ಎಸ್ಸೆಸ್ಸೆಫ್ ಬಂಟ್ವಾಳ ಡಿವಿಷನ್ ಸಮಿತಿಯ ವತಿಯಿಂದ ಇತ್ತೀಚೆಗೆ ಬಿ.ಸಿ ರೋಡಿನ ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾ ಕಛೇರಿಯಲ್ಲಿ “ಹಳೆ ಬೇರು ಹೊಸ ಚಿಗುರು” ಎಂಬ ಕಾರ್ಯಕ್ರಮ ಡಿವಿಷನ್ ಅಧ್ಯಕ್ಷರಾದ ಅಕ್ಬರ್ ಅಲಿ ಮದನಿ ಉಸ್ತಾದರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಡಿವಿಷನ್ ಉಪಾಧ್ಯಕ್ಷರಾದ ಸಿದ್ದೀಕ್ ಸಅದಿ ಉದ್ಘಾಟಿಸಿ, ಪ್ರಧಾನ ಕಾರ್ಯದರ್ಶಿ ಹಾರಿಸ್ ಪೆರಿಯಪಾದೆ ಸ್ವಾಗತಿಸಿದರು. ಎಸ್.ವೈ.ಎಸ್ ನೇತಾರರಾದ ಅಬ್ದುಲ್ಲಾ ಕೊಳಕೆ, ಉಸ್ಮಾನ್ ಮಲಿಕ್ ನಂದಾವರ ತಮ್ಮ ಬಾಲ್ಯದಲ್ಲಿನ ಸಂಘಟನೆಯ ಅನುಭವವನ್ನು ವಿವರಿಸಿದರು. ಇಸ್ಹಾಕ್ ಝುಹುರಿ ಸೂರಿಂಜೆ “ಹಳೆಬೇರು ಹೊಸಚಿಗುರು” ಎಂಬ ವಿಷಯದಲ್ಲಿ ತರಗತಿ ಮಂಡಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರೀಫ್ ನಂದಾವರ ಸಹಿತ ಡಿವಿಷನ್ ಮತ್ತು ಸೆಕ್ಟರಿನ ಎಕ್ಸಿಕ್ಯೂಟಿವ್ ಸದಸ್ಯರು ಭಾಗವಹಿಸಿದರು.
ವರದಿ: ಹಾರಿಸ್ ಪೆರಿಯಪಾದೆ
(ಪ್ರಧಾನ ಕಾರ್ಯದರ್ಶಿ ಎಸ್ಸೆಸ್ಸೆಫ್ ಬಂಟ್ವಾಳ ಡಿವಿಷನ್)