ದುಬೈ: ದುಬೈ ಶಾರ್ಜಾ ನಡುವಿನ ಯಾತ್ರಾ ಸಮಯಯನ್ನು ಅತ್ಯಂತ ಕಡಿಮೆಗೊಳಿಸುವ ಹೊಸ ರಸ್ತೆಯನ್ನು ಸಂಚಾರಕ್ಕಾಗಿ ತೆರೆಯಲಾಗಿದೆ. ಶೈಖ್ ಮುಹಮ್ಮದ್ ಬಿನ್ ಝಾಯಿದ್ ರಸ್ತೆ ಮತ್ತು ಎಮಿರೇಟ್ಸ್ ರಸ್ತೆಗಳನ್ನು ಬಂಧಿಸುವ ರೀತಿಯಲ್ಲಿ ನಿರ್ಮಿಸಲಾದ 12 ಕಿ.ಮೀ ಉದ್ದದ ರಸ್ತೆ ಬುಧವಾರ ಉದ್ಘಾಟನೆಗೊಂಡಿದೆ.
ದುಬೈ-ಶಾರ್ಜಾ ಮಾತ್ರವಲ್ಲದೆ ಶೈಖ್ ಮುಹಮ್ಮದ್ ಬಿನ್ ಝಾಯಿದ್ ರಸ್ತೆಯಿಂದ ಶೈಖ್ ಝಾಯಿದ್ ಬಿನ್ ಹಂದಾನ್ ಅಲ್ ನಹ್ಯಾನ್ ರಸ್ತೆಗಿರುವ ದೂರವನ್ನೂ ಇದು ಮಿತಗೊಳಿಸಲಿದೆ. ಪ್ರಸಕ್ತ ಎರಡೂ ರಸ್ತೆಗಳ ಯಾತ್ರಾ ಸಮಯವು ಹನ್ನೊಂದು ನಿಮಿಷಗಳಾಗಿದ್ದು, ಮುಂದೆ ಅದು ನಾಲ್ಕು ನಿಮಿಷಗಳಾಗಿ ಮಾರ್ಪಡಲಿದೆ.
ಹೊಸ ರಸ್ತೆ ಮೂಲಕ ಗಂಟೆಗೆ 6000 ವಾಹನಗಳಂತೆ ಸಂಚರಿಸಬಹುದಾಗಿದೆ. ಇದು ಶೈಖ್ ಮುಹಮ್ಮದ್ ಬಿನ್ ಝಾಯಿದ್ ರಸ್ತೆಯ ದಟ್ಟಣೆಯನ್ನು ಶೇ.10ರಷ್ಟು ಕಡಿಮೆ ಗೊಳಿಸಲಿದೆ ಎಂದು ರೋಡ್ಸ್ ಆ್ಯಂಡ್ ಟ್ರಾನ್ಸ್ಪೋರ್ಟ್ ಅಥಾರಿಟಿಯ ಚೇರ್ಮನ್ ಮಾತರ್ ಅಲ್ ಥಾಯರ್ ತಿಳಿಸಿದ್ದಾರೆ.
ದ್ವಿಪಥಗಳಲ್ಲಿ ಗಂಟೆಗೆ 12,000 ವಾಹನಗಳು ಒಂದೇ ಸಮಯ ಸಂಚರಿಸಬಹುದಾದ ಈ ರಸ್ತೆಯು ಅಲ್ ಅಂರದಿ- ಅಲ್ ಖವನೀಜ್ ರಸ್ತೆ ಮತ್ತು ಅಲ್ ಅವೀರ್- ರಾಸ್ ಅಲ್ ಖೋರ್ ರಸ್ತೆಗಳಿಗೆ ಸಮಾಂತರ ವಾಗಲಿದೆ.















ಇನ್ನಷ್ಟು ಸುದ್ದಿಗಳು
ದುಬೈ-ಇಸ್ರೇಲ್ ವಿಮಾನದಲ್ಲಿ ಪೈಲಟ್ಗಳ ನಡುವೆ ಸಂಘರ್ಷ : ಸೌದಿಯಲ್ಲಿ ತುರ್ತು ಭೂಸ್ಪರ್ಶ
ಅಣು-ವಿಕಿರಣ ಸೋರಿಕೆಯಾದರೆ ಏನು ಮಾಡಬೇಕು?; ಜಾಗರೂಕತೆಯ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದ CDAA
ಒಮಾನ್:ಕಾರ್ಮಿಕ ಕಾಯ್ದೆ ಉಲ್ಲಂಘನೆ ವಿರುದ್ಧ ಕಠಿಣ ಕ್ರಮ- ಫೀಲ್ಡ್ ತಪಾಸಣೆಗೆ ಮುಂದಾದ ಕಾರ್ಮಿಕ ಸಚಿವಾಲಯ
ರಸ್ತೆ ಬದಿಯ ಪೈಪ್ ಸರಿಪಡಿಸಿದ ಭಾರತೀಯ ಡೆಲಿವರಿ ಯುವಕ – ದುಬೈ ಸರ್ಕಾರದ ಗೌರವ
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿ; 73 ನಾಗರಿಕರಿಗೆ ಗಾಯ
ಹಾರ್ಮುಜ್ ತೆರೆಯುವುದಕ್ಕೆ ಆದ್ಯತೆ; ಬಿಕ್ಕಟ್ಟು ಮುಂದುವರಿದರೆ ಕೈಗಾರಿಕಾ ದುರಂತ- ಕತಾರ್
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ