janadhvani

Kannada Online News Paper

ಕುವೈತ್: ರಸ್ತೆ ಸಂಚಾರ ನಿಯಂತ್ರಣಕ್ಕೆ ಹೊಸ ಕ್ಯಾಮರಾಗಳು

ಕುವೈಟ್ ಸಿಟಿ: ಕುವೈತ್ ‌ನ ಟ್ರಾಫಿಕ್ ನಿಯಂತ್ರಣಕ್ಕಾಗಿ ಹೊಸ ಕ್ಯಾಮರಾಗಳನ್ನು ಸ್ಥಾಪಿಸಲಾಗಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ.

ರಸ್ತೆ ದಟ್ಟಣೆಯನ್ನು ಅರ್ಥಮಾಡಿ ಸಂಚಾರವನ್ನು ಸುಗಮಗೊಳಿಸುವುದು ಈ ಯೊಜನೆಯ ಗುರಿಯಾಗಿದೆ. ಉಲ್ಲಂಘನೆಗಳನ್ನು ಪತ್ತೆಹಚ್ಚಲು ಮೊಬೈಲ್ ಕ್ಯಾಮರಾಗಳನ್ನು ಕೂಡ ಅಳವಡಿಸಲಾಗಿದೆ.

ಅತಿ ವೇಗವನ್ನು ಪತ್ತೆ ಹಚ್ಚುವ ಸಲುವಾಗಿ ಸ್ಥಾಪಿಸಲಾದ ರಡಾರ್ ಕ್ಯಾಮೆರಾಗಳ ಹೊರತಾಗಿ ರಸ್ತೆ ಕಣ್ಗಾವಲಿಗಾಗಿ ಹೆಚ್ಚಿನ ಕ್ಯಾಮೆರಾಗಳನ್ನು ಗೃಹ ಸಚಿವಾಲಯ ಸ್ಥಾಪಿಸಿದೆ. ಕಾರ್ಯಾಚರಣೆಯ ಕೊಠಡಿಯೊಂದಿಗೆ ಬಂಧಿಸಲಾದ ಕ್ಯಾಮೆರಾಗಳನ್ನು ಬಳಸಿಕೊಂಡು ಏಕಕಾಲದಲ್ಲಿ ಹಲವಾರು ರಸ್ತೆಗಳ ಮೇಲ್ವಿಚಾರಣೆ ನಡೆಸಬಹದು.ರಸ್ತೆ ದಟ್ಟಣೆಯಿಲ್ಲದ ಮಾರ್ಗಗಳಿಗೆ ಸಂಚಾರವನ್ನು ರವಾನೆ ಮಾಡಲು ಈ ಕ್ಯಾಮೆರಾಗಳು ಸಹಾಯಕವಾಗಲಿದೆ.

ಟ್ರಾಫಿಕ್ ಉಲ್ಲಂಘನೆಗಳನ್ನು ಪತ್ತೆ ಹಚ್ಚಲು ಸಾರಿಗೆ ಇಲಾಖೆಯು ಕೆಲವು ಮೊಬೈಲ್ ಕ್ಯಾಮರಾ ಘಟಕಗಳನ್ನು ನಿಯೋಜಿಸಿದೆ. ಹೊಸ ರಸ್ತೆಗಳು ಮತ್ತು ಸೇತುವೆಗಳ ಮೇಲೆ ಇದನ್ನು ಬಳಸಲಾಗುತ್ತದೆ. ಈ ಪ್ರದೇಶಗಳಲ್ಲಿ ಶಾಶ್ವತ ಕ್ಯಾಮರಾವನ್ನು ಸ್ಥಾಪಿಸಲು ಒಪ್ಪಂದ ಮಾಡಿಕೊಂಡ ಕಂಪನಿಗಳ ಕೆಲಸ ಪೂರ್ಣಗೊಳ್ಳುವವರೆಗೆ ಈ ಮೊಬೈಲ್ ಕ್ಯಾಮೆರಾಗಳನ್ನು ಬಳಸಲಾಗುತ್ತದೆ. ಗೃಹ ಸಚಿವಾಲಯದ ಆಪರೇಷನ್ ರೂಮಿಗೂ ಮಾಹಿತಿಯನ್ನು ರವಾನಿಸುವ ಸಾಮರ್ಥ್ಯ ಈ ಮೊಬೈಲ್ ಕ್ಯಾಮೆರಾಗಳಿಗೆ ಇದೆ ಎನ್ನಲಾಗಿದೆ.

error: Content is protected !! Not allowed copy content from janadhvani.com