ಅಬುಧಾಬಿ: ಯುನೈಟೆಡ್ ಅರಬ್ ಎಮಿರೇಟ್ಸ್ ಸಹಿಷ್ಣುತಾ ವರ್ಷದ ಮೊದಲಾರ್ಧದಲ್ಲಿ, ಯುಎಇಯ ಪ್ರಮುಖ ಆರಾಧನಾ ತಾಣಗಳಲ್ಲಿ ಒಂದಾದ ಶೈಖ್ ಝಾಯಿದ್ ಗ್ರ್ಯಾಂಡ್ ಮಸೀದಿಗೆ 44,80,000 ಜನರು ಭೇಟಿ ನೀಡಿದ್ದಾರೆ.
ಪ್ರಪಂಚದೊಂದಿಗೆ ಸಹನೆ, ಶಾಂತಿ ಮತ್ತು ಸಹೋದರತ್ವದ ಸಂದೇಶವನ್ನು ಹಂಚಿಕೊಂಡ ಈ ಮಸೀದಿಗೆ ಭೇಟಿ ನೀಡಿದ 249 ಸಂದರ್ಶಕರಲ್ಲಿ ವಿಶ್ವದಾದ್ಯಂತದಿಂದ ಬಂದ ಸಂದರ್ಶಕರು ಸೇರಿದ್ದಾರೆ. ಅಂಕಿಅಂಶಗಳ ಪ್ರಕಾರ, 9,67,150 ಜನರು ಪ್ರಾರ್ಥನೆಗಾಗಿ ಭೇಟಿ ನೀಡಿದವರಾಗಿದ್ದಾರೆ.
ಹತ್ತು ದಶಲಕ್ಷಕ್ಕೂ ಹೆಚ್ಚು ಜನರು ಏಷ್ಯಾ ಮೂಲ ದೇಶಗಳಿಂದ ಬಂದವರಾಗಿದ್ದಾರೆ. ಯುರೋಪಿನಿಂದ 6,23,000 ಜನರು ಮಸೀದಿಗೆ ಭೇಟಿ ನೀಡಿದರು. ಉತ್ತರ ಅಮೆರಿಕಾದಿಂದ 95,000, ಆಫ್ರಿಕಾದಿಂದ 53,000, ದಕ್ಷಿಣ ಅಮೆರಿಕದಿಂದ 49,000, ಆಸ್ಟ್ರೇಲಿಯಾದಿಂದ 25,000 ಮತ್ತು ಅಂಟಾರ್ಕ್ಟಿಕಾದಿಂದ 2,178 ಸಂದರ್ಶಕರು ಸೇರಿದ್ದಾರೆ.
ದೇಶಗಳಲ್ಲಿ ಭಾರತೀಯರು ಮುನ್ನಡೆಯಲ್ಲಿದ್ದು, 3,92,246 ಭಾರತೀಯರು ಮಸೀದಿಗೆ ಭೇಟಿ ನೀಡಿದರು. ಚೀನಾ (3,35,530), ರಷ್ಯಾ (1,16,467), ಜರ್ಮನಿ (1,02,285) ಮತ್ತು ಫ್ರಾನ್ಸ್ (74,606) ದೇಶಗಳು ನಂತರದ ಸ್ಥಾನದಲ್ಲಿವೆ. ಹೆಚ್ಚಿನ ಜನರು ಮಾರ್ಚ್ ನಲ್ಲಿ ಮಸೀದಿಗೆ ಭೇಟಿ ನೀಡಲು ಆಯ್ಕೆ ಮಾಡಿದ್ದಾರೆ. ಮಾರ್ಚ್ನಲ್ಲಿ ಮಾತ್ರ 5,11,227 ಜನರು ಮಸೀದಿಗೆ ಹಾಜರಾಗಿದ್ದರು. ಒಟ್ಟು ಸಂದರ್ಶಕರಲ್ಲಿ 31% 46 ವರ್ಷಕ್ಕಿಂತ ಮೇಲ್ಪಟ್ಟವರು. ರಂಝಾನ್ ತಿಂಗಳಲ್ಲಿ, 890,000 ವಿಶ್ವಾಸಿಗಳು ಇಫ್ತಾರ್ಗೆ ಈ ಮಸೀದಿಗೆ ಬಂದಿದ್ದಾರೆ.















ಇನ್ನಷ್ಟು ಸುದ್ದಿಗಳು
ದುಬೈ-ಇಸ್ರೇಲ್ ವಿಮಾನದಲ್ಲಿ ಪೈಲಟ್ಗಳ ನಡುವೆ ಸಂಘರ್ಷ : ಸೌದಿಯಲ್ಲಿ ತುರ್ತು ಭೂಸ್ಪರ್ಶ
ಅಣು-ವಿಕಿರಣ ಸೋರಿಕೆಯಾದರೆ ಏನು ಮಾಡಬೇಕು?; ಜಾಗರೂಕತೆಯ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದ CDAA
ಒಮಾನ್:ಕಾರ್ಮಿಕ ಕಾಯ್ದೆ ಉಲ್ಲಂಘನೆ ವಿರುದ್ಧ ಕಠಿಣ ಕ್ರಮ- ಫೀಲ್ಡ್ ತಪಾಸಣೆಗೆ ಮುಂದಾದ ಕಾರ್ಮಿಕ ಸಚಿವಾಲಯ
ರಸ್ತೆ ಬದಿಯ ಪೈಪ್ ಸರಿಪಡಿಸಿದ ಭಾರತೀಯ ಡೆಲಿವರಿ ಯುವಕ – ದುಬೈ ಸರ್ಕಾರದ ಗೌರವ
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿ; 73 ನಾಗರಿಕರಿಗೆ ಗಾಯ
ಹಾರ್ಮುಜ್ ತೆರೆಯುವುದಕ್ಕೆ ಆದ್ಯತೆ; ಬಿಕ್ಕಟ್ಟು ಮುಂದುವರಿದರೆ ಕೈಗಾರಿಕಾ ದುರಂತ- ಕತಾರ್
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ