ಮಕ್ಕಾ : ಮುಈಸುನ್ನಾ ಮೋರಲ್ ಆಕಾಡಮಿ ವಿದ್ಯಾಸಂಸ್ಥೆ ಹಾವೇರಿ ಇದರ ಸೌದಿ ನ್ಯಾಷ್ನಲ್ ಸಮಿಟ್ ಕಾರ್ಯಕ್ರಮ ಮಸ್ಜಿದುಲ್ ಹರಮ್ ಸಮೀಪದಲ್ಲಿರುವ ಕ್ಲಾಕ್ ಟವರಿನ 4ನೇ ಮಹಡಿಯಲ್ಲಿ ಸಂಸ್ಥೆಯ ಅಧ್ಯಕ್ಷರಾದ ಸಯ್ಯದ್ ಶಹೀರ್ ಅಲ್ ಬುಖಾರಿ ತಂಙಳ್ ರವರ ಸಭಾಧ್ಯಕ್ಷತೆಯಲ್ಲಿ ಜರಗಿತು.
ಕಾರ್ಯಕ್ರಮವನ್ನು ಖ್ಯಾತ ವಾಗ್ಮಿ ಮತ್ತು ಎಸ್.ಎಸ್.ಎಫ್ ರಾಷ್ಟ್ರಿಯ ಪ್ರ.ಕಾರ್ಯದರ್ಶಿ ಡಾ|ಫಾರೂಖ್ ನಈಮಿ ಉದ್ಘಿಟಿಸಿದರು.
ಹಜ್ಜ್ ಕಮಿಟಿ ಸಧಸ್ಯರೂ ಸಂಸ್ಥೆಯ ಸಂಚಾಲಕರೂ ಆಗಿರುವ K.M ಅಬೂಬಕ್ಕರ್ ಸಿದ್ದೀಕ್ ಮೊಂಟ್ಗೋಳಿ ರವರು ಸಂಸ್ಥೆಯ ಭವಿಷ್ಯದ ಯೋಜನೆಳಾದ “ಮುಈನ್ 20-25 ವಿಷನ್” 6 ವರ್ಷಗಳ ಯೋಜನೆಗಳ ಕುರಿತು ಮಾತನಾಡಿದರು.
ತದನಂತರ ಸಯ್ಯದ್ ಶಹೀರ್ ಅಲ್ ಬುಖಾರಿ ತಂಙಳ್ ರವರು ರಾಷ್ಟ್ರೀಯ ಸಮಿತಿಯನ್ನು ಘೋಷಿಸಿದರು.
ಅಧ್ಯಕ್ಷರಾಗಿ ಅಝೀಝ್ ಸಅದಿ ಜುಬೈಲ್, ಪ್ರ.ಕಾರ್ಯದರ್ಶಿಯಾಗಿ ಅಬ್ದುಲ್ ಹಮೀದ್ ತುರೈಬ್ ಆಯ್ಕೆಯಾದರು. K.M ಮುಸ್ತಫಾ ನಈಮಿ ರವರು ಸಂಸ್ಥೆಯ ಪರಿಚಯ ಮಾಡಿ ಅತಿಥಿಗಳನ್ನು ಸ್ವಾಗತಿಸಿ, ವಂದಿಸಿದರು.