ಪ್ರತಿಭಾವಂತ ಪತ್ರಕರ್ತರೂ ಸಹೃದಯದ ಒಡೆಯರೂ ಆಗಿದ್ದರು ಬೈಕ್ ಅಪಘಾತದಲ್ಲಿ ಮರಣಹೊಂದಿದ ಕೇರಳದ ಸಿರಾಜ್ ದಿನಪತ್ರಿಕೆಯ ಕೆ.ಮುಹಮ್ಮದ್ ಬಶೀರ್.
ಶರವೇಗದಲ್ಲಿ ವಾರ್ತೆಗಳನ್ನು ತಯಾರಿಸುವ ಪ್ರತಿಭೆಯಾಗಿತ್ತು ಅವರನ್ನು ಬೇರೆ ಪತ್ರಕರ್ತರಿಗಿಂತ ಭಿನ್ನವಾಗಿಸಿದ್ದು.ಒಬ್ಬ ಸಾಧಾರಣ ವರದಿಗಾರನಾಗಿ ವೃತ್ತಿ ಆರಂಭಿಸಿ, ಸಣ್ಣ ಪ್ರಾಯದಲ್ಲೇ ಕೇರಳ ರಾಜಧಾನಿ ತಿರುವನಂತಪುರಂ ಬ್ಯುರೋದ ನಾಯಕನಾಗಿ ಬಶೀರ್ ಮಾರ್ಪಟ್ಟಿದ್ದು ತನ್ನ ನಿಷ್ಕಳಂಕತೆ ಮತ್ತು ಕಠಿಣ ಪರಿಶ್ರಮದಿಂದ ಮಾತ್ರವಾಗಿತ್ತು.
ರಾಜಕೀಯ ಅಧಿವೇಶನಗಳ ರಿಪೋರ್ಟಿಂಗ್ ಗಳಲ್ಲಿ ಪ್ರತ್ಯೇಕ ರೀತಿಯ ಪ್ರತಿಭೆಯನ್ನು ತೋರಿಸುತ್ತಿದ್ದರು ಮುಹಮ್ಮದ್ ಬಶೀರ್. ಅತಿವೇಗದಲ್ಲಿ ವಾರ್ತೆಗಳನ್ನು ತಯಾರಿಸುವ ಕೌಶಲ್ಯವಾಗಿತ್ತು ಅದರ ಆಧಾರಸ್ಥಂಭ. ಅಧಿವೇಶನಗಳು ನಡೆಯುತ್ತಿರುವಾಗಲೇ ಮೀಡಿಯಾ ರೂಂ ನಲ್ಲಿ ಕುಳಿತು ಲ್ಯಾಪ್‌ಟಾಪ್ ನಲ್ಲಿ ವಾರ್ತೆ ತಯಾರಿಸುವ ಬಶೀರ್, ರಾಜಧಾನಿಯ ಮಾಧ್ಯಮ ಮಿತ್ರರಿಗೆ ಕೌತುಕ ವ್ಯಕ್ತಿಯಾಗಿದ್ದರು. ಹೆಚ್ಚಾಗಿ ದೂರದರ್ಶನಕ್ಕೂ, ಆಲ್ ಇಂಡಿಯಾ ರೇಡಿಯೋ ಗೂ ಅವಲೋಕನಗಳನ್ನು ತಯಾರಿಸಿ ನೀಡುತ್ತಿದ್ದುದು ಬಶೀರ್ ಆಗಿದ್ದರು.
ಸಿರಾಜ್ ದಿನಪತ್ರಿಕೆಯ ತಿರೂರಿನ ಪ್ರಾದೇಶಿಕ ವರದಿಗಾರನಾಗಿ ಮಾಧ್ಯಮ ವೃತ್ತಿಯನ್ನು ಆರಂಭಿಸಿದ ಬಶೀರ್ ನಂತರ ಮಲಪ್ಪುರಂ ಜಿಲ್ಲಾ ವರದಿಗಾರರಾದರು. ನಂತರ ಕೇರಳ ರಾಜಧಾನಿಗೆ ಆಗಮಿಸಿ ಸಣ್ಣ ಪ್ರಾಯದಲ್ಲೇ ಬ್ಯುರೋ ಚೀಫ್ ಆದರು. ಅತ್ಯುತ್ಸಾಹ ಮತ್ತು ಕಠಿಣ ಪರಿಶ್ರಮ ಬಶೀರ್ ರವರ ಮುಖಮುದ್ರೆಯಾಗಿತ್ತು. ಸದಾಸಮಯ ನಗುನಗುತ್ತಾ ಇದ್ದ ಬಶೀರ್ ಕೇರಳ ರಾಜಧಾನಿಯ ಮಾಧ್ಯಮದವರೆಡೆಯಲ್ಲಿ ದೊಡ್ಡ ಮಿತ್ರ ಬಳಗವಿತ್ತು.
ಉತ್ತಮ ಸಂಘಟನಾ ನಾಯಕರಾಗಿದ್ದರು. ಮಾಧ್ಯಮ ಯೂನಿಯನ್ ನಲ್ಲೂ ಪ್ರೆಸ್ ಕ್ಲಬ್ ನಲ್ಲೂ ನಾಯಕರಾಗಿ ಸಂಘಟನಾ ಪ್ರತಿಭೆ ತೋರಿದ ಬಶೀರ್, ಸಿರಾಜ್ ದಿನಪತ್ರಿಕೆಯ ತಿರುವನಂತಪುರಂ ಯೂನಿಟ್ ನ ಅಧಿಕಾರವನ್ನು ವಹಿಸಿಕೊಂಡಿದ್ದರು.ಕೇರಳದ ಮುಖ್ಯಮಂತ್ರಿ ಪಿನರಾಯಿ ವಿಜಯನ್ ಕಂಬನಿ ಮಿಡಿಯುತ್ತಾ ತನ್ನ ಸಂದೇಶದಲ್ಲಿ ಹೇಳಿದಂತೆ, “ಬಶೀರ್ ರವರ ಅಕಾಲಿಕ ಮರಣದಿಂದ ಭವಿಷ್ಯದಲ್ಲಿ ಅತ್ಯುತ್ತಮ ಮಾಧ್ಯಮ ಸಹೋದರನನ್ನಾಗಿದೆ ನಮಗೆ ನಷ್ಟವಾಗಿದ್ದು.”
ಅಲ್ಲಾಹು ಆ ಸಹೋದರನ ಖಬರ್ ಜೀವನವನ್ನು ಸಂತೋಷಗೊಳಿಸಲಿ, ಆಮೀನ್..
-ಇಕ್ಬಾಲ್ ಜಿ.ಕೆ.ಗುಲ್ವಾಡಿ