janadhvani

Kannada Online News Paper

ರಾಹುಲ್ ಗಾಂಧಿ ಸಲ್ಲಿಸಿದ್ದ ನಾಮಪತ್ರ ಸಿಂಧು- ಚು,ಆಯೋಗ

ನವದೆಹಲಿ: ಉತ್ತರಪ್ರದೇಶದ ಆಮೇಥಿಯಿಂದ ಕಾಂಗ್ರೆಸ್​ ಅಧ್ಯಕ್ಷ ರಾಹುಲ್ ಗಾಂಧಿ ಸಲ್ಲಿಸಿದ್ದ ನಾಮಪತ್ರವನ್ನು ಅಮಾನ್ಯ ಮಾಡುವಂತೆ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಸೋಮವಾರ ಜಿಲ್ಲಾ ಮ್ಯಾಜಿಸ್ಟ್ರೇಟ್​ ವಜಾಗೊಳಿಸಿದೆ. ಕೋರ್ಟ್​ ಆದೇಶದ ನಂತರ ಚುನಾವಣಾ ಆಯೋಗ ರಾಹುಲ್ ಗಾಂಧಿ ಅವರ ನಾಮಪತ್ರವನ್ನು ಮಾನ್ಯ ಮಾಡಿದೆ.

ರಾಹುಲ್ ಗಾಂಧಿ ಸಲ್ಲಿಸಿರುವ ಅಫಿಡವಿಟ್​ನಲ್ಲಿ ದೇಶದ ಪೌರತ್ವ  ಹಾಗೂ ಶಿಕ್ಷಣ ಬಗ್ಗೆ ನೀಡಿರುವ ಮಾಹಿತಿ ವಿರೋಧಾಬಾಸದಿಂದ ಕೂಡಿವೆ. ರಾಹುಲ್ ಎರಡು ದೇಶಗಳ ನಾಗರಿಕತ್ವ ಹೊಂದಿದ್ದಾರೆ. ಹೀಗಾಗಿ ಇವರ ನಾಮಪತ್ರವನ್ನು ತಿರಸ್ಕರಿಸಬೇಕು ಎಂದು ಸ್ವತಂತ್ರ ಅಭ್ಯರ್ಥಿ ಧ್ರುವ ರಾಜ್​ ಶನಿವಾರ ದೂರು ಸಲ್ಲಿಸಿದ್ದರು.

ಇಂದು ರಾಹುಲ್​ ಗಾಂಧಿ ಪರ ಕೋರ್ಟ್​ಗೆ ಹಾಜರಾದ ವಕೀಲ ಕೆ.ಸಿ.ಕೌಶಿಕ್​, ರಾಹುಲ್​ ಗಾಂಧಿ ಭಾರತದಲ್ಲೇ ಹುಟ್ಟಿದವರು. ಭಾರತದ ಪಾಸ್​ಪೋರ್ಟ್ ಹೊಂದಿದ್ದಾರೆ. ಅವರು ಯಾವುದೇ ದೇಶದ ನಾಗರಿಕತ್ವ ಹೊಂದಿಲ್ಲ. ಅವರ ಪಾಸ್​ಪೋರ್ಟ್​, ಮತದಾರ ಚೀಟಿ, ಆದಾಯ ತೆರಿಗೆ ಎಲ್ಲವೂ ಇರುವುದು ಭಾರತದಲ್ಲೇ. 1995ರಲ್ಲಿ ರಾಹುಲ್ ಕೇಂಬ್ರಿಡ್ಜ್​ ವಿಶ್ವವಿದ್ಯಾಲಯದಿಂದ ಎಂ.ಫಿಲ್​ ಪದವಿ ಪಡೆದಿದ್ದಾರೆ. ಅದರ ದಾಖಲೆ, ಪ್ರಮಾಣಪತ್ರಗಳನ್ನು ಸಲ್ಲಿಸಿದ್ದೇವೆ ಎಂದು ಹೇಳಿದರು.

error: Content is protected !! Not allowed copy content from janadhvani.com