janadhvani

Kannada Online News Paper

ಮಾಧ್ಯಮ ಭಯೋತ್ಪಾದನೆ ಖಂಡನೀಯ- ದ.ಕ.ಜಿಲ್ಲಾ ಎಸ್ಸೆಸ್ಸೆಫ್

ಮಂಗಳೂರು,ಆಗಸ್ಟ್.20: ಕಪೋಲ ಕಲ್ಪಿತ ವರದಿಗಳನ್ನಾಧರಿಸಿ, ಅಮಾಯಕರಿಗೆ ಉಗ್ರಪಟ್ಟ ಕಟ್ಟಿ ಅಲ್ಪಸಂಖ್ಯಾತ ಮುಸ್ಲಿಮರನ್ನು ಟಾರ್ಗೆಟ್ ಮಾಡುತ್ತಿರುವ ಮಾಧ್ಯಮ ಭಯೋತ್ಪಾದನೆಯನ್ನು ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸುತ್ತಿದೆ.

ಬೆಳ್ತಂಗಡಿಯ ಗೋವಿಂದೂರು ಎಂಬಲ್ಲಿ ತನ್ನ ಪಾಡಿಗೆ ಬದುಕುತ್ತಿದ್ದ ರವೂಫ್ ಎಂಬವರ ವಿರುದ್ಧ ಸುಳ್ಳಾರೋಪ ಹೊರಿಸಿ ದೃಷ್ಯ, ಮುಧ್ರಣ ಮಾಧ್ಯಮಗಳಲ್ಲೂ, ಸಾಮಾಜಿಕ ತಾಣಗಳಲ್ಲೂ ಪೂರ್ವಾಗ್ರಹ ಪೀಡಿತ ವರದಿಗಳನ್ನು ಬಿತ್ತರಿಸಿ ಯುವಕನನ್ನು ತೇಜೋವಧೆಗೊಳಿಸಿರುವುದು ನಿಜಕ್ಕೂ ಖೇದಕರ ಸಂಗತಿಯಾಗಿದೆ. ಒಂದು ಪ್ರತ್ಯೇಕ ಸಮುದಾಯದ ವಿರುದ್ಧ ಈ ರೀತಿಯ ಷಡ್ಯಂತರ ನಡೆಸುವುದು ಮಾಧ್ಯಮ ಧರ್ಮಕ್ಕೆ ಸೂಕ್ತವಲ್ಲ.

ಸಂತ್ರಸ್ತ ಯುವಕನಿಗೆ ನ್ಯಾಯ ಕೊಡಿಸಲು, ಮಾಧ್ಯಮಗೊಳಗಿನ ಭಯೋತ್ಪಾದನಾ ಮನಸ್ಸಿಗೆ ಅಂತ್ಯಹಾಡಲು ಜಿಲ್ಲಾ ವ್ಯಾಪ್ತಿಯಲ್ಲಿ ವ್ಯಾಪಕವಾಗಿ ಆಂದೋಲನ ನಡೆಸಲಾಗುವುದೆಂದು ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಇಬ್ರಾಹಿಂ ಸಖಾಫಿ ಸೆರ್ಕಳ ತಿಳಿಸಿದ್ದಾರೆ.

ವರದಿ:ಎಂ.ಎಸ್.ಬೆರ್ಕಳ

error: Content is protected !! Not allowed copy content from janadhvani.com