janadhvani

Kannada Online News Paper

ಸೌದಿ: ಆ್ಯಂಬುಲೆನ್ಸ್ ಗಳ ಹಿಂದೆ ಹಾರ್ನ್ ಹೊಡೆದರೆ 900 ರಿಯಾಲ್ ದಂಡ

ರಿಯಾದ್: ಸೌದಿ ಅರೇಬಿಯಾದಲ್ಲಿ ಇನ್ನು ಮುಂದೆ ಆ್ಯಂಬುಲೆನ್ಸ್ ಗಳ ಹಿಂದೆ ಹಾರ್ನ್ ಹೊಡೆದರೆ ಅಥವಾ ಆ್ಯಂಬುಲೆನ್ಸ್‌ಗಳ ದಾರಿಗೆ ಅಡ್ಡಿ ಉಂಟು ಮಾಡಿದರೆ ಟ್ರಾಫಿಕ್ ಉಲ್ಲಂಘನೆ ವಿಭಾಗದಲ್ಲಿ ಸೇರಿಸಿ 900 ರಿಯಾಲ್ ವರೆಗೆ ದಂಡ ವಿಧಿಸಲಾಗುತ್ತದೆ.

ಸೌದಿ ಸಾರಿಗೆ ಸಚಿವಾಲಯದ ಅಡಿಯಲ್ಲಿ ಜಾರಿಗೆ ತರಲಾದ ಕಾನೂನನ್ನು ಸೌದಿ ರೆಡ್ ಕ್ರೆಸೆಂಟ್ ಅಥಾರಿಟಿ ಘೋಷಿಸಿದೆ. ಇತರ ವಾಹನಗಳು ಆ್ಯಂಬುಲೆನ್ಸ್ ಗಳಿಗೆ ಆಧ್ಯತೆ ನೀಡಬೇಕು. ದಟ್ಟಣೆ ಮಧ್ಯೆ ಆ್ಯಂಬುಲೆನ್ಸ್ ನಿಲ್ಲಿಸಿದಾಗ ಅಪಘಾತ ಹೆಚ್ಚಾಗುವ ಸಾಧ್ಯತೆ ಇದ್ದು, ಈ ಮೂಲಕ ತುರ್ತು ರೋಗಿಗಳೊಂದಿಗೆ ಚಲಿಸುವ ಆ್ಯಂಬುಲೆನ್ಸ್ ಗೆ ತೊಂದರೆ ಉಂಟಾಗುತ್ತದೆ. ಆದ್ದರಿಂದ ಹಿಂದಿನ ವಾಹನಗಳು ವೇಗವಾಗಿ ಚಲಿಸಬಾರದು. ಆ್ಯಂಬುಲೆನ್ಸ್ ಗಳನ್ನು ಹಿಂದಿಕ್ಕಿ ಚಲಿಸಿದರೆ ದಂಡ ಪಾವತಿಸಬೇಕಾದೀತು.