ರಿಯಾದ್: ಸೌದಿ ಅರೇಬಿಯಾದಲ್ಲಿ ಮೂರರ ಹರೆಯದ ಮಗುವಿನ ಮೇಲೆ ಬಲಾತ್ಕಾರ ಗೈದ ಆರೋಪದಲ್ಲಿ ಓರ್ವನಿಗೆ ಮರಣದಂಡನೆ ವಿಧಿಸಲಾಗಿದೆ. ಕಳೆದ ಮಂಗಳವಾರ ಬುರೈದಾದಲ್ಲಿ ಸೌದಿ ಪ್ರಜೆಯನ್ನು ಮರಣದಂಡನೆಗೆ ಗುರಿಪಡಿಸಲಾಗಿದ್ದು, ಈ ಬಗ್ಗೆ ಸೌದಿ ಗೃಹ ಖಾತೆ ಸ್ಪಷ್ಟಪಡಿಸಿದೆ.
ಮೂರರ ಹರೆಯದ ಮಗುವನ್ನು ಅಪಹರಿಸಿ, ಬಲಾತ್ಕಾರ ಗೈಯ್ಯಲಾಗಿದೆ ಎನ್ನುವ ಪ್ರಕರಣದಲ್ಲಿ ಅರೋಪಿಯನ್ನು ವಿಚಾರಣೆ ನಡೆಸಿ, ಆರೋಪ ಸಾಬೀತಾಗಿದೆ.
ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಕ್ರಿಮಿನಲ್ ನ್ಯಾಯಾಲಯಕ್ಕೆ ಹಸ್ತಾಂತರಿಸಿ, ಆರೋಪಿಯ ವಿರುದ್ದ ಆರೋಪಪಟ್ಟಿ ತಯಾರಿಸಲಾಗಿತ್ತು.
ಕ್ರಿಮಿನಲ್ ನ್ಯಾಯಾಲಯವು ಆರೋಪಿಗೆ ಮರಣದಂಡನೆ ವಿಧಿಸಿ, ಈ ಕೃತ್ಯವು ಅತ್ಯಂತ ಹೇಯ ಮತ್ತು ಅರಾಜಕತೆ ಉಂಟು ಮಾಡಬಲ್ಲ ಅಮಾನವೀಯ ಕೃತ್ಯವಾಗಿದೆ ಎಂದು ಅಭಿಪ್ರಾಯಿಸಿದೆ.
ಕ್ರಿಮಿನಲ್ ನ್ಯಾಯಾಲಯದ ತೀರ್ಪನ್ನು ಅಪೀಲು ನ್ಯಾಯಾಲಯ ಮತ್ತು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದ್ದು, ಕಾನೂನು ಪ್ರಕಾರ ಶಿಕ್ಷೆ ವಿಧಿಸುವಂತೆ ರಾಜ ಕಲ್ಪನೆ ಪ್ರಕಾರ ಮಂಗಳವಾರ ಬೆಳಗ್ಗೆ ಬುರೈದಾದಲ್ಲಿ ಮರಣದಂಡನೆ ವಿಧಿಸಲಾಯಿತು ಎಂದು ಗೃಹ ಸಚಿವಾಲಯ ತಿಳಿಸಿದೆ.