ಮುಂಬೈ: ಭಾರತದಲ್ಲಿ ಕತರ್ನ ಎರಡನೇ ವೀಸಾ ಸೆಂಟರ್ ಮುಂಬೈನಲ್ಲಿ ಕಾರ್ಯಾರಂಭಿಸಿದೆ. ಎರಡೂ ದೇಶಗಳ ಉನ್ನತ ರಾಜತಾಂತ್ರಿಕ ವ್ಯಕ್ತಿಗಳ ಉಪಸ್ಥಿತಿಯಲ್ಲಿ ಉದ್ಘಾಟನಾ ಸಮಾರಂಭ ಜರುಗಿತು. ಇದು ಭಾರತದಲ್ಲಿ, ಕತಾರ್ ಸ್ಥಾಪಿಸಲು ಉದ್ದೇಶಿಸಿರುವ ಏಳು ವೀಸಾ ಸೇವೆ ಕೇಂದ್ರಗಳ ಪೈಕಿ ಎರಡನೇ ಕೇಂದ್ರವಾಗಿದೆ.
ಭಾರತದಲ್ಲಿನ ಖತರ್ ಕೌನ್ಸಿಲ್ ಜನರಲ್ ಸೈಫ್ ಬಿನ್ ಅಲಿ ಅಲ್ ಮುಹನ್ನದಿ ಮತ್ತು ಕತಾರ್ ವೀಸಾ ಸಪೋರ್ಟ್ ಸರ್ವೀಸ್ ಇಲಾಖೆಯ ನಿರ್ದೇಶಕ ಮೇಜರ್ ಅಬ್ದುಲ್ಲಾ ಅಲ್ ಖಲೀಫಾ ಮುಹನ್ನದಿ ಜಂಟಿಯಾಗಿ ಉದ್ಘಾಟಿಸಿದರು. ಭಾರತೀಯ ವಿದೇಶಾಂಗ ಸಚಿವಾಲಯದ ಪ್ರತಿನಿಧಿಗಳೂ ಉಪಸ್ಥಿತರಿದ್ದರು.
ಚೆನ್ನೈ, ಹೈದರಾಬಾದ್, ಕೊಚ್ಚಿ, ಲಕ್ನೋ, ಕೋಲ್ಕತ್ತಾದಲ್ಲೂ ಮುಂದಿನ ತಿಂಗಳಿನಿಂದ ಕೇಂದ್ರಗಳು ಆರಂಭವಾಗಲಿವೆ. ಕತಾರ್ ಉದ್ಯೋಗ ಹುಡುಕುವವರು ಮತ್ತು ಕಂಪನಿಗಳಿಗೆ ಆರಾಮದಾಯಕವಾದ ರೀತಿಯಲ್ಲಿ ವೀಸಾ ಸೇವಾ ಕೇಂದ್ರಗಳು ಕಾರ್ಯನಿರ್ವಹಿಸಲಿವೆ.
ಕಾರ್ಯವಿಧಾನಗಳನ್ನು ಸುಲಭಗೊಳಿಸುವ ಮತ್ತು ವೀಸಾ ವಂಚನೆಗಳನ್ನು ತಡೆಯುವ ಉದ್ದೇಶಕ್ಕಾಗಿ ಕಳೆದ ವರ್ಷ, ಕತಾರ್ ವೀಸಾ ಕೇಂದ್ರಗಳನ್ನು ಘೋಷಿಸಿತು. ಶ್ರೀಲಂಕಾದ ರಾಜಧಾನಿ ಕೊಲಂಬೊದಲ್ಲಿ ಅಕ್ಟೋಬರ್ ನಲ್ಲಿ ಮೊದಲ ಕೇಂದ್ರ ಪ್ರಾರಂಭಗೊಂಡಿದೆ.