಿಕೃತ ಮಾಹಿತಿಯು ಬಾನುವಾರವಷ್ಟೇ ಹೊರಬರಲಿದೆ.
ಮನೆ ಚಾಲಕರು ಮತ್ತು ವೈಯಕ್ತಿಕ ವೀಸಾದಲ್ಲಿರುವವರು ತಮ್ಮ ಇಖಾಮಾವನ್ನು ನವೀಕರಿಸಲು ಸಾಧ್ಯವಾಗದೆ ಸಂಕಷ್ಟದಲ್ಲಿರುವವರಿಗೆ ಗಡೀಪಾರು ಕೇಂದ್ರ ಮೂಲಕ ಸೌದಿ ಅರೇಬಿಯಾದಿಂದ ಭಾರತಕ್ಕೆ ಮರಳಲು ಸಾಧ್ಯವಿದೆ ಎಂದು ರಿಯಾದ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ. ಸದ್ಯಕ್ಕೆ ಮನೆ-ಚಾಲಕ ವೀಸಾ ಮತ್ತು ವೈಯಕ್ತಿಕ ವೀಸಾಗಳಲ್ಲಿರುವವರಿಗೆ ಈ ಅವಕಾಶವನ್ನು ಕಲ್ಪಿಸಲಾಗಿದೆ.
ಗಡೀಪಾರು ಕೇಂದ್ರವು ಮುಂದಿನ ಭಾನುವಾರ( ಅ.13)ಗಡೀಪಾರು ಪ್ರಕ್ರಿಯೆಗಳನ್ನು ಪ್ರಾರಂಭಿಸಲಿದೆ.ಭಾರತಕ್ಕೆ ತೆರಳಲು ಇಚ್ಛಿಸುವವರು ರಿಯಾದ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು ಅಥವಾ ಜಿದ್ದಾದ ಭಾರತೀಯ ದೂತಾವಾಸವನ್ನು ಸಂಪರ್ಕಿಸಬೇಕು ಎಂದು ಭಾರತೀಯ ರಾಯಭಾರ ಸಮುದಾಯ ಕಲ್ಯಾಣ ಕಾನ್ಸುಲರ್ ದೇಶ್ ಬಂಧು ಭಟ್ಟಿ ಹೇಳಿದರು.
ದಿನವೊಂದಕ್ಕೆ ಐವತ್ತು ಭಾರತೀಯರನ್ನು ಸೌದಿಯಿಂದ ಗಡೀಪಾರು ಮಾಡಲಾಗುತ್ತದೆ. ಮುಂದಿನ ಭಾನುವಾರ ಗ ಡೀಪಾರು ಪ್ರಾರಂಭವಾಗಲಿದ್ದರೂ, ಇಂದಿನಿಂದಲೇ ರಾಯಭಾರ ಕಚೇರಿ ಮತ್ತು ದೂತಾವಾಸದಲ್ಲಿ ಹೆಸರು ನೋಂದಾಯಿಸಬಹುದು.
ಹೆಸರನ್ನು ನೋಂದಾಯಿಸಿದ ನಂತರ, ಅಗತ್ಯ ಪ್ರಯಾಣ ದಾಖಲೆಗಳನ್ನು ಒದಗಿಸಲಾಗುತ್ತದೆ. ಅದೇ ಸಮಯದಲ್ಲಿ,ಕಂಪನಿಗಳು ಮತ್ತು ಇತರ ಸಂಸ್ಥೆಗಳಲ್ಲಿ ನಿವಾಸ ದಾಖಲೆಯಿರುವವರು ಮತ್ತು ಯಾವುದಾದರೂ ಪ್ರಕರಣದಲ್ಲಿ ಕೇಸ್ ಇರುವರಿಗೆ ದೇಶ ತೊರೆಯಲು ಅನುಮತಿಸದ ಕಾರಣ ತಮ್ಮ ಹೆಸರನ್ನು ನೋಂದಾಯಿಸಲು ಕಾನ್ಸುಲೇಟ್ ಅಥವಾ ರಾಯಭಾರ ಕಚೇರಿಯನ್ನು ಸಂಪರ್ಕಿಸಬೇಕಾಗಿಲ್ಲ.
ಹೆಚ್ಚಿನ ಮಾಹಿತಿಗಾಗಿ ಭಾರತೀಯ ರಾಯಭಾರಿ ಕಚೇರಿಯ ಟೋಲ್ ಫ್ರೀ ಸಂಖ್ಯೆ: 8002471234 ಗೆ ಸಂಪರ್ಕಿಸಬಹುದಾಗಿದೆ.















ಇನ್ನಷ್ಟು ಸುದ್ದಿಗಳು
ದುಬೈ-ಇಸ್ರೇಲ್ ವಿಮಾನದಲ್ಲಿ ಪೈಲಟ್ಗಳ ನಡುವೆ ಸಂಘರ್ಷ : ಸೌದಿಯಲ್ಲಿ ತುರ್ತು ಭೂಸ್ಪರ್ಶ
ಅಣು-ವಿಕಿರಣ ಸೋರಿಕೆಯಾದರೆ ಏನು ಮಾಡಬೇಕು?; ಜಾಗರೂಕತೆಯ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದ CDAA
ಒಮಾನ್:ಕಾರ್ಮಿಕ ಕಾಯ್ದೆ ಉಲ್ಲಂಘನೆ ವಿರುದ್ಧ ಕಠಿಣ ಕ್ರಮ- ಫೀಲ್ಡ್ ತಪಾಸಣೆಗೆ ಮುಂದಾದ ಕಾರ್ಮಿಕ ಸಚಿವಾಲಯ
ರಸ್ತೆ ಬದಿಯ ಪೈಪ್ ಸರಿಪಡಿಸಿದ ಭಾರತೀಯ ಡೆಲಿವರಿ ಯುವಕ – ದುಬೈ ಸರ್ಕಾರದ ಗೌರವ
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿ; 73 ನಾಗರಿಕರಿಗೆ ಗಾಯ
ಹಾರ್ಮುಜ್ ತೆರೆಯುವುದಕ್ಕೆ ಆದ್ಯತೆ; ಬಿಕ್ಕಟ್ಟು ಮುಂದುವರಿದರೆ ಕೈಗಾರಿಕಾ ದುರಂತ- ಕತಾರ್
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ