janadhvani

Kannada Online News Paper

ಧರ್ಮ ಕ್ರಾಂತಿಯ ರಣಕಹಳೆ ಎಸ್ಸೆಸ್ಸೆಫ್ ಗೆ 46 ರ ಹುಟ್ಟು ಹಬ್ಬದ ಸಂಭ್ರಮ

✍:- ಕೆ.ಎಂ ಇರ್ಶಾದ್ ಪಕ್ಷಿಕೆರೆ.
(ಪ್ರ.ಕಾರ್ಯದರ್ಶಿ ಕೆ.ಸಿ.ಎಫ್ ಅಲ್ ಹಸ್ಸಾ ಸೆಕ್ಟರ್)

ಭಾರತೀಯ ಸುನ್ನೀ ಮುಸಲ್ಮಾನರ ಅದ್ವಿತೀಯ ಶಿಸ್ತಿನ ಸಂಘಟನೆ, ಧಾರ್ಮಿಕತೆಯ ನೆಲೆ , ಸ್ಪೂರ್ತಿಯ ಸೆಲೆ, ತಾತ್ವಿಕ-ಸಾತ್ವಿಕ ಪರಂಪರೆಯ ಕೊಂಡಿಯಾಗಿರುವ ಎಸ್ಸೆಸ್ಸೆಫ್ ಗೆ ಇಂದು 46 ಸಂವತ್ಸರ ತುಂಬಿದ ಸಂಭ್ರಮದ ದಿನ, ಸುನ್ನೀ ಮುಸಲ್ಮಾನರಿಗೆ ಸಂತಸದ ಸುದಿನ…‌‌‌..‌..

46 ವರ್ಷಗಳ ಮುಂಚೆ 1973 ಎಪ್ರಿಲ್ 29 ಕೇರಳದ ಜಾಮಿಯಾ ನೂರಿಯ್ಯಾ ಪಟ್ಟಿಕ್ಕಾಡ್ ಕಾಲೇಜಿನಲ್ಲಿ ವಿದ್ವತ್ ತೆಜಸ್ಸುಗಳಾದ ಶಂಸುಲ್ ಉಲಮಾ ಇ.ಕೆ. ಉಸ್ತಾದ್, ತಾಜುಲ್ ಉಲಮಾ ಉಳ್ಳಾಲ ತಂಙಳ್, ಇ.ಕೆ ಹಸನ್ ಮುಸ್ಲಿಯಾರ್, ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದ್,ನೂರುಲ್ ಉಲಮಾ ಎಂ.ಎ ಉಸ್ತಾದ್, ಪೊನ್ಮಲ ಉಸ್ತಾದ್, ಸಿ.ಎಂ ಮಡವೂರ್ ವಲಿಯ್ಯ್ ರ.ಅ. ಮುಂತಾದ ಸಾದಾತ್ ಉಲಮಾ ದಿಗ್ಗಜರ ಸಮ್ಮುಖದಲ್ಲಿ ಎಸ್ಸೆಸ್ಸೆಫ್ ಗೆ ರೂಪು ಕೊಡಲಾಯಿತು.

ಅಲ್ಲಿಂದ ಆರಂಭಗೊಂಡಿತು ಧಾರ್ಮಿಕ-ತತ್ವ ಕ್ರಾಂತಿಯ ರಣ ಕಹಳೆ..ಅದು ಕೇರಳಕ್ಕೆ ಮಾತ್ರ ಸೀಮಿತವಾಗದೆ, ಭಾರತದ ಅಷ್ಟ ದಿಕ್ಕುಗಳಲ್ಲಿಯೂ ಅದರ ಬೇರುಗಳು ಚಲಿಸಿ, ಭಾರತಾದ್ಯಂತ ಕವಲೊಡಯಿತು, ಮಾತ್ರವಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲೂ ತನ್ನ.ಘಟಕಗಳನ್ನು ಹೊಂದಿದೆ. ಅದರ ಸ್ಥರಗಳು ಬಹಳ ವ್ಯವಸ್ಥಿತವಾಗಿದೆ. ಶಾಖೆ, ಸೆಕ್ಟರ್, ಡಿವಿಷನ್, ಜಿಲ್ಲೆ, ರಾಜ್ಯ, ರಾಷ್ಟ್ರ, ಎಂಬ 6 ಘಟಕಗಳನ್ನು ಹೊಂದಿದೆ, 12 ವರ್ಷ ಪ್ರಾಯ ತುಂಬಿದ ಸುನ್ನೀ ಯುವಕರಿಗೆ 35 ವರ್ಷದ ತನಕ ಸದಸ್ಯತ್ವವನ್ನು ನೀಡಲಾಗುತ್ತದೆ.

ಸಂಘಟನೆಗೆ ತಾತ್ವಿಕ-ಸಾತ್ವಿಕ ಉಲಮಾ, ದೀರ, ಧೀಮಂತ ಉಮರಾ ನಾಯಕತ್ವವಿದೆ.ಒಳಿತನ್ನು ಭೋದಿಸುವ, ಒಳಿತಿಗೆ ಆಹ್ವಾನಿಸುವ, ಕೆಡುಕನ್ನು ವಿರೋಧಿಸುವ ಒಂದು ಸಮೂಹ ನಿಮ್ಮಲ್ಲಿರಲಿ,ಅವರಾಗಿದ್ದಾರೆ ವಿಜಯಶಾಲಿಗಳು ಎಂಬ ಕುರ್ಆನಿನ ವಾಕ್ಯವನ್ನು ಎತ್ತಿ ಹಿಡಿದು, ಅದಕೊತ್ತು ಕೊಟ್ಟು ಕೆಡುಕಿನ ಜಟಿಲ, ಕುಟಿಲ ಚಕ್ರ ವ್ಯೂಹ ಕ್ಕೆ ಸಿಲುಕಿದ ಯುವ ಸಮೂಹವನ್ನು ಆತ್ಮೀಯತೆ ಎಂಬ ಮಧುವನ್ನು ನೀಡಿ, ಒಳಿತಿನೆಡೆಗೆ ಕೈಹಿಡಿದು ಕೊಂಡೊಯ್ಯತ್ತಿದೆ.

ಕಾಲೇಜುಗಳಲ್ಲಿ ವಿದ್ಯಾರ್ಥಿ ಯುವ ಸಮೂಹ, ಗಾಂಜ, ಅಫೀಮು , ಮಾದಕ ದ್ರವ್ಯಗಳಿಗೆ ಬಲಿಯಾಗುತ್ತಿರುವ ಈ ಕಾಲದಲ್ಲಿ ಕ್ಯಾಂಪಸ್ ಎಸ್ಸೆಸ್ಸೆಫ್ ಎಂಬ ವಿಂಗನ್ನು ರಚಿಸಿ ವಿದ್ಯಾರ್ಥಿ ಮಿತ್ರರನ್ನು ಮಾದಕ ವಸ್ತುಗಳಿಂದ ದೂರವಿರಿಸಿ ಸಜ್ಜನರನ್ನಾಗಿಸುವಲ್ಲಿ ಸಫಲವಾಗುತ್ತಿದೆ.

ಎಸ್ಸೆಸ್ಸೆಫ್ ಗೆ ಸೇರಿದರೆ ಈ ಲೋಕದಲ್ಲಿ ಏನೂ ಲಾಭ ಸಿಗಲಾರದು, ಆದರೆ ಪರಲೋಕದಲ್ಲಿ ಯಶಸ್ವಿಯಾಗಲು ಎಲ್ಲಾ ಮಾರ್ಗಗಳನ್ನು ಎಸ್ಸೆಸ್ಸೆಫ್ ತೋರಿಸಿ ಕೊಡುತ್ತದೆ, ಅದರ ಸದಸ್ಯನಾಗುವುದು ರಾಜಕೀಯದ ಮಂತ್ರಿಯಾಗಲು ಅಲ್ಲಾ, ಅದಕ್ಕೆಲ್ಲಕಿಂತಲೂ ಮಿಗಿಲಾಗಿ ಅಲ್ಲಾಹನ ಒಬ್ಬ ಸಜ್ಜನ ದಾಸನಾಗಲು…
ನಾಯಿ ಕೊಡೆಯಂತೆ ಅಲ್ಲಲ್ಲಿ ತಲೆಯೆತ್ತುತ್ತಿರುವ ನೂತನವಾದದ ಸರ್ವ ಪೊಳ್ಳು ವಾದಗಳನ್ನು ಆದರ್ಶ ಸಮ್ಮೇಳನ, ಸ್ಟೇಜ್, ಪೇಜುಗಳ ಮೂಲಕ ಅನಾವರನಗೊಳಿಸಿ , ಆ ವಾದಗಳನ್ನೆಲ್ಲಾ ಅರಬ್ಬಿ ಸಮುದ್ರಕ್ಕೆ ಎತ್ತೆಸೆಯುತ್ತಾ, ಆದರ್ಶ ವಿಷಯದಲ್ಲಿ ಯಾರೊಂದಿಗೂ ರಾಜಿ ಮಾಡದೆ ಆದರ್ಶ ಡಿಂಡಿಮವನ್ನು ಬಾರಿಸಿ ಮುನ್ನಡೆಯುತ್ತಿದೆ,
ಅಹ್ಲುಸ್ಸುನ್ನಃ ಎಂಬ ಪರಿಶುದ್ಧ ವಾದ ಶೃಂಖಲೆಯನ್ನು ಎಂದೆಂದಿಗೂ ಮುರಿಯದಂತೆ ಅಂತಿಮ ದಿನದ ತನಕ ಉಳಿಸಿ, ಬೆಳೆಸುವ ಎಲ್ಲಾ ರೀತಿಯ ಕಾರ್ಯಾಚರಣೆಗಳನ್ನು ಎಸ್ಸೆಸ್ಸೆಫ್ ಮಾಡುತ್ತಿದೆ,,,,,,,,,
ಧಾರ್ಮಿಕ ಗಂಧಗಾಳಿ ಏನೆಂದರಿವಿಲ್ಲದ ಹಳ್ಳಿ-ಗಲ್ಲಿ ಗಳಲ್ಲಿ ಮಾಸಂಪ್ರತೀ ವೇತನಕೊಟ್ಟು ದಾಯಿಗಳ ಮೂಲಕ ಧಾರ್ಮಿಕತೆಯ ,ಆತ್ಮೀಯತೆಯ ನವ ತಂಗಾಳಿಯನ್ನು ಬೀಸುವಂತೆ ಮಾಡವಲ್ಲಿ ಎಸ್ಸೆಸ್ಸೆಫ್ ಸಫಲವಾಗುತ್ತಿದೆ..‌‌‌
ಎಸ್ಸೆಸ್ಸೆಫ್ ಅದೊಂದು ಅಂತ್ಯವಿಲ್ಲದ ಆತ್ಮೀಯ ತೀರ…
ಇಸ್ಲಾಮಿಕ್ ಮಾಸಗಳಲ್ಲಿ ಬರುವ ವಿಶೇಷ ದಿನಗಳಂದು ತನ್ನ ಕಾರ್ಯಕರ್ತರಿಗೆ, ಊರಿನವರಿಗೆ ಆ ದಿನಗಳ ಮಹತ್ವವನ್ನು ತಿಳಿಯಪಡಿಸಲು ಆತ್ಮೀಯ ಮಜ್ಲಿಸ್ ಗಳನ್ನು ನಡೆಸುತ್ತದೆ,, ರಬಿವುಲ್ ಅವ್ವಲ್ ಮಾಸವಿಡೀ ಕಾರ್ಯಕರ್ತರಿಗೆ ಮೈನವಿರೇಳಿಸುವ ಹುಮ್ಮಸ್ಸು, ಆ ತಿಂಗಳಿಡೀ ಪ್ರವಾದಿ ಪ್ರೇಮಾನುರಾಗ ಎಂಬ ಸಮುದ್ರದಲ್ಲಿ ಮಿಂದೇಳುವಂತೆ ಮಾಡುವ ಹುಬ್ಬುರ್ರಸೂಲ್ ಕ್ಯಾಂಪೈನ್ ಹಮ್ಮಿಕೊಳ್ಳುತ್ತದೆ.‌‌‌
ತನ್ನ ಕಾರ್ಯಕರ್ತರು, ಅಥವ ಕಾರ್ಯಕರ್ತರ ಹೆತ್ತವರು, ಕುಟುಂಬಿಕರು ಯಾರಾದರೂ ಮರಣ ಹೊಂದಿದರೆ ಅವರ ಮನೆಗೆ ಭೇಟಿ ಕೊಟ್ಟು, ಮರಣ ಹೊಂದಿದವರ ಮಗ್ಫಿರತ್ಗಾಗಿ ಖತಮುಲ್ ಕುರ್ಆನ್, ತಹ್ಲೀಲ್ ಮಜ್ಲಿಸುಗಳನ್ನು ಎಸ್ಸೆಸ್ಸೆಫ್ನ ಮೂಲಕ ನಡೆಸಲಾಗುತ್ತದೆ.‌‌‌‌…‌
ಲಕ್ಷಾಂತರ ಕಾರ್ಯಕರ್ತರನ್ನು ಹೊಂದಿರುವ ಎಸ್ಸೆಸ್ಸೆಫ್ ಸಂಘಟನೆಯ ಒಬ್ಬನೆ ಒಬ್ಬನನ್ನು ಕ್ರಿಮಿನಲ್ ಕೇಸಿನಲ್ಲಿ ಇಷ್ಟರವರೆಗೆ ಬಂಧಿಸಲ್ಪಟ್ಟಿಲ್ಲ, ಇದೊಂದೇ ಸಾಕು ಎಸ್ಸೆಸ್ಸೆಫಿನ ಸದಸ್ಯರ ಪಾರದರ್ಶಕದಂತಹ ನಿಷ್ಕಲಂಕತೆ ತಿಳಿಯಲು….‌‌
ಎಸ್ಸೆಸ್ಸೆಫ್ ಕೇವಲ ಧಾರ್ಮಿಕತೆಗೆ ಮಾತ್ರ ಸೀಮಿತವಾಗದೆ ಸಾಮಾಜಿಕ, ಸಾಂಸ್ಕೃತಿಕ, ಸಾಂತ್ವನಿಕವಾಗಿಯೂ ಮುನ್ನಡೆಯುತ್ತಿದೆ,, ಸಾಮಾಜಿಕವಾಗಿ ಸಮುದಾಯಕ್ಕೆನಾದರೂ ತೊಂದರೆ ಉಂಟಾದಾಗ ಕಾನೂನಾತ್ಮಕವಾದ ಹೋರಾಟವನ್ನು ಎಸ್ಸೆಸ್ಸೆಫ್ ಮಾಡುತ್ತಿದೆ…
ಯುವ ಸಮೂಹದಲ್ಲಿ ಅಡಕವಾಗಿರುವ ಪ್ರತಿಭೆಗಳನ್ನು ಪ್ರಕಟಿಸಲು ಎಸ್ಸೆಸ್ಸೆಫ್ ವರ್ಷಂಪ್ರತೀ ಪ್ರತಿಭೋತ್ಸವ ಎಂಬ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದೆ,
ಅದೇ ರೀತಿ ಸಮಾಜದಲ್ಲಿರುವ ಬಡ-ನಿರ್ಗತಿಕರಿಗೆ ಸಹಾಯ ಸಾಂತ್ವನದ ಮೂಲಕ ಆಶಾ ಕಿರಣವಾಗಿದೆ ಎಸ್ಸೆಸ್ಸೆಫ್,,
ದಿನದ 24 ಘಂಟೆಯು ಸಮುದಾಯ ಎಂದು ನಾಟಕ ಮಾಡುವವರು, ಎಸ್ಸೆಸ್ಸೆಫ್ ಸಮುದಾಯಕ್ಕೇನು ಮಾಡಿದೆ ಎಂದು ಕೇಳುವವರು ಒಮ್ಮೆ ಉತ್ತರ ಕರ್ನಾಟಕ ಸುತ್ತಿದರೆ ಅದಕುತ್ತರ ಸಿಗುತ್ತದೆ,, ದೀನೇನೆಂದರಿಯದ ಉತ್ತರ ಕರ್ನಾಟಕದ ಜನತೆಗೆ ಇಹ್ಸಾನ್ ಎಂಬ ವಿಂಗನ್ನು ರಚಿಸಿ ದಾಯಿಗಳ ಮೂಲಕ ಉತ್ತರ ಕರ್ನಾಟಕದೆಲ್ಲೆಡೆ ದೀನಿನ ಮಧುವನ್ನು ಪಸರಿಸಿ ಅವರನ್ನು ಸಚ್ಚಾರಿತ್ರ ಮುಸ್ಲಿಮರನ್ನಾಗಿ ಪರಿವರ್ತಿಸುವಲ್ಲಿ ಎಸ್ಸೆಸ್ಸೆಫ್ ಸಫಲವಾಗಿದೆ.‌..‌
ಈ ರೀತಿಯಾಗಿ ಕಳೆದ 46 ವರ್ಷಗಳಿಂದೀಚೆಗೆ ಧಾರ್ಮಿಕ ಜಾಗೃತಿಯ ರಣ ಕಹಳೆಯನ್ನೂದುತ್ತಾ ಆವೇಶಭರಿತವಾಗಿ, ಯಶಸ್ವಿಯ ಹಾದಿಯತ್ತ ಶರ ವೇಗದಲ್ಲಿ ಎಸ್ಸೆಸ್ಸೆಫ್ ಮುನ್ನುಗ್ಗುತ್ತಿದೆ…‌‌
ಯಾರೇನೇ ಹೇಳಿದರೂ, ಎಷ್ಟೇ ದೂಷಿಸಿದರೂ ಅದ್ಯಾವುದನ್ನು ಲೆಕ್ಕಿಸದೆ ಎಸ್ಸೆಸ್ಸೆಫ್ ಇನ್ನಷ್ಟು, ಮತ್ತಷ್ಟು ಎತ್ತರಕ್ಕೆತ್ತರಕ್ಕೇರುತ್ತಿದೆ‌‌‌.‌
ಅದಕ್ಕೆಲ್ಲಾ ಕಾರಣ ಈ ಸಂಘಟನೆಯನ್ನು ಆಶೀರ್ವದಿಸಿ ಮುನ್ನಡೆಸುತ್ತಿರುವವರು ಸಯ್ಯದ್ ಕುಟುಂಬದ ಅಗ್ರಗಣ್ಯ ತಂಙಳ್ಗಳು, ಜಗದ್ವಿಖ್ಯಾತ ಉಲಮಾ ಶಿರೋಮಣಿಗಳು,,
ಅತ್ಯಾಧುನಿಕ ಭರಾಟೆಯ ನಡುವೆ ಜೀವಿಸುವ ಓ ಗೆಳೆಯರೇ ಇಹ-ಪರ ವಿಜಯಕ್ಕಾಗಿ ಎಸ್ಸೆಸ್ಸೆಫ್ ನೊಂದಿಗೆ ಕೈ ಜೋಡಿಸಿ.‌‌‌‌….

ಅಲ್ಹಂದುಲಿಲ್ಲಾಹ್ ಈ ಮಹನೀಯವಾದ ಸುನ್ನೀ ಚಳವಳಿ ಸಂಘಟನೆಯಲ್ಲಿ ಸದಸ್ಯರಾಗಲು ಅವಕಾಶ ಸಿಕ್ಕಿದ್ದು ನಮ್ಮ ಭಾಗ್ಯ, ಅಲ್ಲಾಹು ನಮ್ಮ ಕಾರ್ಯಾಚರಣೆಯನ್ನು ಸ್ವೀಕರಿಸಲಿ…
Ssf 46 ನೇ ಹುಟ್ಟು ಹಬ್ಬ ದ ಶುಭಾಶಯಗಳು.

error: Content is protected !! Not allowed copy content from janadhvani.com