ಕಾಟ್ಟನ್ಕುಡಿ,ಶ್ರೀಲಂಕಾ: ಈಸ್ಟರ್ ಹಬ್ಬದಂದು ನಡೆದ ಭಯೋತ್ಪಾದಕ ದಾಳಿಯ ಪರಿಣಾಮವಾಗಿ ಭಯೋತ್ಪಾದನೆಯ ನಿರ್ಮೂಲನೆಗೆ ಅತ್ಯಂತ ಕಠಿಣ ಕ್ರಮ ಕೈಗೊಂಡ ಶ್ರೀಲಂಕಾ ಸರಕಾರ, ಭಯೋತ್ಪಾದಕ ದಾಳಿಯ ಮುಖ್ಯ ಸೂತ್ರದಾರಿ ಝಹ್ರಾನ್ ಹಾಶಿಮ್ ನೊಂದಿಗೆ ನೇರ ಸಂಪರ್ಕ ಹೊಂದಿರುವ ಸಲಫಿ ನೇತಾರನನ್ನು ಬಂಧಿಸಿರುವುದಾಗಿ ಹೇಳಿಕೊಂಡಿದೆ.
ಭಯೋತ್ಪಾದನೆಗೆ ಪ್ರಚೋದನೆ ನೀಡುವ ಸಲಫಿ, ವಹ್ಹಾಬಿ ಆಶಯವನ್ನು ಶ್ರೀಲಂಕಾದಲ್ಲಿ ಪಸರಿಸಲು ಮುಖ್ಯ ಪಾತ್ರವಹಿಸಿದ 60 ವರ್ಷ ಪ್ರಾಯದ ಮೊಹಮ್ಮದ್ ಅಲಿಯಾರ್ ಎಂಬ ಸಲಫಿ ನೇತಾರನನ್ನು ಪೊಲೀಸರು ಬಂಧಿಸಿರುವುದಾಗಿ ರಾಯಿಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ.
ಝಹ್ರಾನ್ ಹಾಶಿಮಿನ ಹುಟ್ಟೂರು ಕಾಟ್ಟನ್ ಕುಡಿಯ ಸಲಫಿ ಮಸೀದಿ ಹಾಗೂ ಇನ್ನಿತರ ಸಂಸ್ಥೆಯ ಸ್ಥಾಪಕನಾದ ಮೊಹಮ್ಮದ್ ಅಲಿಯಾರ್, ಝಹ್ರಾನ್ ಹಾಶಿಮ್ ನೊಂದಿಗೆ ನೇರ ಸಂಪರ್ಕವನ್ನು ಬೆಳೆಸಿ ಹಣಕಾಸಿನ ವ್ಯವಹಾರ ನಡೆಸಿದ್ದಾನೆಂದು ತನಿಖಾಧಿಕಾರಿಗಳು ಹೇಳಿದ್ದಾರೆ.
ಸೌದಿಯಲ್ಲಿ ವಿದ್ಯಾಭ್ಯಾಸ ಮುಗಿಸಿ ಶ್ರೀಲಂಕಾಕ್ಕೆ ಮರಳಿದ ಮೇಲೆ ಅಲಿಯಾರ್ ತನ್ನೆಲ್ಲಾ ಸಮಯವನ್ನು ಸಲಫಿಸಂ ಪ್ರಚಾರಕ್ಕಾಗಿ ವಿನಿಯೋಗಿಸಿದ್ದಾನೆ. ಸೌದಿ ಅರೇಬಿಯಾದ ವಹ್ಹಾಬಿ ನೇತಾರರೂಂದಿಗಿದ್ದ ಅಲಿಯಾರಿನ ಸಂಪರ್ಕವು ಝಹ್ರಾನ್ ನನ್ನು ಐಎಸ್ ಗೆ ತಲುಪಿಸಿದೆ ಮಾತ್ರವಲ್ಲದೇ ಸೌದಿ ಸಮೇತ ವಿದೇಶ ರಾಜ್ಯಗಳಿಂದ ಭಾರೀ ಹಣಕಾಸಿನ ನೆರವು ಬಂದಿತ್ತೆಂದು ತನಿಖಾಧಿಕಾರಿಗಳು ಸೃಷ್ಟಪಡಿಸಿದ್ದಾರೆ.
250 ಕ್ಕೂ ಮಿಕ್ಕವರ ಸಾವಿಗೆ ಕಾರಣವಾದ ಬಾಂಬ್ ಸ್ಪೋಟದ ಮುಂಚಿತವಾಗಿ ಝಹ್ರಾನ್ ಸಹಿತ ಇತರ ಆತ್ಮಹತ್ಯಾ ದಾಳಿಕೋರರಿಗೆ ಅಲಿಯಾರ್ ಪರಿಶೀಲನಾ ತರಗತಿ ನೀಡಿದ್ದಾಗಿ ತನಿಖೆಯಿಂದ ದೃಢಪಟ್ಟಿದೆ. ಉತ್ತರ ಶ್ರೀಲಂಕಾದ ಹಂಬಂತೋಟ ಎಂಬ ನಗರದಲ್ಲಿ ತರಗತಿ ನೀಡಿದ್ದು ತನಿಖೆಯು ಪ್ರಗತಿಯಲ್ಲಿದೆ ಇನ್ನಷ್ಟು ಸ್ಫೋಟಕ ಮಾಹಿತಿಗಳು ಹೊರಬರಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿದೆ.
ನೇರವಾಗಿ ಅಲಿಯಾರ್ ನನ್ನು ಅಥವಾ ಅವನ ವಕೀಲರನ್ನು ಸಂಪರ್ಕಿಸಲು ರಾಯಿಟರ್ಸ್ ಸುದ್ದಿ ಸಂಸ್ಥೆಗೆ ಸಾಧ್ಯವಾಗಿಲ್ಲ. ಅವನ ವಿರುದ್ಧ ಯಾವ ರೀತಿಯ ಕೇಸು ದಾಖಲಾಗಿದೆ ಎಂಬ ಮಾಹಿತಿ ಇದುವರೆಗೂ ಪೊಲೀಸರು ಬಹಿರಂಗ ಪಡಿಸಿಲ್ಲ.
ಅಲಿಯಾರಿನ ಸಂಸ್ಥೆಯಾಗಿರುವ ಸೆಂಟರ್ ಫಾರ್ ಗೈಡೆನ್ಸ್ ನಿಂದ ದೊರೆತ ತರಬೇತಿ ಹಾಗೂ ಅಲ್ಲಿನ ಗ್ರಂಥಾಲಯದಿಂದ ಲಭಿಸಿದ ವಹ್ಹಾಬಿಸಮ್ ಕುರಿತ ಪುಸ್ತಕವನ್ನು ಓದಿ ಝಹ್ರಾನ್ ಭಯೋತ್ಪಾದಕನಾಗಿದ್ದ. ಝಹ್ರಾನ್ ನಂಥವರನ್ನು ಭಯೋತ್ಪಾದಕರನ್ನಾಗಿಸಲು ಪ್ರಚೋದಿಸಿದ ವಹ್ಹಾಬಿ, ಸಲಫಿ ಪಂಥವನ್ನು ಶ್ರೀಲಂಕಾದಿಂದ ಸಂಪೂರ್ಣವಾಗಿ ನಿರ್ನಾಮಗೊಳಿಸಿ, ಭಯೋತ್ಪಾದನಾ ಮುಕ್ತ ಶ್ರೀಲಂಕಾ ವನ್ನಾಗಿ ಮಾರ್ಪಡಿಸಲು ಪಣತೊಟ್ಟಿದ್ದೇವೆ ಎಂದು ಪೊಲೀಸ್ ತನಿಖಾಧಿಕಾರಿಗಳು ಘೋಷಿಸಿದ್ದಾರೆ.
ಮೂಲ : ಸಿರಾಜ್ ಡೈಲಿ
ಕನ್ನಡಕ್ಕೆ : ಡಿ.ಎ.ಮುಹಮ್ಮದ್ ಅಶ್ರಫ್ ಕೊಡಂಗಾಯಿ