ಕುವೈತ್ ಸಿಟಿ: ಅವಲಂಬಿತ ವೀಸಾ ಪಡೆಯುವವರಿಗೆ ಇರಬೇಕಾದ ಕನಿಷ್ಠ ವೇತನವನ್ನು 500 ದಿನಾರ್ಗೆ ಏರಿಸಲಾಗಿದೆ. ಈ ಮೊದಲು, ವಿದೇಶಿಯರು ಕುಟುಂಬವನ್ನು ಪ್ರಾಯೋಜಿಸಲು ಕನಿಷ್ಠ ವೇತನ ಮಿತಿ 450 ದಿನಾರ್ ಆಗಿತ್ತು.
ನರ್ಸ್ಗಳು ಸೇರಿದಂತೆ ಹದಿನಾಲ್ಕು ವೃತ್ತಿಗಳಿಗೆ ಸಂಬಳ ಗಡುವಿನಿಂದ ವಿನಾಯಿತಿ ನೀಡಲಾಗಿದೆ. ಗೃಹ ಸಚಿವ ಶೈಖ್ ಖಾಲಿದ್ ಅಲ್-ಜರಾಹ್, ವೇತನ ಮಿತಿಯನ್ನು ಹೆಚ್ಚಿಸುವುದಾಗಿ ಇತ್ತೀಚೆಗೆ ಘೋಷಿಸಿದ್ದಾರೆ. ಪ್ರಸ್ತುತ ಅವಲಂಬಿತ ವೀಸಾಗಳಲ್ಲಿ ವಾಸಿಸುವವರಿಗೆ ವಸತಿ ದಾಖಲೆ ನವೀಕರಣಕ್ಕೂ ಹೊಸ ಮಿತಿ ಅನ್ವಯಿಸುತ್ತದೆ.
ಆದರೆ, ನಿವಾಸ ಇಲಾಖೆಯ ಮುಖ್ಯಸ್ಥರು ಅರ್ಜಿಯನ್ನು ನವೀಕರಿಸುವ ಅಥವಾ ನಿರಾಕರಿಸುವ ವಿವೇಚನೆಯನ್ನು ಹೊಂದಿರುತ್ತಾರೆ. ವೈದ್ಯ, ಇಂಜಿನಿಯರ್, ಸರ್ಕಾರಿ ಸಲಹೆಗಾರ, ನ್ಯಾಯಾಧೀಶರು, ಪ್ರಾಸಿಕ್ಯೂಟರ್, ಕಾನೂನು ಸಂಶೋಧಕರು, ಕಾನೂನು ಸಂಶೋಧಕರು, ಫಾರ್ಮಸಿಸ್ಟ್, ಪ್ರಾಧ್ಯಾಪಕರು, ಪ್ರಾಂಶುಪಾಲರು, ಶಿಕ್ಷಣ ನಿರ್ದೇಶಕರು, ಶಿಕ್ಷಕರು, ಮಸೀದಿ ಇಮಾಮ್, ಖತೀಬ್, ಆಝಾನ್ ಕರೆ ನೀಡುವವರು, ಗ್ರಂಥಪಾಲಕರು, ಶುಶ್ರೂಷಾ ಅಥಾರಿಟಿ ಸ್ಟಾಫ್, ದಾದಿಯರು, ಮೆಡಿಕಲ್ ತಂತ್ರಜ್ಞರು, ಪೈಲಟ್, ಸೇರಿದಂತೆ ಹದಿನಾಲ್ಕು ಹುದ್ದೆಗಳಿಗೆ ಸಂಬಳ ಮಿತಿಯಿಂದ ವಿನಾಯಿತಿ ನೀಡಲಾಗಿದೆ.
ಇದಲ್ಲದೆ, ಕುರ್ಆನ್ ಕಂಠಪಾಠ ಮಾಡಿದವರು, ಸಾಮಾಜಿಕ ಕಾರ್ಯಕರ್ತರು, ಸರ್ಕಾರಿ ವಲಯದ ಮನಶ್ಶಾಸ್ತ್ರಜ್ಞರು, ಪತ್ರಕರ್ತರು, ಕ್ರೀಡಾ ತರಬೇತುದಾರರು, ಕ್ರೀಡಾಪಟುಗಳು ಮತ್ತು ಸ್ಮಶಾನಗಳಲ್ಲಿರುವ ಸಿಬ್ಬಂದಿಗೆ ವಿನಾಯಿತಿ ನೀಡಲಾಗುತ್ತದೆ. ಈ ವಿಭಾಗವರಿಗೆ 500 ದಿನಾರ್ಗಿಂತ ಕಡಿಮೆ ಸಂಬಳ ಇದ್ದರೂ ಕುಟುಂಬವನ್ನು ಕರೆತರ ಬಹುದಾಗಿದೆ.















ಇನ್ನಷ್ಟು ಸುದ್ದಿಗಳು
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ