ಕತಾರ್: ಬೇಸಿಗೆಯ ಉಷ್ಣತೆ ಏರಿರುವ ಕಾರಣ ಏರ್ಪಡಿಸಲಾದ ಮಧ್ಯಾಹ್ನ ವಿಶ್ರಮವು ಪತ್ರಿಕೆ, ಆಹಾರ ವಿತರಣೆ ವಲಯದಲ್ಲಿ ಕೆಲಸ ಮಾಡುವವರಿಗೂ ಅನ್ವಯಿಸುತ್ತದೆ ಎಂದು ಅಧಿಕೃತರು ತಿಳಿಸಿದ್ದಾರೆ. ಕಾನೂನು ಉಲ್ಲಂಘಿಸಿ, ಇಂತಹ ವಲಯದಲ್ಲಿ ಕೆಲಸ ಮಾಡಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕಾರ್ಮಿಕ ಸಚಿವಾಲಯದ ವಕ್ತಾರ ತಿಳಿಸಿದ್ದಾರೆ.
ಜೂನ್ 15ರಿಂದ ಅಲ್ಲಿ ಮಧ್ಯಾಹ್ನ ವಿಶ್ರಾತಿ ಸಮಯವು ಜಾರಿಗೆ ಬಂದಿದೆ. ಆ ಪ್ರಕಾರ ಪೂರ್ವಾಹ್ನ 11:30ಯಿಂದ ಅಪರಾಹ್ನ 3:30ವರೆಗೆ ಹೊರಗೆ ಕೆಲಸ ಮಾಡುವ ಕಾರ್ಮಿಕರಿಗೆ ಬಿಡುವು ನೀಡಬೇಕಾಗುತ್ತದೆ.
ಆದರೆ, ಪತ್ರಿಕೆ ವಿತರಣೆ, ಹೊಟೆಲ್, ಕಫ್ಟೇರಿಯಾ ಮುಂತಾದವುಗಳ ಹೋಂ ಡೆಲಿವರಿ ಕಾರ್ಮಿಕರು ಈ ಸಮಯಗಳಲ್ಲಿ ಕೆಲಸ ಮಾಡುತ್ತಿರುವ ಬಗ್ಗೆ ವಿವಿಧ ಪತ್ರಿಕೆ ಮತ್ತು ಪೋರ್ಟಲ್ ಮೂಲಕ ವರದಿಯಾಗಿದ್ದವು. ಆ ಹಿನ್ನೆಲೆಯಲ್ಲಿ ಲೇಬರ್ ಸೋಶಿಯಲ್ ಅಫೇರ್ಸ್ ಸಚಿವಾಲಯದ ವೃತ್ತಿ ಸುರಕ್ಷಾ ಆರೋಗ್ಯ ವಿಭಾಗದ ಉನ್ನತ ಅಧಿಕಾರಿ ಜಾಬಿರ್ ಅಲಿ ಅಲ್ ಮಾರಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಮಧ್ಯಾಹ್ನ ವಿಶ್ರಾಂತಿ ಸಮಯಕ್ಕೆ ಸಂಬಂಧಿಸಿದಂತೆ ಸಚಿವಾಲಯ ಸುತ್ತೋಲೆ ಹೊರಡಿಸಿದೆ. ಆ ಪ್ರಕಾರ ಎಲ್ಲಾ ಕಾರ್ಮಿಕರಿಗೂ ಇದು ಅನ್ವಯಿಸುತ್ತಿದ್ದು, ಅವರಿಗೆ ಅವಶ್ಯಕವಾದ ನೀರು, ಉಷ್ಣತೆಯಿಂದ ರಕ್ಷಣೆ ನೀಡಬಲ್ಲ ಬಾರ ಕಡಿಮೆ ಇರುವ ವಸ್ತ್ರಗಳನ್ನು ನೀಡಲು ಕಂಪೆನಿಗಳಿಗೆ ಬಾಧ್ಯತೆ ಇದೆ.
ಕಂಪನಿಗಳು ಕಾನೂನು ಪಾಲಿಸುವುದನ್ನು ಖಾತರಿಪಡಿಸಲು ಪ್ರತ್ಯೇಕ ಅಧಿಕಾರಿಗಳನ್ನು ನೇಮಕಗೊಳಿಸಲಾಗಿದೆ. ಅಪರಾಧ ಕಂಡು ಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು.
ತೆರೆದ ಪ್ರದೇಶಗಳಲ್ಲಿ ಕೆಲಸ ಮಾಡುವವರನ್ನು ಕಂಡುಬಂದಲ್ಲಿ ಅವರನ್ನು ಕೆಲಸದಿಂದ ವಿರಾಮ ನೀಡಿ , ಹವಾನಿಯಂತ್ರಿತ ಸ್ಥಳಕ್ಕೆ ವರ್ಗಾವಣೆ ಮಾಡಲಾಗುವುದು. ಅಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿ ಈ ಬಗ್ಗೆ ಸಚಿವಾಲಯದ ವತಿಯಿಂದ ಜಾಗೃತಿ ಮೂಡಿಸಲಾಗುತ್ತಿದೆ.















ಇನ್ನಷ್ಟು ಸುದ್ದಿಗಳು
ದುಬೈ-ಇಸ್ರೇಲ್ ವಿಮಾನದಲ್ಲಿ ಪೈಲಟ್ಗಳ ನಡುವೆ ಸಂಘರ್ಷ : ಸೌದಿಯಲ್ಲಿ ತುರ್ತು ಭೂಸ್ಪರ್ಶ
ಅಣು-ವಿಕಿರಣ ಸೋರಿಕೆಯಾದರೆ ಏನು ಮಾಡಬೇಕು?; ಜಾಗರೂಕತೆಯ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದ CDAA
ಒಮಾನ್:ಕಾರ್ಮಿಕ ಕಾಯ್ದೆ ಉಲ್ಲಂಘನೆ ವಿರುದ್ಧ ಕಠಿಣ ಕ್ರಮ- ಫೀಲ್ಡ್ ತಪಾಸಣೆಗೆ ಮುಂದಾದ ಕಾರ್ಮಿಕ ಸಚಿವಾಲಯ
ರಸ್ತೆ ಬದಿಯ ಪೈಪ್ ಸರಿಪಡಿಸಿದ ಭಾರತೀಯ ಡೆಲಿವರಿ ಯುವಕ – ದುಬೈ ಸರ್ಕಾರದ ಗೌರವ
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿ; 73 ನಾಗರಿಕರಿಗೆ ಗಾಯ
ಹಾರ್ಮುಜ್ ತೆರೆಯುವುದಕ್ಕೆ ಆದ್ಯತೆ; ಬಿಕ್ಕಟ್ಟು ಮುಂದುವರಿದರೆ ಕೈಗಾರಿಕಾ ದುರಂತ- ಕತಾರ್
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ