ರಿಯಾದ್: ಗಲ್ಫ್ ಯಂಗ್ ಮೆನ್ಸ್ ಕಳಂಜಿಬೈಲ್ ಇದರ ಸೌದಿ ಸಮಿತಿಯ ಮಹಾಸಭೆಯು ರಿಯಾದಿನ ಕೆಪಿ ಶರೀಫ್ ನಿವಾಸ ದಾಹಿಲ್ ಎಂಬಲ್ಲಿ ಗೌರವಾಧ್ಯಕ್ಷರಾದ ಸಿದ್ದೀಕ್ ಸಖಾಫಿ ಪೆರುವಾಯಿ ಇವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆಯಿತು.
ಬಶೀರ್ ಮೂರುಗೋಳಿ ಖಿರಾಅತ್ ಪಠಿಸಿ, ಯೂಸುಫ್ ಹಾಜಿ ಕಳಂಜಿಬೈಲು ಕಾರ್ಯಕ್ರಮವನ್ನು ಉಧ್ಘಾಟಿಸಿದರು. ಇದೇ ಸಂದರ್ಭದಲ್ಲಿ ಕಾರ್ಯದರ್ಶಿ ಸಿದ್ದೀಕ್ ಕೆಪಿ ವಾರ್ಷಿಕ ಲೆಕ್ಕ ಪತ್ರವನ್ನು ಮಂಡಿಸಿ, ನಂತರ ನೂತನ ಸಮಿತಿಯನ್ನು ರಚಿಸಲಾಯಿತು.
2019-20ನೇ ಸಾಲಿನ ನೂತನ ಗೌರವಾಧ್ಯಕ್ಷರಾಗಿ ಸಿದ್ದೀಕ್ ಸಖಾಫಿ ಪೆರುವಾಯಿ, ಅಧ್ಯಕ್ಷರಾಗಿ ಶರೀಫ್ ಕೆಪಿ, ಉಪಾಧ್ಯಕ್ಷರಾಗಿ ಇಸ್ಮಾಯಿಲ್ ಮೇಗಿನಮನೆ, ಪ್ರದಾನ ಕಾರ್ಯದರ್ಶಿ ಅಬ್ದುರ್ರಝಾಕ್ ಮದನಿ ಕೆಪಿ, ಜೊತೆ ಕಾರ್ಯದರ್ಶಿ ಸಿದ್ದೀಕ್ ಕೆಪಿ, ಜಾಬೀರ್ ಡಿಕೆ, ಕೋಶಾಧಿಕಾರಿ ಶರೀಫ್ ಕೆವಿ, ಹಾಗೂ ಸಲಹೆಗಾರರಾಗಿ ಯೂಸುಫ್ ಹಾಜಿ ಕಳಂಜಿಬೈಲ್, ರಶೀದ್ ಹಾಜಿ ಕಲಂಜಿಬೈಲ್,ಸಿಎಚ್ ಅಬ್ದುಲ್ಲಾ ಸಖಾಫಿ, ಇಸ್ಮಾಯಿಲ್ ಪಿಕೆ ಅಲ್ ಆಸ್ಸಾ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ರಫೀಕ್ ಕೆಪಿ, ಜಲೀಲ್ ಕೆಪಿ, ಮೂರುಗೋಳಿ ಬಶೀರ್, ಮುನೀರ್ ಕೆವಿ, ಸಾಧಿಕ್ ಕೆಪಿ, ಮುಸ್ತಫಾ ಪಿಎಚ್, ಇಸ್ಮಾಯಿಲ್ ಡಿಕೆ ಮದೀನಾ, ಕಬೀರ್ ಬಿಕೆ ದಮ್ಮಾಂ, ರಫೀಕ್ ಸಹದಿ, ಅಝೀಝ್ ತಾಹಿಫ್, ನೌಫಾಲ್ ಡಿಕೆ, ಸಿದ್ದೀಕ್ ಅಲ್ ಹಸ್ಸಾ ಮೊದಲಾದವರನ್ನು ಆರಿಸಲಾಯಿತು.
ಅಬ್ದುರ್ರಝ್ಝಾಕ್ ಮದನಿ ಸ್ವಾಗತಿಸಿ ವಂದಿಸಿದರು.