ಕುವೈತ್ ಸಿಟಿ: ವಿದೇಶೀಯರ ಸಿವಿಲ್ ಐಡಿ ಕಾರ್ಡ್ಗಳಿಗೆ ಸಂಬಂಧಿಸಿದ ಸೇವೆಗಳಿಗೆ ಅತ್ಯಾಧುನಿಕ ತಂತ್ರಜ್ಞಾನವನ್ನು ಏರ್ಪಡಿಸಲಾಗುತ್ತಿದೆ. ಎಲ್ಲಾ ಗವರ್ನರೇಟ್ಗಳಲ್ಲೂ ವಿದೇಶೀಯರಿಗಾಗಿ ಮಾತ್ರ ಕಾರ್ಯಾಚರಿಸುವ ಪ್ರತ್ಯೇಕ ಸೇವಾ ಕೇಂದ್ರಗಳನ್ನು ಸ್ಥಾಪಿಸಲು ಸಿವಿಲ್ ಇನ್ಫಾರ್ಮೇಶನ್ ಅಥಾರಿಟಿ ತೀರ್ಮಾನ ಕೈಗೊಂಡಿದೆ. ಈ ಕುರಿತ ನಿರ್ದೇಶನವನ್ನು ಅದು ವಿತ್ತ ಸಚಿವಾಲಯಕ್ಕೆ ಹಸ್ತಾಂತರ ಮಾಡಿದೆ.
ದೇಶದಲ್ಲಿರುವ 33 ಲಕ್ಷ ವಿದೇಶೀಯರ ವಿವರಗಳನ್ನು ದಾಖಲಿಸಲು ಮತ್ತು ಸಿವಿಲ್ ಐಡಿ ವಿತರಿಸಲು ಪ್ರಸಕ್ತ ಚಲಾವಣೆಯಲ್ಲಿರುವ ಸೌಕರ್ಯ ಪರ್ಯಾಪ್ತವಲ್ಲದ ಹಿನ್ನೆಲೆಯಲ್ಲಿ ಈ ನಡೆ ಎನ್ನಲಾಗಿದೆ. ಸ್ವದೇಶೀಯರ ಸೇವೆಗಾಗಿ ಸ್ಥಾಪಿಸಲಾದ ಸೇವಾ ಕೇಂದ್ರಗಳ ಮಾದರಿಯಲ್ಲಿ ಈ ವಲಯದಲ್ಲಿ ಕಾರ್ಯಾಚರಿಸಲು ಪ್ರಾಪ್ತರಾದ ಖಾಸಗಿ ಸ್ಥಾಪನೆಗಳನ್ನು ಹೊರ ಕೆಲಸಗಳಿಗಾಗಿ ಒಪ್ಪಂದದ ಆಧಾರದಲ್ಲಿ ನೇಮಕಗೊಳಿಸಲಾಗುವುದು.
ಸಿವಿಲ್ ಇನ್ಫಾರ್ಮೇಶನ್ ಅಥಾರಿಟಿಯ ಕಂಪ್ಯೂಟರ್ ಮೂಲಕ ಈ ಕೇಂದ್ರಗಳನ್ನು ಬಂಧಿಸಲಾಗುವುದು. ವ್ಯಕ್ತಿಗಳ ಖಾಸಗಿ ವಿವರಗಳನ್ನು ಕಾಪಾಡುವ ರೀತಿಯಲ್ಲಿ ಇದು ಕಾರ್ಯಾಚರಿಸಲಿದೆ. ಅದೇ ಸಮಯ ಸಿವಿಲ್ ಐಡಿ ಕಾರ್ಡ್ಗಳಿಗೆ ಸಾಧಾರಣವಾಗಿ ಪಡೆಯಲಾಗುತ್ತಿದ್ದ ಶುಲ್ಕದ ಹೊರತಾಗಿ ಹೆಚ್ಚುವರಿ ಸೇವಾ ಶುಲ್ಕ ಪಡೆಯಲಾಗುವುದು.















ಇನ್ನಷ್ಟು ಸುದ್ದಿಗಳು
ಜಿಸಿಸಿ: ಮಾದಕ ಜಾಲದ ವಿರುದ್ಧ ಮತ್ತಷ್ಟು ಕಠಿಣ ನಿಯಮ- ಮರಣದಂಡನೆ ಶಿಕ್ಷೆ
ಮಕ್ಕಾದಲ್ಲಿ ಹಜ್ ನಿಯಮ ಉಲ್ಲಂಘನೆ: ನೂರಾರು ವಿದೇಶಿಯರ ಬಂಧನ
ಯುಎಇ: ವೈಯಕ್ತಿಕ ವಾಟ್ಸಾಪ್ ಚಾಟ್ ಮತ್ತು ಫಾರ್ವರ್ಡ್ಗಳಿಗೂ ಸೈಬರ್ ಕಾನೂನು ಅನ್ವಯ
ಸೌದಿ: ಪಾರ್ಕ್ನಲ್ಲಿ ಆಟವಾಡುತ್ತಿದ್ದಾಗ ವಿದ್ಯುತ್ ಶಾಕ್- ಆರು ವರ್ಷದ ಬಾಲಕ ಮೃತ್ಯು
ಪ್ರಯಾಣಿಕರ ಸಂಕಷ್ಟಕ್ಕೆ ತೆರೆ: ಕುವೈತ್ ವಿಮಾನ ನಿಲ್ದಾಣದ ಕಾರ್ಯಾಚರಣೆ ಪುನಾರಂಭ
ಶುಭ ಸುದ್ದಿ : ಭಾರತ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಲಗೇಜ್ ಮಿತಿ ಹೆಚ್ಚಳ
ಆರು ವಿಭಾಗ ಜನರಿಗೆ ಮಕ್ಕಾ ಪ್ರವೇಶಕ್ಕೆ ಅನುಮತಿ- ಅಬ್ಶೀರ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ
ಶುಭ ಸುದ್ದಿ: ಕತಾರ್ನಲ್ಲಿ ವಿಮಾನ ಸೇವೆಗಳು ಯಥಾಸ್ಥಿತಿಗೆ
ಹಜ್ ಯಾತ್ರಿಕರಿಗೆ ಲಗೇಜ್ ರಹಿತ ಪ್ರಯಾಣ- ಸೌದಿ ಸಚಿವಾಲಯದ ಹೊಸ ಯೋಜನೆ
ಸೌದಿ: ವೀಸಾ ಅವಧಿ ಮುಕ್ತಾಯ- ಸ್ವದೇಶಕ್ಕೆ ಮರಳಲಾಗದೆ ಸಾವಿರಾರು ಮಂದಿ ಸಂಕಷ್ಟದಲ್ಲಿ