ಮದೀನಾ: ಪ್ರಸಕ್ತ ವರ್ಷದ ಹಜ್ ನಿರ್ವಹಣೆಗಾಗಿ ವಿಶ್ವದ ವಿವಿಧ ಭಾಗದ ಜನರು ಸೌದಿ ಅರೇಬಿಯಾ ತಲುಪತೊಡಗಿದ್ದಾರೆ. ಪ್ರಥಮ ಹಜ್ ವಿಮಾನವು ಜಿದ್ದಾಗೆ ತಲುಪಿದ್ದು, ಬಾಂಗ್ಲಾದೇಶದ ಹಜ್ಜಾಜ್ಗಳು ಆ ವಿಮಾನದ ಮೂಲಕ ಬಂದಿಳಿದ್ದಾರೆ. ಭಾರತೀಯರ ಪ್ರಥಮ ಹಜ್ ವಿಮಾನವು ಮದೀನಾ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದು, ಸೌದಿ ಸಮಯ ಮುಂಜಾನೆ 3:15ಕ್ಕೆ ಇಳಿದ ವಿಮಾನದಲ್ಲಿ ದೆಹಲಿಯಿಂದ 420 ಹಜ್ಜಾಜ್ಗಳು ಮದೀನಾ ತಲುಪಿದ್ದಾರೆ.

ಭಾರತೀಯ ಅಂಬಾಸಿಡರ್ ಔಸಾಫ್ ಸಈದ್, ಕೌನ್ಸಿಲ್ ಜನರಲ್ ಮುಹಮ್ಮದ್ ನೂರ್ ರಹ್ಮಾನ್ ಶೈಖ್, ಹಜ್ ಕೌನ್ಸಿಲ್ನ ಸಾಬಿರ್, ಭಾರತೀಯ ಹಜ್ ಮಿಷನ್ನ ಮದೀನಾ ಇನ್ ಚಾರ್ಜ್ ಶಿಹಾಬುದ್ದೀನ್ ಮುಂತಾದವರು ಭಾರತೀಯ ಹಜ್ಜಾಜ್ಗಳನ್ನು ಬರಮಾಡಿಕೊಂಡರು.

ಮದೀನಾದ ಕರ್ನಾಟಕ ಕಲ್ಚರಲ್ ಫೌಂಡೇಷನ್(ಕೆಸಿಎಫ್) ಸೇರಿದಂತೆ ವಿವಿಧ ಸಂಘಟನೆಗಳ ಸಾರಥಿಗಳೂ ಈ ಸಂದರ್ಭದಲ್ಲಿ ಹಾಜರಿದ್ದರು.

ಮಸ್ಜಿದುನ್ನಬವೀಯ ಹತ್ತಿರದಲ್ಲಿರುವ ಮರ್ಕಝೀಯಾದ ವಿವಿಧ ಹೊಟೇಲ್ಗಳಲ್ಲಿ ಭಾರತೀಯ ಹಜ್ಜಾಜ್ಗಳಿಗೆ ಸೌಕರ್ಯ ಕಲ್ಪಿಸಲಾಗಿದೆ.


ಭಾರತದ ವಿವಿಧ ಕಡೆಯಿಂದ ಹತ್ತು ವಿಮಾನಗಳು ಗುರುವಾರ ಬಂದಿಳಿದಿದ್ದವು. ದೆಹಲಿ, ಗಯಾ, ಶ್ರೀನಗರ, ಗುವಾಹಟಿ ಮುಂತಾದ ಕಡೆಯಿಂದಲೂ ಹಜ್ಜಾಜ್ಗಳು ಆಗಮಿಸತೊಡಗಿದ್ದಾರೆ.















ಇನ್ನಷ್ಟು ಸುದ್ದಿಗಳು
ದುಬೈ-ಇಸ್ರೇಲ್ ವಿಮಾನದಲ್ಲಿ ಪೈಲಟ್ಗಳ ನಡುವೆ ಸಂಘರ್ಷ : ಸೌದಿಯಲ್ಲಿ ತುರ್ತು ಭೂಸ್ಪರ್ಶ
ಅಣು-ವಿಕಿರಣ ಸೋರಿಕೆಯಾದರೆ ಏನು ಮಾಡಬೇಕು?; ಜಾಗರೂಕತೆಯ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದ CDAA
ಒಮಾನ್:ಕಾರ್ಮಿಕ ಕಾಯ್ದೆ ಉಲ್ಲಂಘನೆ ವಿರುದ್ಧ ಕಠಿಣ ಕ್ರಮ- ಫೀಲ್ಡ್ ತಪಾಸಣೆಗೆ ಮುಂದಾದ ಕಾರ್ಮಿಕ ಸಚಿವಾಲಯ
ರಸ್ತೆ ಬದಿಯ ಪೈಪ್ ಸರಿಪಡಿಸಿದ ಭಾರತೀಯ ಡೆಲಿವರಿ ಯುವಕ – ದುಬೈ ಸರ್ಕಾರದ ಗೌರವ
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿ; 73 ನಾಗರಿಕರಿಗೆ ಗಾಯ
ಹಾರ್ಮುಜ್ ತೆರೆಯುವುದಕ್ಕೆ ಆದ್ಯತೆ; ಬಿಕ್ಕಟ್ಟು ಮುಂದುವರಿದರೆ ಕೈಗಾರಿಕಾ ದುರಂತ- ಕತಾರ್
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ