ಹೌದು! ಈ ವಾರ್ತೆ ಕೇಳಿದಾಕ್ಷಣ ಒಮ್ಮೆಲೇ ತಬ್ಬಿಬ್ಬಾದೆ, ಸುನ್ನತ್ ಜಮಾಅತಿನ ಪ್ರತಿಯೊಂದು ವಿಷಯದಲ್ಲೂ ಮುಂಚೂಣಿಯಲ್ಲಿದ್ದು, ಸದಾ ಬೆನ್ನುಲುಬಾಗಿ ನಿಂತ ಊರಿನ ಹಿರಿಯ ವಿಧ್ವಾಂಸರಿವರು. ತನ್ನ ಪ್ರಾಯವನ್ನು ಲೆಕ್ಕಿಸದೇ 5 ಸಮಯದ ನಮಾಝ್ ಮಸೀದಿಯಲ್ಲೇ ನಿರ್ವಹಿಸುತ್ತಿದ್ದರು.
ಮೊನ್ನೆ ಈದ್ ಮೀಲಾದ್ ದಿನ ಮೌಲೀದ್ ಮುಗಿದು ಮಸೀದಿ ಮೆಟ್ಟಿಲಿನಿಂದ ಅವರ ಕೈ ಹಿಡಿದು ಕೆಳಗಡೆ ಬರುವಾಗ ನನ್ನಲ್ಲೊಂದು ಮುಗುಳ್ನಗೆಯೊಂದಿಗೆ ಹೇಳಿದ ಮಾತು, ನಾನು ಬರುವ ಈದ್ ಮೀಲಾದ್ ಗೆ ಇರುತ್ತೀನೋ ಅಲ್ಲಾ ಇದುವೇ ನನ್ನ ಕೊನೆಯ ಈದ್ ಮೀಲಾದೋ ಅಂದಾಗ, ಇಲ್ಲ ನೀವು ಸದಾ ಕಾಲ ನಮಗೆ ಬೇಕು ಎಂದೆ. ಆಗ ನಗುತ್ತಾ ಮನೆಯ ಕಡೆಗೆ ಹೆಜ್ಜೆಯನ್ನಿಟ್ಟರು.
ಅಲ್ಲಾಹನ ತೀರ್ಮಾನಕ್ಕೆ ತಲೆಬಾಗಲೇ ಬೇಕು ತಾನೇ!!
ಅವರು ನೀಡಿದ ಉಪದೇಶ ಮಾರ್ಗದರ್ಶನವೂ ಸದಾ ಕಾಲ ಹಚ್ಚಹಸುರಾಗಿ ಕಂಗೊಳಿಸಲಿ.
ಮಂದಹಾಸ ಬೀರುವ ಈಮಾನ್ ಪ್ರಜ್ಯೊಲಿಸುವ ಮುಖ ನಮ್ಮಿಂದ ಮರೆಯಾಗಿದ್ದು ನಮಗೆ ತುಂಬಲಾರದ ನಷ್ಟವಾಗಿದೆ.
ಇವರ ಮರಣ ನಮ್ಮೂರನ್ನು ಅನಾಥೆಯನ್ನಾಗಿದೆ.ಅಲ್ಲಾಹನು ನಮ್ಮನ್ನು ಮುಹಮ್ಮದ್ ಹಾಜಿಯನ್ನು ಸ್ವರ್ಗೀಯ ಭವನದಲ್ಲಿ ಒಗ್ಗೂಡಿಸಲಿ ಆಮೀನ್.
-ನೌಶಾ ಪಿ ಉರುವಾಲು ಪದವು