ರಿಯಾದ್: ಸೌದಿ ಅರೇಬಿಯಾದಲ್ಲಿರುವ ವಿದೇಶೀ ಇಂಜಿನಿಯರ್ಗಳ ಸಂಖ್ಯೆ ಗಣ್ಯವಾಗಿ ಕಡಿಮೆಯಾಗುತ್ತಿದೆ. ಆರು ತಿಂಗಳಲ್ಲಿ 18,749 ವಿದೇಶೀ ಇಂಜಿನಿಯರ್ಗಳು ತಮ್ಮ ಕೆಲಸ ಕಳಕೊಂಡಿದ್ದಾರೆ.
ಸೌದಿಯಲ್ಲಿ ಕೌನ್ಸಿಲ್ ಆಫ್ ಇಂಜಿನಿಯರ್ಸ್ ನೋಂದಣಿ ಇರುವ 1,49,300 ಇಂಜಿನಿಯರ್ಗಳ ಪೈಕಿ ಇದೀಗ 1,30,551 ಮಂದಿ ಮಾತ್ರ ವೃತ್ತಿಯಲ್ಲಿದ್ದಾರೆ. ವಿದೇಶೀ ಮತ್ರು ಸ್ವದೇಶೀಗಳು ಒಟ್ಟಾರೆ ಕೌನ್ಸಿಲ್ ನೋಂದಣಿ ಇರುವ ಇಂಜಿನಿಯರ್ ಗಳ ಸಂಖ್ಯೆ 1,68,098 ಆಗಿದೆ.
ದೇಶದಲ್ಲಿರುವ 2,688 ಇಂಜಿನಿಯರಿಂಗ್ ಆಫೀಸ್ಗಳ ಪೈಕಿ ಈ ಕಾಲಾವಧಿಯಲ್ಲಿ170 ಇಂಜಿನಿಯರಿಂಗ್ ಆಫೀಸ್ಗಳನ್ನು ಬಂದ್ ಮಾಡಲಾಗಿದೆ. ಸ್ವದೇಶೀಕರಣ ಮತ್ತು ಆರ್ಥಿಕ ಅಡಚಣೆಗಳನ್ನು ಅಲ್ಲಿ ಇಂಜಿನಿಯರ್ಗಳು ಎದುರಿಸುತ್ತಿದ್ದಾರೆ.
ಐದು ವರ್ಷಕ್ಕಿಂತ ಕಡಿಮೆ ವೃತ್ತಿ ಪರಿಚಯ ಇರುವ ಇಂಜಿನಿಯರ್ಗಳ ರಿಕ್ರೂಟ್ಮೆಂಟ್ ನಿಲ್ಲಿಸುವ ಕರಾರುಗೆ ವೃತ್ತಿ, ಸಾಮಾಜಿಕ ಅಭಿವೃದ್ಧಿ ಸಚಿವಾಲಯ ಮತ್ತು ಸೌದಿ ಕೌನ್ಸಿಲ್ ಆಫ್ ಇಂಜಿನಿಯರ್ಸ್ ಸಂಸ್ಥೆ ಇತ್ತೀಚೆಗೆ ಸಹಿ ಹಾಕಿತ್ತು. ಹೊಸತಾಗಿ ಸೇರ್ಪಡೆಗೊಳ್ಳುವ ಇಂಜಿನಿಯರ್ ಗಳಿಗೆ ಕೌನ್ಸಿಲ್ ಆಫ್ ಇಂಜಿನಿಯರ್ಸ್ ಮುಖಾಂತರ ಪ್ರೊಫೆಷನಲ್ ಟೆಸ್ಟ್ ಹಾಗೂ ಸಂದರ್ಶನ ಏರ್ಪಡಿಸಲಾಗುತ್ತಿದೆ.















ಇನ್ನಷ್ಟು ಸುದ್ದಿಗಳು
‘ಸಮಸ್ತ’: ಇತಿಹಾಸ ಮತ್ತು ವರ್ತಮಾನದ ನೆನಪುಗಳನ್ನು ಮೆಲುಕು ಹಾಕಿದ ನಾಯಕರು
ಅನಿವಾಸಿಗಳಿಗೆ ಭಾರಿ ಹೊಡೆತ; ಪಾಸ್ಪೋರ್ಟ್ ದರಗಳಲ್ಲಿ ಗಣನೀಯ ಹೆಚ್ಚಳ- ಪರಿಷ್ಕೃತ ಶುಲ್ಕ ಜುಲೈ 1 ರಿಂದ ಜಾರಿ
ಗಲ್ಫ್ ಸೇರಿದಂತೆ ವಿದೇಶದಿಂದ ಭಾರತಕ್ಕೆ ಆಗಮಿಸುವ ಪ್ರಯಾಣಿಕರಿಗೆ ‘ಏರ್ ಸುವಿಧಾ’ ಡಿಕ್ಲರೇಷನ್ ಕಡ್ಡಾಯ
ಪಾಸ್ಪೋರ್ಟ್ ಮತ್ತು ಪೌರತ್ವದ ವಿರೋಧಾಭಾಸ – ಜಗತ್ತಿಗೆ ಭಾರತೀಯ, ಸ್ವದೇಶದಲ್ಲೇ ಪ್ರಶ್ನಾರ್ಹ?
ಆಧಾರ್ ಮತ್ತು ಪಾಸ್ಪೋರ್ಟ್ ಪೌರತ್ವ ದಾಖಲೆಯಲ್ಲ: ಹಾಗಾದ್ರೆ ನಿಜವಾದ ದಾಖಲೆ ಯಾವುದು?
ಹಿರಿಯ ಧಾರ್ಮಿಕ ವಿದ್ವಾಂಸರಾದ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್ ಅಝ್ಹರಿ ವಫಾತ್
ಅಂಜುಮಾನ್ ಸಿರಾಜುಲ್ ಇಸ್ಲಾಂ ಮದ್ರಸ ಮುಕ್ಕ- SBS ನೂತನ ಸಮಿತಿ ಅಸ್ತಿತ್ವಕ್ಕೆ
ರೆಸಿಡೆನ್ಸಿ ನಿಯಮ ತಿದ್ದುಪಡಿ- ವಿದೇಶಿಯರಿಗೆ ಇನ್ನು ಮುಂದೆ ಸ್ಪಾನ್ಸರ್ ರಹಿತವಾಗಿ ವೀಸಾ ಲಭ್ಯ
ಖತಾರ್ ಗ್ಯಾಸ್ ಪ್ಲಾಂಟ್ ಸ್ಫೋಟ: ಭಾರತೀಯರು ಸೇರಿದಂತೆ 13 ಮಂದಿ ಮೃತ್ಯು
ಸಮಸ್ತ ಶತಮಾನೋತ್ಸವ: ಕರ್ನಾಟಕ ರಾಜ್ಯ ಸ್ವಾಗತ ಸಮಿತಿ ಅಸ್ತಿತ್ವಕ್ಕೆ- ರಾಜ್ಯಾದ್ಯಂತ ಭವ್ಯ ಕಾರ್ಯಕ್ರಮಗಳ ರೂಪುರೇಷೆ