janadhvani

Kannada Online News Paper

30 ವರ್ಷಗಳಿಂದ ರಾಜ್ಯಸಭೆ ಸದಸ್ಯರಾಗಿದ್ದ ಮಾಜಿ ಪ್ರಧಾನಿ ಈ ಬಾರಿ ಸಂಸತ್ತಿನಿಂದ ಹೊರಗೆ

ನವದೆಹಲಿ: ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ 30 ವರ್ಷಗಳಿಂದ ರಾಜ್ಯಸಭೆ ಸದಸ್ಯರಾಗಿದ್ದರು. ಇದೇ ಮೊದಲ ಬಾರಿಗೆ ಅವರು ಸಂಸತ್ತಿಗೆ ಪ್ರವೇಶಿಸುತ್ತಿಲ್ಲ.

ಜೂನ್ 14 ಕ್ಕೆ ಮನಮೋಹನ್ ಸಿಂಗ್ ಅವರ ರಾಜ್ಯಸಭಾ ಸದಸ್ಯತ್ವ ಅವಧಿ ಮುಕ್ತಾಯವಾಗಿದೆ. ಅಸ್ಸಾಂನಿಂದ ಈ ಹಿಂದೆ ರಾಜ್ಯಸಭೆಗೆ ಆಯ್ಕೆಯಾಗಿದ್ದ ಮನಮೋಹನ್ ಸಿಂಗ್ ಈ ಬಾರಿ ಸಂಸತ್ ನಿಂದ ಹೊರಗುಳಿಯಲಿದ್ದಾರೆ.

ಅಸ್ಸಾಂನಿಂದ ಆಯ್ಕೆಯಾಗಲು ಅಗತ್ಯ ಶಾಸಕರ ಸಂಖ್ಯೆಯನ್ನು ಕಾಂಗ್ರೆಸ್ ಹೊಂದಿಲ್ಲ. ಮೊದಲ ಆದ್ಯತೆಯ 43 ಮತಗಳು ದೊರೆತಲ್ಲಿ ರಾಜ್ಯಸಭೆಗೆ ಪ್ರವೇಶಿಸಬಹುದು. ಆದರೆ, ಅಸ್ಸಾಂನಲ್ಲಿ ಕಾಂಗ್ರೆಸ್ 25 ಶಾಸಕರನ್ನು ಹೊಂದಿದೆ. ಎಐಯುಡಿಎಫ್ ಪಕ್ಷದ 13 ಶಾಸಕರ ಬೆಂಬಲ ಪಡೆದರೂ, ಇನ್ನೂ ಐವರು ಶಾಸಕರ ಕೊರತೆಯಾಗಲಿದೆ.

ಇನ್ನು ಬೇರೆ ರಾಜ್ಯಗಳಿಂದಲೂ ಮನಮೋಹನ್ ಸಿಂಗ್ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಿ ಕಳುಹಿಸಲು ಅವಕಾಶ ಇಲ್ಲವಾಗಿದೆ. ಖಾಲಿ ಇರುವ ರಾಜ್ಯಸಭೆ ಸದಸ್ಯರಲ್ಲಿ ಒಬ್ಬರಿಂದ ರಾಜೀನಾಮೆ ಕೊಡಿಸಿ ಸಿಂಗ್ ಅವರನ್ನು ಆಯ್ಕೆ ಮಾಡಿ ಕಳುಹಿಸುವ ಏಕೈಕ ದಾರಿ ಕಾಂಗ್ರೆಸ್ ಮುಂದಿದೆ. ಕಾಂಗ್ರೆಸ್ ಆಡಳಿತದಲ್ಲಿ ಇರುವ ಪಂಜಾಬ್, ರಾಜಸ್ಥಾನ ಕರ್ನಾಟಕದಲ್ಲಿ ರಾಜ್ಯಸಭೆ ಸದಸ್ಯರ ಹುದ್ದೆಗಳು ಖಾಲಿ ಇಲ್ಲ. ಈ ಕಾರಣಗಳಿಂದ ಮನಮೋಹನ್ ಸಿಂಗ್ ಅವರು ಈ ಬಾರಿ ಸಂಸತ್ ಅಧಿವೇಶನದಲ್ಲಿ ಕಾಣಸಿಗಲ್ಲ ಎಂದು ಹೇಳಲಾಗಿದೆ.

error: Content is protected !! Not allowed copy content from janadhvani.com