ದುಬೈ: ರಸ್ತೆ ಮತ್ತು ಸಾರಿಗೆ ಪ್ರಾಧಿಕಾರವು (ಆರ್‌ಟಿಎ) ಅಲ್ ಯಲಾಯಿಸ್ ಮತ್ತು ಅಲ್ ಅಸಾಯಲ್ ಸ್ಟ್ರೀಟ್ಸ್ ಡೆವಲಪ್‌ಮೆಂಟ್ ಪ್ರಾಜೆಕ್ಟ್ ಅನ್ನು ಆರಂಭಿಸಿರುವುದಾಗಿ ಘೋಷಿಸಿದೆ. ಹೊಸ ರಸ್ತೆಯು ಶೈಖ್ ಝಾಯಿದ್ ರಸ್ತೆ, ಶೈಖ್ ಮುಹಮ್ಮದ್ ಬಿನ್ ಝಾಯಿದ್ ರಸ್ತೆ ಮತ್ತು ಎಮಿರೇಟ್ಸ್ ರಸ್ತೆಯೊಂದಿಗೆ ಸಂಪರ್ಕವನ್ನು ಸುಧಾರಿಸಲಿದೆ.
ಶೈಖ್ ಝಾಯಿದ್ ರಸ್ತೆ (7th ಇಂಟರ್ಚೇಂಜ್) ಮತ್ತು ಶೈಖ್ ಮುಹಮ್ಮದ್ ಬಿನ್ ಝಾಯಿದ್ ರಸ್ತೆ ನಡುವಿನ ಪ್ರಯಾಣವು ನಾಲ್ಕು ನಿಮಿಷ ಕಡಿಮೆಯಾಗಲಿದೆ. ಅಲ್ ಖೈಲ್ ರಸ್ತೆ, ಶೈಖ್ ಮುಹಮ್ಮದ್ ಬಿನ್ ಝಾಯಿದ್ ರಸ್ತೆ, ಶೈಖ್ ಝಾಯಿದ್ ಬಿನ್ ಹಮ್ದಾನ್ ಅಲ್ ನಹ್ಯಾನ್ ಸ್ಟ್ರೀಟ್ ಮತ್ತು ಎಮಿರೇಟ್ಸ್ ರಸ್ತೆಗೆ ಸಮಾನಾಂತರವಾಗಿ ಅಲ್ ಅಸಾಯಿಲ್ ಸ್ಟ್ರೀಟ್ ಪ್ರಮುಖ ಸಂಚಾರ ಕಾರಿಡಾರ್ ಆಗಿದೆ.
ಈ ಯೋಜನೆಯು ಸ್ಥಳೀಯ ಆರ್ಥಿಕತೆಗೆ ಸಹಾಯ ಮಾಡಲಿದ್ದು, ಇದು ಅಲ್ ಫರ್ಝಾನ್, ಡಿಸ್ಕವರಿ ಗಾರ್ಡನ್ಸ್ ಮತ್ತು ಜಬೆಲ್ ಅಲಿ ಡೆವಲಪ್‌ಮೆಂಟ್‌ನಂತಹ ಅಭಿವೃದ್ಧಿ ಯೋಜನೆಗಳಿಗೆ ಹೆಚ್ಚುವರಿ ಪ್ರವೇಶ / ಎಕ್ಸಿಟ್ ಪಾಯಿಂಟ್‌ಗಳನ್ನು ಸಹ ನೀಡಲಿದೆ.
ಯುನೈಟೆಡ್ ಅರಬ್ ಎಮಿರೇಟ್ಸ್ ಹೊಸ ಯೋಜನೆಯು ಉಪಾಧ್ಯಕ್ಷ, ಪ್ರಧಾನಿ ಮತ್ತು ದುಬೈ ಆಡಳಿತಗಾರ ಶೈಖ್ ಮುಹಮ್ಮದ್ ಬಿನ್ ರಾಶಿದ್ ಆಲ್ ಮಕ್ತೂಮ್ ಅವರ ನಿರ್ದೇಶನಕ್ಕೆ ಅನುಗುಣವಾಗಿ ನಿರ್ಮಿಸಲಾಗಿದೆ ಎಂದು ಆರ್ಟಿಎ ಅಧ್ಯಕ್ಷ ಮತಾರ್ ಅಲ್-ತಾಯರ್ ಹೇಳಿದರು.
ಅಲ್ ಯಲಾಯಿಸ್ ಸ್ಟ್ರೀಟ್ ಅನ್ನು ಶೈಖ್ ಝಾಯಿದ್ ರಸ್ತೆಯ 7 ನೇ ಇಂಟರ್‌ಚೇಂಜ್ ನಿಂದ ಅಲ್ ಹೂದ್ ಇಂಟರ್ ಚೇಂಜ್ ನ ಶೈಖ್ ಮುಹಮ್ಮದ್ ಬಿನ್ ಝಾಯಿದ್ ರಸ್ತೆಯವರೆಗೆ ಆರು ಕಿಲೋಮೀಟರ್ ವಿಸ್ತಾರದಿಂದ ಸುಧಾರಿಸಲಾಗುತ್ತಿದೆ. ಅಲ್ ಅಸಾಯಲ್ ಸ್ಟ್ರೀಟ್, ಜುಮೈರಾ ದ್ವೀಪಗಳು, ಎಮಿರೇಟ್ಸ್ ಹಿಲ್ಸ್‌ನೊಂದಿಗೆ ಜಾಫ್ಸಾವನ್ನು ಸಂದಿಸಲು ಐದು ಕಿಲೋಮೀಟರ್ ವಿಭಾಗಕ್ಕೆ ನವೀಕರಿಸಲಾಗಿದೆ. ಗಂಟೆಗೆ 9,000 ವಾಹನಗಳು ಈ ಮೂಲಕ ಪ್ರಯಾಣಿಸಬಲ್ಲದು ಎಂದು ಅಲ್ ತಾಯರ್ ವಿವರಿಸಿದರು.